ಬೆಂಗಳೂರು: ರಾಜ್ಯಾದ್ಯಂತ ಬುಧವಾರ ಒಣಹವೆ (Dry weather) ಇತ್ತು. ಜತೆಗೆ ಕನಿಷ್ಠ ಉಷ್ಣಾಂಶ ವಿಜಯಪುರದಲ್ಲಿ 10.5 ಡಿ.ಸೆ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಶುಷ್ಕ ವಾತಾವರಣವೇ (Karnataka weather Forecast) ಮೇಲುಗೈ ಸಾಧಿಸಲಿದೆ.
ಬಿಸಿಲ ನಾಡು ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ಕಡಿಮೆ ಆಗಲಿದೆ. ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆ ಇದೆ.
ಪ್ರಮುಖವಾಗಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಕನಿಷ್ಠ ತಾಪಮಾನ ಇಳಿಕೆ ಆಗಲಿದೆ. ಇದರಿಂದಾಗಿ ಶೀತದ ವಾತಾವರಣ ಇರಲಿದೆ.
ಬೆಂಗಳೂರಲ್ಲಿ ಬೆಳಗ್ಗೆ-ಸಂಜೆ ಬೀಸಲಿದೆ ಥಂಡಿ ಗಾಳಿ
ರಾಜಧಾನಿ ಬೆಂಗಳೂರಲ್ಲಿ ಬೆಳಗಿನ ಸಮಯ ಹಾಗೂ ರಾತ್ರಿಯಂದು ಥಂಡಿ ಗಾಳಿ ಬೀಸಲಿದೆ. ಮಧ್ಯಾಹ್ನದ ಹೊತ್ತು ಸೂರ್ಯ ತನ್ನ ಪ್ರಭಾವ ಬೀರಲಿದ್ದಾನೆ. ಕೆಲವೊಮ್ಮೆ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Student Death : ಅಮ್ಮನ ಎದುರೇ ಅವಮಾನ; ಕಾಲೇಜು ಡೀನ್ ಕಿರುಕುಳಕ್ಕೆ ಸ್ಟೂಡೆಂಟ್ ಸೂಸೈಡ್
ವಿಂಟರ್ ಫ್ಯಾಷನ್‌ಗೆ ಮರಳಿದ ಆಕರ್ಷಕ ವುಲ್ಲನ್ ಪೊಂಚೊ
ಆಕರ್ಷಕ ವಿನ್ಯಾಸದ ವುಲ್ಲನ್ ಪೊಂಚೊಗಳು ಈ ವಿಂಟರ್ ಸೀಸನ್‌ಗೆ (Winter Fashion) ಮರು ಎಂಟ್ರಿ ನೀಡಿವೆ. ಧರಿಸಿದಾಗ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಎಲ್ಲಾ ಬಗೆಯ ಉಡುಪಿಗಳಿಗೆ ಮ್ಯಾಚ್ ಆಗುವ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.
ಪೊಂಚೊ ವಿನ್ಯಾಸ
ವಿಭಿನ್ನ ಸ್ಟಿಚ್ಚಿಂಗ್ ಸ್ಟೈಲ್ ಹೊಂದಿರುತ್ತದೆ. ಜತೆಗೆ ತೀರಾ ಕಡಿಮೆ ಸ್ಟಿಚ್ಚಿಂಗ್ ಲೈನ್ ಇದರಲ್ಲಿರುತ್ತದೆ. ಫ್ರೀ ಸ್ಲೀವ್ ಎನ್ನಲಾಗುವ ಈ ಪೊಂಚೊ ಪ್ಯಾಟರ್ನ್‌ನಲ್ಲಿ ಸೈಡ್ ಸ್ಟಿಚ್ಚಿಂಗ್ ಇರುವುದಿಲ್ಲ. ಕೇವಲ ತಲೆಯ ಭಾಗದಿಂದ ಇದನ್ನು ಹಾಕಿಕೊಂಡರಾಯಿತು ಎನ್ನುತ್ತಾರೆ ಪೊಂಚೊ ವಿನ್ಯಾಸಕರು. ಕೆಲವು ತ್ರಿಕೋನ ಆಕಾರದಲ್ಲಿದ್ದರೇ ಮತ್ತೆ ಕೆಲವು ಆಯತಾಕಾರದಲ್ಲಿರುತ್ತವೆ. ಇನ್ನು ಕೆಲವು ಶೇಪ್‌ಲೆಸ್ ಎನ್ನಬಹುದು. ಪೊಂಚೊ ಪ್ರಿಯರು ಆದಷ್ಟೂ ತಮ್ಮ ಪರ್ಸನಾಲಿಟಿ ಹಾಗೂ ಆಕಾರಕ್ಕೆ ತಕ್ಕಂತಹದ್ದನ್ನೇ ಖರೀದಿಸುವುದು ಉತ್ತಮ ಎನ್ನುತ್ತಾರೆ. ಇತ್ತೀಚೆಗೆ ಕೆಲವು ರೆಗ್ಯುಲರ್ ವುಲ್ಲನ್ ಟಾಪ್‌ನಂತೆಯೇ ಕಾಣುತ್ತವೆ. ಕೆಲವು ಪುಲ್‌ಓವರ್‌ನಂತೆ ಕಾಣುತ್ತವೆ. ವಿನ್ಯಾಸದಲ್ಲೂ ಬದಲಾವಣೆಯಾಗಿದೆ. ನಾನಾ ವರ್ಣಗಳಲ್ಲಿ ಮಿಕ್ಸ್ ಮ್ಯಾಚ್ ಆಪ್ಷನ್‌ನಲ್ಲಿ ಲಭ್ಯವಿರುವ ಪೊಂಚೊಗಳ ಫಿನಿಶಿಂಗ್ ಕೂಡ ಅಷ್ಟೇ ಆಕರ್ಷಕವಾಗಿರುತ್ತದೆ. ಬಹುತೇಕ ನೆಕ್‌ಲೈನ್‌ಗಳು ಅಗಲವಾಗಿರುತ್ತವೆ. ಯಾವುದೇ ಬಟನ್ಸ್ ಇರುವುದಿಲ್ಲ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ನೈನಾ ಅರೋರಾ ಧವನ್.
ಹ್ಯಾಂಡ್ ಮೇಡ್ ನಿಟ್ಟೆಡ್ ಪೊಂಚೊ
ವುಲ್ಲನ್‌ನ ಪೊಂಚೊಗಳನ್ನು ಹೆಣೆಯುವವರು ಇದ್ದಾರೆ. ಸ್ಟೆಟ್ಟರ್‌ನಂತೆಯೇ ಇವನ್ನು ಹೆಣೆಯಲಾಗುತ್ತದೆ. ವಿನ್ಯಾಸ ಮಾಡುವ ಉಸಾಬರಿಯಿಲ್ಲ. 80ರ ದಶಕದಲ್ಲಿದ್ದ ಈ ಪೊಂಚೊ ಫ್ಯಾಷನ್ ಇದೀಗ ಮತ್ತೊಮ್ಮೆ ಮರುಕಳಿಸಿರುವುದು ನಾನಾ ಪ್ರಯೋಗಗಳಿಗೆ ದಾರಿ ಮಾಡಿ ಕೊಟ್ಟಿದೆ. ಈ ಹಿಂದೆಯೂ ಒಮ್ಮೆ ಈ ಫ್ಯಾಷನ್ ಕೆಲಕಾಲ ಬಂದಿತ್ತು. ಆದರೆ ಸೀಸನ್ ಬದಲಾದಂತೆ ಮರೆಯಾಗಿತ್ತು. ಇದೀಗ ಮುಂಬರುವ ವಿಂಟರ್‌ಗೆ ಸೂಟ್ ಆಗುವಂತೆ ನಾನಾ ವಿನ್ಯಾಸದವನ್ನು ಹೆಣೆಯುವವರು ಇದ್ದಾರೆ. ಮನೆಯಲ್ಲಿಯೇ ಸ್ವೆಟ್ಟರ್ ಹೆಣೆಯುವವರು ಇದನ್ನು ಹೆಣೆದು ಮಾರಾಟ ಮಾಡಲಾರಂಭಿಸಿದ್ದಾರೆ ಎನ್ನುತ್ತಾರೆ ಡಿಸೈನರ್ ಜಯಾ.
ಟಾಪ್ ಶೈಲಿಯ ಪೊಂಚೊ
ಟಾಪ್ ಶೈಲಿಯವು ಇದೀಗ ಕಾಲಿಟ್ಟಿವೆ. ಒಂದಕ್ಕಿಂತ ಮತ್ತೊಂದು ನೋಡಲು ಆಕರ್ಷಕವಾಗಿವೆ. ಪೊಂಚೊ ಟಾಪ್‌ಗಳು ನೋಡಲು ದೊಗಳೆಯಾಗಿ ಕಂಡರೂ ಫ್ಯಾಷನ್‌ನಲ್ಲಿವೆ.
ಪೊಂಚೊ ಧರಿಸುವ ಫ್ಯಾಷನ್ ಪ್ರಿಯರಿಗಾಗಿ..
- ತೀರಾ ಪ್ಲಂಪಿಯಾಗಿರುವವರಿಗೆ ಸೂಟ್ ಆಗದು.
- ಬಣ್ಣ ಬಣ್ಣದ ಪೊಂಚೊ ಟ್ರೆಂಡ್ನಲ್ಲಿವೆ.
- ಸಾಫ್ಟ್ ವುಲ್ಲನ್ನಲ್ಲೂಇವು ಲಭ್ಯ.
- ಸ್ಲಿಮ್ ಆಗಿರುವವರಿಗೆ ಆಕರ್ಷಕವಾಗಿ ಕಾಣುತ್ತವೆ.
- ಒಂದಕ್ಕಿಂತ ಹೆಚ್ಚು ವರ್ಣ ಇರುವಂತದ್ದನ್ನು ಧರಿಸಿ.
- ಹೆಚ್ಚು ವಾಶ್ ಮಾಡಿದರೆ ಮಾಸುವುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ