Site icon Vistara News

Karnataka Weather : ರಾಜ್ಯದಲ್ಲಿ ನಿರ್ಗಮಿಸಿತೇ ಮಳೆ; ಹೇಗಿರಲಿದೆ ಚಳಿಯ ಅಬ್ಬರ

Dry weather likely to prevail over the State

ಬೆಂಗಳೂರು: ರಾಜ್ಯದಲ್ಲಿ ಮಳೆಯು (Rain News) ನಿರ್ಗಮಿಸಿದ್ದು, ಚಳಿಯು ಪ್ರವೇಶಿಸಿದೆ. ರಾಜ್ಯಾದ್ಯಂತ ಗುರುವಾರದಂದು ಒಣ ಹವೆ (Dry Weather) ಇತ್ತು. ಕಡಿಮೆ ಉಷ್ಣಾಂಶವು 12.5 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.

ಸದ್ಯದ ಮಟ್ಟಿಗೆ ಮಳೆ ಮುನ್ನೆಚ್ಚರಿಕೆಯಾಗಲಿ, ತಾಪಮಾನದ ಮುನ್ಸೂಚನೆ ಇಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಇರಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇನ್ನು ಗಳಿಗೆಗೊಂದು ವಾತಾವರಣವು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ವಾರದ ಹಿಂದೆ ಮಳೆಯು ಅಬ್ಬರಿಸುತ್ತಿತ್ತು. ಇದೀಗ ಏಕಾಏಕಿ ಬಿಸಿಲು, ಗಾಳಿ ಎರಡು ಒಟ್ಟೊಟ್ಟಿಗೆ ದಾಳಿ ಮಾಡುತ್ತಿದೆ. ಸದ್ಯ ದಿಢೀರ್‌ ಹವಾಮಾನ ವೈಪರಿತ್ಯದಿಂದಾಗಿ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.

ಜ.13ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡಲ್ಲಿ ಶುಷ್ಕ ವಾತಾವರಣವೇ ಮೇಲುಗೈ ಸಾಧಿಸಲಿದೆ. ಜತೆಗೆ ಗಾಳಿ ವೇಗವು ಜೋರಾಗಿರಲಿದ್ದು, ಸಂಜೆ ಥಂಡಿ ಗಾಳಿ ಬೀಸಲಿದೆ.

ಇದನ್ನೂ ಓದಿ: Kidnapping Case : ಮಗನ ಕಾಲೇಜು ಸೀಟ್‌ಗಾಗಿ ಅಡ್ಡದಾರಿ ಹಿಡಿದ ಉದ್ಯಮಿ; ಕೊನೆಗೆ ಆತನೇ ಕಿಡ್ನ್ಯಾಪ್‌ ಆದ

Tulsi Plant Care: ಚಳಿಗಾಲದಲ್ಲಿ ತುಳಸಿ ಗಿಡವನ್ನು ಬೆಳೆಸುವುದು ಸವಾಲೇ? ಇಲ್ಲಿವೆ ಟಿಪ್ಸ್!

ತುಳಸಿಯೆಂದರೆ ಹಿಂದೂಗಳಿಗೆ ದೇವರ ಹಾಗೆ. ಮನೆಯ ಮುಂದೆ ತುಳಸಿಯ ಗಿಡವಿಲ್ಲದಿದ್ದರೆ (tulsi plant care), ಮನೆಗೆ ಶೋಭೆಯಲ್ಲ ಎಂಬ ನಂಬಿಕೆ ಹಿಂದೂಗಳದ್ದು. ಅಪಾರ್ಟ್‌ಮೆಂಟೇ ಇರಲಿ, ಜಾಗ ಎಷ್ಟೇ ಚಿಕ್ಕದೇ ಇರಲಿ, ಬಹುತೇಕರು ತಮ್ಮ ಸಣ್ಣ ಬಾಲ್ಕನಿಗಳಲ್ಲಿ ತುಳಸಿಯನ್ನಿಟ್ಟುಕೊಂಡು ನೀರೆರೆದು ಪೊರೆಯುತ್ತಾರೆ. ಪುಟ್ಟ ಕುಂಡಗಳಲ್ಲಿ ತುಳಸಿಯನ್ನು ಬೆಳೆಸುತ್ತಾರೆ. ಕೇವಲ ಧಾರ್ಮಿಕ ನಂಬಿಕೆಗಳಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ತುಳಸಿಗೆ ಸಾಕಷ್ಟು ಮಹತ್ವವಿದೆ. ನಿತ್ಯವೂ ತುಳಸಿಯ ಎಲೆಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲ, ತುಳಸಿಯ ಎಲೆಗಳನ್ನು ಶೀತ, ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಬಂದಾಗಲೂ ಸೇವಿಸುವುದು ನಮಗೆ ತಿಳಿದೇ ಇದೆ. ಇಂತಹ ಸಾಕಷ್ಟು ಉಪಯೋಗಗಳು ತುಳಸಿಯಿಂದ ನಮಗೆ ಇರುವುದರಿಂದ, ಎಲ್ಲರ ಮನೆಗಳಲ್ಲೂ ತುಳಸಿ ಸರ್ವೇಸಾಮಾನ್ಯ.

ಆದರೆ, ತುಳಸಿಯನ್ನು ಬೆಳೆಸುವುದು ಅಂದುಕೊಳ್ಳುವಷ್ಟು (tulsi plant care) ಸುಲಭವಲ್ಲ. ತುಳಸಿ ಎಲ್ಲೆಂದರಲ್ಲಿ ಸುಲಭವಾಗಿ ಬೆಳೆದುಬಿಡುತ್ತದೆ ಅಂದುಕೊಂಡರೆ ಅದು ಸುಳ್ಳು. ತುಳಸಿಯನ್ನು ಬೆಳೆಸುವ ಪ್ರತಿಯೊಬ್ಬರೂ ಈ ಸಮಸ್ಯೆ ಅನುಭವಿಸಿರುತ್ತಾರೆ. ಅದರಲ್ಲೂ ಕುಂಡಗಳಲ್ಲಿ ತುಳಸಿಯನ್ನು ಬೆಳೆಸುವ ಸಂದರ್ಭ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಯಾಕೆಂದರೆ, ತುಳಸಿಗೆ ಸಾಕಷ್ಟು, ಬೆಳಕು ಬೇರಿ ಹರಡಿಕೊಳ್ಳಲು ಜಾಗ ಬೇಕು. ಹಾಗಾಗಿ ಚಳಿಗಾಲದ ಸಂದರ್ಭ, ಬಹುಬೇಗನೆ ತುಳಸಿಯ ಗಿಡ ಸೊರಗಿಬಿಡುತ್ತದೆ. ಕೆಲವೊಮ್ಮೆ ತುಳಸಿ ಚಳಿಗಾಲದಲ್ಲೇ ಸತ್ತು ಹೋಗುತ್ತದೆ. ಸಮಸ್ಯೆಯನ್ನು ನೀವೂ ಅನುಭವಿಸಿರಬಹುದು. ಹಾಗಾದರೆ, ಬನ್ನಿ, ತುಳಸಿ ಚಳಿಗಾಲದಲ್ಲಿ ಹೀಗೆ ಆಗುವುದೇಕೆ ಹಾಗೂ, ಇದನ್ನು ಯಾವ ಸುಲಭ ಕ್ರಮಗಳ ಮೂಲಕ ಸರಿಯಾಗಿ ಬೆಳೆಯುವಂತೆ ಕಾಪಾಡಬಹುದು ಎಂಬುದನ್ನು ನೋಡೋಣ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version