ಬೆಂಗಳೂರು: ರಾಜ್ಯಾದ್ಯಂತ ಒಣ ಹವೆ (Dry Weather) ಇದ್ದರೂ, ಪ್ರತ್ಯೇಕ ಕಡೆಗಳಲ್ಲಿ ಚದುರಿದಂತೆ ಹಗುರದಿಂದ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಹಾಗೂ ಮಂಡ್ಯ, ಮೈಸೂರಲ್ಲಿ ಸಣ್ಣ ಮಳೆ ಬೀಳಲಿದೆ. ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸುವ ( Karnataka Weather Forecast) ಸಾಧ್ಯತೆಯಿದೆ.
ಬೆಂಗಳೂರು ಸುತ್ತಮುತ್ತ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಸಾಧ್ಯತೆ ಇದೆ. ನಂತರ ನಿರ್ಮಲ ಆಕಾಶ ಇರಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ.
ಮುಂದಿನ ಎರಡು ದಿನಗಳು ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಇದರಿಂದಾಗಿ ಇನ್ನೆರಡು ದಿನಗಳು ಬಿಸಿಲು ಹೆಚ್ಚಾಗಲಿದ್ದು, ಸೆಕೆ ವಾತಾವರಣ ಇರಲಿದೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೊ ಹರಿಬಿಟ್ಟವನ ಬಂಧನ!
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 29 ಡಿ.ಸೆ -17 ಡಿ.ಸೆ
ಮಂಗಳೂರು: 32 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 31 ಡಿ.ಸೆ – 18 ಡಿ.ಸೆ
ಗದಗ: 32 ಡಿ.ಸೆ – 17 ಡಿ.ಸೆ
ಹೊನ್ನಾವರ: 32 ಡಿ.ಸೆ- 20 ಡಿ.ಸೆ
ಕಲಬುರಗಿ: 32 ಡಿ.ಸೆ – 21 ಡಿ.ಸೆ
ಬೆಳಗಾವಿ: 31 ಡಿ.ಸೆ – 15 ಡಿ.ಸೆ
ಕಾರವಾರ: 33 ಡಿ.ಸೆ – 21 ಡಿ.ಸೆ
ಇದನ್ನೂ ಓದಿ: Ram Mandir: ಅಯೋಧ್ಯೆಯಲ್ಲಿ ರಾಮಮಂದಿರವೇ ಇರ್ಲಿಲ್ಲ; ಅಸಾದುದ್ದೀನ್ ಓವೈಸಿ ವಿವಾದ!
ಮಿಲಾನ್ ಫ್ಯಾಷನ್ ವೀಕ್‌ನಲ್ಲಿ ಡಿಸೈನರ್ ಧ್ರುವ ಕುಮಾರ್ ನ್ಯೂ ಮೆನ್ಸ್ ವೇರ್ ಕಲೆಕ್ಷನ್ಸ್ ಅನಾವರಣ
ಈ ವರ್ಷದ ಮೊದಲ ಅಂತರಾಷ್ಟ್ರೀಯ ಮಟ್ಟದ ಮಿಲಾನ್ ಫ್ಯಾಷನ್ ವೀಕ್‌ನಲ್ಲಿ (Milan Fashion week 2024) ಭಾರತೀಯ ಡಿಸೈನರ್ ಧ್ರುವ ಕುಮಾರ್ ತಮ್ಮ ಎಕ್ಸ್‌ಕ್ಲ್ಯೂಸಿವ್ ಮೆನ್ಸ್ ಕಲೆಕ್ಷನ್‌ಗಳನ್ನು ರನ್‌ವೇಯಲ್ಲಿ ಪ್ರದರ್ಶಿಸಿದರು. ಸ್ಪೋಟ್ರ್ಸ್ ವೇರ್, ಜೆರ್ಸಿ, ಸ್ವೆಟ್ ಶಟ್ರ್ಸ್, ಡೆನೀಮ್ ಹಾಗೂ ಸಿಲ್ಲೋಟ್ಸ್ ಸೇರಿದಂತೆ ನಾನಾ ಬಗೆಯ ಮೆನ್ಸ್ ಫ್ಯಾಷನ್‌ವೇರ್‌ಗಳನ್ನು ಪ್ರದರ್ಶಿಸಿದರು.
ಧ್ರುವ ಕುಮಾರ್ ಡಿಸೈನರ್‌ವೇರ್ಸ್
ಕಳೆದ ಬಾರಿಯೂ ಮಿಲಾನ್ ಫ್ಯಾಷನ್ ವೀಕ್‌ನಲ್ಲಿ ತಮ್ಮ ಎಕ್ಸ್‌ಕ್ಲ್ಯೂಸಿವ್ ಕಲೆಕ್ಷನ್‌ಗಳನ್ನು ಪ್ರದರ್ಶಿಸಿದ್ದ ಧ್ರುವ ಕುಮಾರ್ ಈ ಬಾರಿ ವೇರಬಲ್ ಫ್ಯಾಷನ್‌ವೇರ್‌ಗಳಿಗೆ ಮಹತ್ವ ನೀಡಿದ್ದರು. ಜೊತೆಗೆ ರನ್‌ವೇಯಲ್ಲಿ ಯಶಸ್ವಿ ಪ್ರದರ್ಶನ ನೀಡಿದರು. ಪುರುಷ ಮಾಡೆಲ್‌ಗಳೊಂದಿಗೆ ಮಹಿಳಾ ಮಾಡೆಲ್‌ಗಳು ಕೂಡ ಮೆನ್ಸ್‌ವೇರ್ ಧರಿಸಿ ವಾಕ್ ಮಾಡಿದ್ದು, ರನ್‌ವೇ ವಾಕ್‌ನ ವಿಶೇಷತೆಯಲ್ಲಿ ಸೇರಿತ್ತು. ಮಾಡೆಲ್‌ಗಳು ಧರಿಸಿದ್ದ ಅಟೈರ್‌ಗಳಲ್ಲಿ ಫುಟ್‌ಬಾಲ್ ಸ್ಪೋಟ್ರ್ಸ್ವೇರ್ ಅತ್ಯಧಿಕ ಮೆಚ್ಚುಗೆ ಪಡೆಯಿತು. ನೈಕ್ ಜೊತೆ ಕೊಲಾಬರೇಷನ್ ಮಾಡಿಕೊಂಡಿದ್ದ, ಧ್ರುವ ಕುಮಾರ್ ಅವರ ಕಲೆಕ್ಷನ್‌ನಲ್ಲಿ ಪ್ಯಾಚ್‌ವರ್ಕ್ ಜರ್ಸಿಗಳು, ಶಾರ್ಟ್ ಜಾಕೆಟ್ಸ್, ಹೂಡೆಡ್ ಟೀ ಶರ್ಟ್ಸ್‌ಗಳಿದ್ದವು.
ಹೊಸ ಡಿಸೈನ್‌ಗಳ ಅನಾವರಣ
ಮಿಲಾನ್ ರನ್ ವೇ ಫ್ಯಾಷನ್ ವೀಕ್‌ನಲ್ಲಿ ಮುಂಬರುವ ಸೀಸನ್‌ನಲ್ಲಿ ಟ್ರೆಂಡಿಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಡಿಸೈನರ್‌ವೇರ್‌ಗಳು ಪ್ರದರ್ಶನಗೊಂಡವು. ಅವುಗಳಲ್ಲಿ ನೀಲಿ ವರ್ಣದ ಎಂಬ್ರಾಯ್ಡರಿ ಬ್ಲೇಝರ್ ಫ್ಯಾಷನ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇನ್ನು ಪಾಸ್ಟೆಲ್ ಶೇಡ್‌ನ ಪ್ರಿಂಟೆಡ್ ಜಾಕೆಟ್ ಅದರೊಳಗಿನ ಪ್ಲೀಟೆಡ್ ಶರ್ಟ್ ಬರ್ಮಡಾ ಶಾರ್ಟ್ಸ್‌ನೊಂದಿಗೆ ಧರಿಸಿದ್ದು, ಡಿಫರೆಂಟ್ ಲುಕ್‌ನೊಂದಿಗೆ ಅಲ್ಟ್ರಾ ಮಾಡರ್ನ್ ಯುವಕರನ್ನು ಆಕರ್ಷಿಸಿತು.
ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳ ಅನಾವರಣ
ಸ್ಲೀಕ್ ಸೂಟಿಂಗ್, ಮಾಡರೇಟ್ ಡ್ರೆಸ್ಸಿಂಗ್, ವಿಂಟರ್ ಲೆದರ್ ಲಾಂಗ್ ಕಾರ್ಡಿಗಾನ್ಸ್ ಹೀಗೆ ನಾನಾ ಬಗೆಯ ಚಿತ್ರ-ವಿಚಿತ್ರ ಶೈಲಿಯ ಡಿಸೈನರ್‌ವೇರ್‌ಗಳು ಮೆನ್ಸ್ ಫ್ಯಾಷನ್‌ವೇರ್‌ಗಳಲ್ಲಿ ಪ್ರದರ್ಶನಗೊಂಡು ನೋಡುಗರ ಹುಬ್ಬೇರಿಸಿದವು.
ನಾನ್‌ವೇರಬಲ್ ಕೆಟಗರಿ
ಕೌಬಾಯ್ ಔಟ್‌ಫಿಟ್ಸ್‌ನಿಂದ ಡಿಸ್ಕೋ ಬೆಲ್ಟ್ಸ್, ಸ್ಕರ್ಟ್ ಮಿಕ್ಸ್ ಮ್ಯಾಚ್, ನೋ ಪ್ಯಾಂಟ್ ಕಾನ್ಸೆಪ್ಟ್‌ನ ಡಿಸೈನರ್‌ವೇರ್‌ಗಳು ನಾನ್‌ವೇರಬಲ್ ಕೆಟಗರಿಯಲ್ಲಿ ಪ್ರದರ್ಶನಗೊಂಡವು. ಮೆನ್ಸ್ ಫ್ಯಾಷನ್‌ನ ನಾನಾ ಮಜಲುಗಳನ್ನು ತೆರೆದಿಡುವಲ್ಲಿ ಈ ಬಾರಿಯ ಮಿಲಾನ್ ಫ್ಯಾಷನ್ ವೀಕ್ ಯಶಸ್ವಿಯಾಯಿತು. ಅಚ್ಚರಿ ಮೂಡಿಸುವ ಡಿಸೈನರ್‌ವೇರ್‌ಗಳ ಜೊತೆಗೆ ಮುಂಬರುವ ಹಾಟ್ ಟ್ರೆಂಡ್‌ಗಳನ್ನು ಪರಿಚಯಿಸಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ