Site icon Vistara News

Karnataka Live News : ದೆಹಲಿಗೆ ಹೋಗಿ ಬರಿಗೈಯಲ್ಲಿ ಬಂದ ಬಿಎಸ್‌ವೈ, ಪ್ರತಿಪಕ್ಷ ನಾಯಕನ ಆಯ್ಕೆ ಇಲ್ಲ

Karnataka Live News Updates
Deepa S

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮುಕ್ತ ವಿವಿ ಗೌರವ ಡಾಕ್ಟರೇಟ್‌

ಕರ್ನಾಟಕ ರಾಜ್ಯ ಮುಕ್ತ ವಿವಿಯ (Karnataka State Open University) 18ನೇ ವಾರ್ಷಿಕ ಘಟಿಕೋತ್ಸವ (convocation) ಮೈಸೂರಿನಲ್ಲಿ ನಡೆದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌ ನೀಡಲಾಗಿದೆ. ಬೆಂಗಳೂರಿನ ಶ್ರೀ ಲಕ್ಷ್ಮೀ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ ಸಂಸ್ಥಾಪಕ ಮುಖ್ಯಸ್ಥ ಎನ್‌.ರಾಮಚಂದ್ರಯ್ಯರಿಗೆ ವೈದ್ಯಕೀಯ ಹಾಗೂ ಆಕ್ಸಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಷನ್‌ ಮುಖ್ಯಸ್ಥ ವೆಂಕಟ ಲಕ್ಷ್ಮೀ ನರಸಿಂಹ ರಾಜುರಿಗೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಲಾಗಿದೆ.

KSOU Convocation : 64ರ ಅರ್ಧನಾರಿಗೆ ಸಂಸ್ಕೃತದಲ್ಲಿ ಚಿನ್ನ; ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮುಕ್ತ ವಿವಿ ಗೌರವ ಡಾಕ್ಟರೇಟ್‌
Deepa S

ಕೆರೆಗೆ ಬಿದ್ದ ಮಕ್ಕಳು, ರಕ್ಷಣೆ ಮಾಡಲು ಹೋದ ತಾಯಿ ನೀರುಪಾಲು

ಈಜು ಬಾರದ ತನ್ನಿಬ್ಬರು ಮಕ್ಕಳನ್ನು ರಕ್ಷಿಸಲು ಹೋದ ತಾಯಿ ನೀರುಪಾಲಾಗಿದ್ದಾರೆ. ತುಮಕೂರಿನ ಶಿರಾ ತಾಲೂಕಿನ ರತ್ನಸಂದ್ರ ಗ್ರಾಮದ ಕೆರೆಯಲ್ಲಿ (Drown in lake) ಘಟನೆ ನಡೆದಿದೆ. ಮನು ಎಂಬುವವರು‌ ಮಕ್ಕಳಿಬ್ಬರನ್ನು ಕರೆದುಕೊಂಡು ಬಟ್ಟೆ ತೊಳೆಯಲೆಂದು ಕೆರೆ ಬಳಿ ಹೋಗಿದ್ದಾರೆ.

Drown in lake : ಆಟವಾಡುತ್ತಾ ಕಾಲು ಜಾರಿ ಕೆರೆಗೆ ಬಿದ್ದ ಮಕ್ಕಳು; ರಕ್ಷಣೆ ಮಾಡಲು ಹೋದ ತಾಯಿ ನೀರುಪಾಲು
Adarsha Anche

BS Yediyurappa : ರಾತ್ರಿ 9 ಗಂಟೆಗೆ ಪ್ರತಿಪಕ್ಷ ನಾಯಕನ ಘೋಷಣೆ? ಅಮಿತ್‌ ಶಾ ಮನೆಯಲ್ಲಿ ಸಭೆ, ಬಿಎಸ್‌ವೈ ಭಾಗಿ

ಜೂನ್‌ 3ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಬಿಜೆಪಿಯಿಂದ ಇನ್ನೂ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿಲ್ಲ. ಈ ಸಂಬಂಧ ರಾತ್ರಿ 8 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮನೆಯಲ್ಲಿ ಸಭೆ ನಡೆಯಲಿದ್ದು, ಬಿ.ಎಸ್.‌ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.

BS Yediyurappa : ರಾತ್ರಿ 9 ಗಂಟೆಗೆ ಪ್ರತಿಪಕ್ಷ ನಾಯಕನ ಘೋಷಣೆ? ಅಮಿತ್‌ ಶಾ ಮನೆಯಲ್ಲಿ ಸಭೆ, ಬಿಎಸ್‌ವೈ ಭಾಗಿ

Deepa S

24 ನವಜಾತ ಶಿಶುಗಳಿಂದ ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್

ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಆಗಷ್ಟೇ ಜನಿಸಿದ ನವಜಾತ ಶಿಶುಗಳನ್ನು ಐಸಿಯು ವಾರ್ಡ್‌ನಲ್ಲಿ (Short Circuit) ಇರಿಸಲಾಗಿತ್ತು. ಆದರೆ ದಿಢೀರ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಐಸಿಯು ಕೋಣೆಯೊಳೆಗೆ ದಟ್ಟವಾದ ಹೊಗೆ ತುಂಬಿಕೊಂಡಿತ್ತು. ಕೂಡಲೇ ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು‌ ಐಸಿಯುನಲ್ಲಿದ್ದ 24 ನವಜಾತ ಶಿಶುಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.

Short Circuit : 24 ನವಜಾತ ಶಿಶುಗಳಿದ್ದ ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್; ಎಸಿ ಬ್ಲಾಸ್ಟ್‌!
Adarsha Anche

Caste Census : ರಾಜ್ಯದಲ್ಲಿ ಕುರುಬರು ಶೇ. 7ರಷ್ಟಿದ್ದಾರೆ; ಅವರಿಗಾಗಿಯೇ ಜಾತಿ ಗಣತಿ ಮಾಡಿಸಿದೆ: ಸಿಎಂ ಸಿದ್ದರಾಮಯ್ಯ

ಹಿಂದುಳಿದ ವರ್ಗಗಳು ರಾಜ್ಯದಲ್ಲಿ ಎಷ್ಟಿವೆ ಎಂದು ತಿಳಿದುಕೊಳ್ಳುವ ಸಲುವಾಗಿ ನಾನು ಜಾತಿ ಗಣತಿಯನ್ನು ಮಾಡಿಸಿದ್ದಾಗಿತ್ತು. ಈ ಬಾರಿ ನಾನು ವರದಿ ಸ್ವೀಕಾರ ಮಾಡಿಯೇ ತೀರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

Caste Census : ರಾಜ್ಯದಲ್ಲಿ ಕುರುಬರು ಶೇ. 7ರಷ್ಟಿದ್ದಾರೆ; ಅವರಿಗಾಗಿಯೇ ಜಾತಿ ಗಣತಿ ಮಾಡಿಸಿದೆ: ಸಿಎಂ ಸಿದ್ದರಾಮಯ್ಯ
Exit mobile version