Gruhalakshmi Scheme: ಎಚ್ಚರ, ಗೃಹಲಕ್ಷ್ಮಿ ಹೆಸರಲ್ಲಿ ಹುಟ್ಟಿಕೊಂಡಿವೆ ನಕಲಿ ಆ್ಯಪ್‌ಗಳು
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಮನೆಯೊಡತಿ ಖಾತೆಗೆ ತಿಂಗಳಿಗೆ 2000 ರೂ. ತುಂಬುವ ಈ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಕೆಲವೇ ದಿನಗಳಲ್ಲಿ ಇದರ ಘೋಷಣೆಯಾಗಬಹುದು. ಆದರೆ, ಈಗಾಗಲೇ ಕೆಲವು ಏಜೆನ್ಸಿಗಳು ನಕಲಿ ಅರ್ಜಿಗಳನ್ನು ತುಂಬಿಸಿ 150 ರೂ. ಕಿತ್ತುಕೊಂಡು ವಂಚನೆ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಇದರ ಜತೆಗೆ ಹತ್ತಾರು ನಕಲಿ ಆ್ಯಪ್‌ಗಳು ಕೂಡಾ ಪ್ಲೇ ಸ್ಟೋರ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಬಗ್ಗೆ ಮಹಿಳೆಯರು ಎಚ್ಚರ ಹೊಂದಿರಬೇಕಾಗಿದೆ.
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು (sslc supplementary result 2023) ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ನೋಡಬಹುದಾಗಿದೆ.
ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ ಇಂತಿದೆ; https://karresults.nic.in/first_sl_sup_kar.asp
ಮುಂದಿನ 5 ದಿನಗಳು ಭಾರಿ ಮಳೆ ಎಚ್ಚರಿಕೆ
ರಾಜ್ಯದಲ್ಲಿ 5 ದಿನಗಳು ಕರಾವಳಿ ಸೇರಿದಂತೆ ಮಲೆನಾಡಿನಲ್ಲಿ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ (Weather Report) ಇದೆ. ಕೆಲವು ಜಿಲ್ಲೆಗಳಲ್ಲಿ ವಾತಾವರಣವೂ ಬೆಳಗ್ಗೆ ಬಿಸಿಲಿನಿಂದ ಕೂಡಿದರೆ ಬಳಿಕ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನ ಅಥವಾ ಸಂಜೆ ಹೊತ್ತು ಜಿಟಿ ಜಿಟಿ ಮಳೆಯಾಗಲಿದೆ.
Weather Report : ಮರೆಯಾಗುವ ಸೂರ್ಯ; ಮುಂದಿನ 5 ದಿನಗಳು ಭಾರಿ ಮಳೆ ಎಚ್ಚರಿಕೆ
ಕೆಲವೇ ಕ್ಷಣಗಳಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು (sslc supplementary result 2023)11 ಗಂಟೆಗೆ ಪ್ರಕಟಿಸಲಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ನೋಡಬಹುದಾಗಿದೆ.
ಫಲಿತಾಂಶ ನೋಡಲು ಲಿಂಕ್ : https://karresults.nic.in/