Site icon Vistara News

Karnataka University | ಕವಿವಿ ನೀತಿ ವಿರೋಧಿಸಿ ಡಿ.17ರಂದು ರಾಜ್ಯಾದ್ಯಂತ ಕಾಲೇಜು ಬಂದ್

karnataka university collage bandh ಯುಯುಸಿಎಂಎಸ್ ವ್ಯವಸ್ಥೆ

ಧಾರವಾಡ:‌ ಕರ್ನಾಟಕ ವಿಶ್ವವಿದ್ಯಾಲಯ (Karnataka University) ಸಾಕಷ್ಟು ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಸಂಘಟನೆ ಕಾರ್ಯಕರ್ತರು ಡಿ.17 ರಂದು ರಾಜ್ಯಾದ್ಯಂತ ಎಲ್ಲ ಕಾಲೇಜುಗಳಿಗೆ ಬಂದ್ ಕರೆ ಕೊಟ್ಟಿದೆ.

ಧಾರವಾಡದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಘಟನೆ ಮುಖ್ಯಸ್ಥರು ಹಾಗೂ ಕವಿವಿ ಸಿಂಡಿಕೇಟ್ ಸದಸ್ಯ ರವಿ ಮಾಳಗೇರ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಜಾರಿಗೆ ತಂದ ಮೇಲೆ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸಾಕಷ್ಟು ವಿಳಂಬವಾಗುತ್ತಿದೆ. ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್‌ಗೆ ಹೋದರೂ ಅವರಿಗೆ ಇನ್ನೂ ಮೊದಲ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಸಿಕ್ಕಿಲ್ಲ ಎಂದು ಆರೋಪಿಸಿದರು.

ಅಲ್ಲದೆ, ಸೆಮಿಸ್ಟರ್‌ ಫಲಿತಾಂಶ ಸಿಗದ ಕಾರಣಕ್ಕೆ ಕವಿವಿಯಿಂದ ವಿದ್ಯಾರ್ಥಿ ವೇತನಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಹಾಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಯಲ್ಲೂ ಅನ್ಯಾಯ ಆಗುತ್ತಿದ್ದು, ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಡಿ.17ಕ್ಕೆ ಕಾಲೇಜುಗಳ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Vistara Impact | ಬಸ್‌ಗಾಗಿ ಸಿಎಂ ಅಂಕಲ್‌ಗೆ ಮನವಿ ಮಾಡಿದ ಮಕ್ಕಳು; ಮರು ದಿನವೇ ಬಂದ ಬಸ್‌ಗೆ ಸಿಂಗಾರ ಮಾಡಿದ ಗ್ರಾಮಸ್ಥರು

Exit mobile version