Site icon Vistara News

Karnataka weather : ಮುಂಜಾನೆ ಮಂಜಿನ ಆಟ; ಮಧ್ಯಾಹ್ನ ಚುರುಗುಟ್ಟುವ ಬಿಸಿಲು

Karnataka Weather Forecast

ಬೆಂಗಳೂರು: ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಮುಂಜಾನೆ ದಟ್ಟ ಮಂಜು ಆವರಿಸಿದರೆ, ಮಧ್ಯಾಹ್ನದ ಬಿಸಿಲು ಚುರುಕ್‌ ಎನಿಸುತ್ತೆ. ರಾತ್ರಿಯಾದರೆ ಚಳಿಯು ಗಡ ಗಡ ನಡುಗಿಸುತ್ತಿದೆ. ಇನ್ನೊಂದು ವಾರವೂ ಇದೇ ವಾತಾವರಣ (Dry weather) ಇರಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆಯನ್ನು (Karnataka weather Forecast) ನೀಡಿದೆ.

ಇನ್ನೂ ಬುಧವಾರದಂದು ರಾಜ್ಯಾದ್ಯಂತ ಒಣ ಹವೆ ಇತ್ತು. ವಿಜಯಪುರ ಮತ್ತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಡಿಮೆ ಉಷ್ಣಾಂಶ 12 ಡಿ.ಸೆ ದಾಖಲಾಗಿತ್ತು. ಮುಂದಿನ 24 ಗಂಟೆಯು ರಾಜ್ಯಾದ್ಯಂತ ಒಣ ಹವೆ (Dry weather) ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ (Karnataka weather Forecast) ನೀಡಿದೆ.

ಇದನ್ನೂ ಓದಿ: Dead Body Found : ಕೆರೆಯಲ್ಲಿ ತೇಲಿ ಬಂದ ಮೃತದೇಹಗಳು; ಮಕ್ಕಳೊಟ್ಟಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಕರಾವಳಿಯಲ್ಲಿ ಇಬ್ಬನಿ

ಕರಾವಳಿಯಲ್ಲಿ ದಿನಪೂರ್ತಿ ಒಂದೊಂದು ವಾತಾವರಣವು ಜನರನ್ನು ಹೈರಣಾಗಿಸಿದೆ. ಮುಂಜಾನೆ ಇಬ್ಬನಿ ಬೀಳುತ್ತಿದ್ದರೆ, ಮಧ್ಯಾಹ್ನ ಉರಿ ಬಿಸಿಲು ಇದೆ. ಇನ್ನು ಸಂಜೆ ಆಗುತ್ತಿದ್ದಂತೆ ಚಳಿಯು ಕಾಡುತ್ತಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಚಳಿ-ಬಿಸಿಲು ಒಟ್ಟೊಟ್ಟಿಗೆ ಆವರಿಸಲಿದೆ.

ಬೆಂಗಳೂರಲ್ಲಿ ಮುಂಜಾನೆ ದಟ್ಟ ಮಂಜು

ಇನ್ನು ರಾಜಧಾನಿ ಬೆಂಗಳೂರು ನಗರ ಸುತ್ತಮುತ್ತ ಮುಖ್ಯವಾಗಿ ನಿರ್ಮಲ ಆಕಾಶ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ. ಸೆಲ್ಸಿಯಸ್‌ ಇರಲಿದೆ.

ಇದನ್ನೂ ಓದಿ: Elephant Attack : ಗ್ರಾಮಕ್ಕೆ ನುಗ್ಗಿ ಬೈಕ್‌, ಆಟೋ ಜಖಂ ಮಾಡುತ್ತಿದ್ದ ಪುಂಡಾನೆ ಸೆರೆ

ವಿಂಟರ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಪಾರದರ್ಶಕ ಶೀರ್‌ ಶಾರ್ಟ್ ಶ್ರಗ್ಸ್


ಶೀರ್‌ ಶ್ರಗ್ಸ್ ಈ ವಿಂಟರ್‌ ಸೀಸನ್‌ನ (Winter Fashion 2024) ಲೇಯರ್‌ ಲುಕ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಆಕರ್ಷಕವಾಗಿ ಕಾಣಿಸುವ, ಧರಿಸಿದಾಗ ಉಡುಪಿನ ಮೇಲೆ ಪಾರದರ್ಶಕವಾಗಿ ಕಾಣುವ ಇವು ಸಾದಾ ಶೀರ್‌, ಮಾನೋಕ್ರೋಮ್‌ ಎಂಬೋಸಿಂಗ್ ಪ್ರಿಂಟ್ಸ್, ಟ್ರಾನ್ಸಪರೆಂಟ್‌ ವೈಟ್‌ ಸೇರಿದಂತೆ ನಾನಾ ವಿನ್ಯಾಸದಲ್ಲಿ ಶೇಡ್‌ಗಳಲ್ಲಿ ಫ್ಯಾಷನ್‌ನಲ್ಲಿವೆ. ಆದರೆ, ಹಾಫ್‌ ವೈಟ್‌, ಕ್ರೀಮ್‌ ಹಾಗೂ ಐವರಿ ಬಣ್ಣದವು ಹೆಚ್ಚು ಪ್ರಚಲಿತದಲ್ಲಿವೆ.

ಟ್ರೆಂಡಿಯಾಗಿರುವ ಪಾರದರ್ಶಕ ಶೀರ್‌ ಶ್ರಗ್ಸ್

ಕಳೆದ ಬಾರಿ ಲಾಂಗ್‌ ಶ್ರಗ್ಸ್‌ ಟ್ರೆಂಡಿಯಾಗಿದ್ದವು. ಆದರೆ, ಈ ಬಾರಿ ಶಾರ್ಟ್ ಲೆಂಥ್‌ನವು ಚಾಲ್ತಿಯಲ್ಲಿವೆ. ಅದರಲ್ಲೂ ಉಡುಪಿನ ಮೇಲೆ ಧರಿಸಿದಾಗ ಧರಿಸಿರುವ ಉಡುಪು ಕಾಣುವಂತಹ ಪಾರದರ್ಶಕ ಶ್ರಗ್ಸ್ ಹುಡುಗಿಯರನ್ನು ಸೆಳೆದಿವೆ. ಫುಲ್‌ ಸ್ಲೀವ್‌ಗಿಂತ ಎಲ್ಬೋ ಸ್ಲೀವ್‌ ಅಥವಾ ತ್ರೀ ಫೋರ್ತ್ ಸ್ಲೀವ್‌ ಇರುವಂತಹ ಶ್ರಗ್ಸ್ ಹೆಚ್ಚು ಬೇಡಿಕೆಯಲ್ಲಿವೆ ಹಾಗೂ ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು. ಇನ್ನು ಶ್ವೇತ ವರ್ಣದವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ಕಾಲರ್‌ನಂತೆ ಕಾಣುವ ಈ ಪಾರದರ್ಶಕ ಶ್ರಗ್ಸ್‌ಗಳು ವೆಸ್ಟರ್ನ್ ಔಟ್‌ಫಿಟ್‌ಗಳು ಹಾಗೂ ಸೆಮಿ ಇಂಡೋ-ವೆಸ್ಟರ್ನ್ ಉಡುಗೆಗಳೊಂದಿಗೆ ಮ್ಯಾಚ್‌ ಆಗುವ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶ್ರಗ್ಸ್ ಮಿಕ್ಸ್‌ ಮ್ಯಾಚ್‌

ಈ ಹಿಂದೆ ಶ್ರಗ್ಸ್‌ ಎಂದಾಕ್ಷಾಣ ಬಹುತೇಕ ಯುವತಿಯರು ಕಾಮನ್‌ ಕಲರ್‌ ಶ್ರಗ್ಸ್ ಖರೀದಿಸುತ್ತಿದ್ದರು. ಎಲ್ಲಾ ಉಡುಪುಗಳೊಂದಿಗೆ ಇವನ್ನು ಮಿಕ್ಸ್‌ ಮ್ಯಾಚ್‌ ಮಾಡಬಹುದು ಎಂಬುದು ಕಾರಣವಾಗಿತ್ತು. ಆದರೆ, ಇದೀಗ ಕಾಲ ಬದಲಾಗಿದೆ. ಮಿಕ್ಸ್‌ ಮ್ಯಾಚ್‌ ಎನ್ನುವುದಕ್ಕಿಂತ ಮಿಸ್‌ ಮ್ಯಾಚ್‌ ಸ್ಟೈಲಿಂಗ್‌ ಟ್ರೆಂಡ್‌ನಲ್ಲಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರು ಹೇಳುವಂತೆ, ಇದೀಗ ಪಾರದರ್ಶಕ ಶೀರ್‌ ಕಾನ್ಸೆಪ್ಟ್‌ನ ಶ್ರಗ್ಸ್ ಗಳನ್ನು ಯಾವುದೇ ಲೈಟ್‌ ಶೇಡ್‌ನ ಉಡುಗೆಗಳ ಮೇಲೂ ಧರಿಸಬಹುದು. ಇನ್ನು ಲೇಯರ್‌ ಲುಕ್‌ ನೀಡಬಹುದು ಎನ್ನುತ್ತಾರೆ.

ಟಾಮ್‌ಬಾಯ್‌ ಇಮೇಜ್‌

ಶ್ರಗ್ಸ್‌ ಅನ್ನು ಡಿಫರೆಂಟ್‌ ಆಗಿ ಬಿಂಬಿಸಲು ಫ್ರಾಕ್ ಮೇಲೆ ಧರಿಸಬಹುದು. ಅಷ್ಟೇಕೆ! ಯಾವುದೇ ಉಡುಪಿನ ಮೇಲೆ ಧರಿಸಬಹುದು. ತುದಿಯನ್ನು ಟೈ ಮಾಡಿ ಟಾಮ್‌ ಬಾಯ್‌ ಇಮೇಜ್‌ ನೀಡಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version