ಬೆಂಗಳೂರು: ರಾಜ್ಯಾದಾದ್ಯಂತ ಶನಿವಾರ ಒಣ ಹವೆ ಇತ್ತು. ಕನಿಷ್ಠ ಉಷ್ಣಾಂಶವು 14.8 ಡಿ.ಸೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಒಣ ಹವೆ (Dry weather) ಮುಂದುವರಿಯಲಿದೆ. ಬೆಳಗಿನ ಜಾವ ಹಾಗೂ ರಾತ್ರಿಯಂದು ಇಬ್ಬನಿ ಬೀಳಿದ್ದು, ಚಳಿಯು ಮೈ (Karnataka Weather Forecast) ನಡುಗಿಸಲಿದೆ.
ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಯಲ್ಲೂ ಬೆಳಗಿನ ಸಮಯ ಮಂಜು ಆವರಿಸಲಿದೆ. ಕೆಲವೆಡೆ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 1-2 ಡಿ.ಸೆ ಹೆಚ್ಚಾಗಲಿದೆ.
ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ನಿಂದ 16 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿತ್ತು. ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ, ಧಾರವಾಡ ಮತ್ತು ಕೋಲಾರದಲ್ಲಿ ಕನಿಷ್ಠ ತಾಪಮಾನ ಹೆಚ್ಚಾಗಿತ್ತು. ತುಮಕೂರು, ದಾವಣಗೆರೆ, ರಾಯಚೂರು, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಚಾಮರಾಜನಗರ, ಕಲಬುರಗಿ, ಮೈಸೂರು, ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ಇದನ್ನೂ ಓದಿ:Ram Mandir : ಅಯೋಧ್ಯೆ ರಾಮನಿಗೆ ಬೆಂಗಳೂರಿನಿಂದ ತುಳಸಿ ಹಾರ ರವಾನೆ
ವಿಂಟರ್ ಫ್ಯಾಷನ್‌ನಲ್ಲಿ ಬಂತು ಬೆಚ್ಚಗಿಡುವ ಡೆನಿಮ್ ಕೋ ಆರ್ಡ್ ಸೆಟ್
ಡೆನಿಮ್ ಕೋ ಆರ್ಡ್ ಸೆಟ್ ಫ್ಯಾಷನ್ (Denim Co Ord Set Fashion) ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಈ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಡೆನಿಮ್ ಫ್ಯಾಬ್ರಿಕ್‌ನ ಕೋ ಆರ್ಡ್ ಸೆಟ್ ಔಟ್‌ಫಿಟ್‌ಗಳು ಯುವತಿಯರ ಸೀಸನ್ ಫ್ಯಾಷನ್ ಲಿಸ್ಟ್‌ಗೆ ಸೇರಿವೆ.
ಡೆನಿಮ್ ಕೋ ಆರ್ಡ್ ಸೆಟ್ ಟ್ರೆಂಡ್
“ಡೆನಿಮ್ ಕೋ ಆರ್ಡ್ ಸೆಟ್ ಔಟ್‌ಫಿಟ್‌ಗಳನ್ನು ತಮ್ಮ ಫ್ಯಾಷನ್ ಲಿಸ್ಟ್‌ಗೆ ಸೇರಿಸಿಕೊಳ್ಳಲು ಬಯಸುವವರು ಹೊಸತನ್ನು ಖರೀದಿಸಬಹುದು ಅಥವಾ ತಮ್ಮ ಬಳಿ ಕಲೆಕ್ಷನ್‌ನಲ್ಲಿರುವ ಡೆನಿಮ್ ಫ್ಯಾಬ್ರಿಕ್‌ನ ಟಾಪ್, ಪ್ಯಾಂಟ್, ಶಾರ್ಟ್ಸ್, ಸ್ಕರ್ಟ್ ಅಥವಾ ಮಿಡಿಯನ್ನು ಮರು ಬಳಕೆ ಮಾಡಿ ಟ್ರೆಂಡಿ ಸ್ಟೈಲಿಂಗ್ ಮಾಡಬಹುದು. ಇದಕ್ಕಾಗಿ ಒಂದಿಷ್ಟು ಸ್ಟೈಲಿಂಗ್ ಐಡಿಯಾ ತಿಳಿದಿರಬೇಕಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಡೆನಿಮ್ ಔಟ್‌ಫಿಟ್‌ಗಳು ಕೋ ಆರ್ಡ್ ಸೆಟ್‌ನಲ್ಲಿ ಆಗಮಿಸಿವೆ. ಅದರಲ್ಲೂ, ಜೆನ್ ಜಿ ಹುಡುಗಿಯರಿಗೆ ಹಾಗೂ ಕಾರ್ಪೋರೇಟ್ ಕ್ಷೇತ್ರದ ಯುವತಿಯರಿಗೆ ಇಷ್ಟವಾಗುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಡೆನಿಮ್ ಕೋ ಆರ್ಡ್ ಸೆಟ್
ಡೆನಿಮ್ ಜಾಕೆಟ್-ಪ್ಯಾಂಟ್, ಡೆನಿಮ್ ಕೋಟ್ – ಸ್ಕರ್ಟ್, ಡೆನಿಮ್ ಟಾಪ್-ಮಿಡಿ ಸ್ಕರ್ಟ್, ಡೆನಿಮ್ ಲಾಂಗ್ ಶರ್ಟ್ ಟಾಪ್-ಮಿನಿ ಶಾಟ್ರ್ಸ್, ಡೆನಿಮ್ ಫ್ರಾಕ್-ಡೆನಿಮ್ ಕೆಪ್ರೀಸ್, ಡೆನಿಮ್ ಲೆಗ್ಗಿಂಗ್ಸ್-ಕ್ರಾಪ್ ಟಾಪ್, ಡೆನಿಮ್ ಕ್ರಾಪ್ ಟಾಪ್-ಬರ್ಮಡಾ ಶಾಟ್ರ್ಸ್, ಡೆನಿಮ್ ಶರ್ಟ್ – ಮಿಡಿ ಸೇರಿದಂತೆ ನಾನಾ ಶೈಲಿಯ ಕೋ ಆರ್ಡ್ ಸೆಟ್‌ಗಳು ಬಿಡುಗಡೆಗೊಂಡಿವೆ. ಸೀಸನ್‌ಗೆ ತಕ್ಕಂತೆ ಹೊಂದುವಂತಹ ಡಿಸೈನ್‌ಗಳಲ್ಲಿ ಕಾಣಿಸಿಕೊಂಡಿವೆ.
ವಾರ್ಡ್‌ರೋಬ್‌ನಲ್ಲಿರುವ ಡೆನಿಮ್ ಮಿಕ್ಸ್ ಮ್ಯಾಚ್
ನೀವು ಹೊಸದಾಗಿ ಖರೀದಿಸಲು ಆಸಕ್ತಿ ಇಲ್ಲದಿದ್ದಲ್ಲಿ ಅಥವಾ ಸುಮ್ಮಸುಮ್ಮನೆ ಶಾಪಿಂಗ್ ಮಾಡಲು ಇಷ್ಟವಿಲ್ಲದಿದ್ದಲ್ಲಿ ನಿಮ್ಮ ಬಳಿ ಇರುವ ಡೆನಿಮ್ ಔಟ್‌ಫಿಟ್‌ಗಳನ್ನೇ ಮಿಕ್ಸ್ ಮ್ಯಾಚ್ ಮಾಡಿ ಕೋ ಆರ್ಡ್ ಸೆಟ್ ಮಾಡಬಹುದು. ಇದಕ್ಕೆ ಒಂದಿಷ್ಟು ಸಿಂಪಲ್ ಐಡಿಯಾ ಕಾರ್ಯಗತಗೊಳಿಸಬೇಕಷ್ಟೇ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ಒಂದಿಷ್ಟು ಇಲ್ಲಿ ಉದಾಹರಣೆ ಕೊಟ್ಟಿದ್ದಾರೆ.
- ಡೆನಿಮ್ ಟಾಪ್ ಇದ್ದಲ್ಲಿ ಅದಕ್ಕೆ ಡೆನಿಮ್ ಪ್ಯಾಂಟ್ ಧರಿಸಿ.
- ಡೆನಿಮ್ ಜಾಕೆಟ್ ಇದ್ದಲ್ಲಿ, ಒಳಗೆ ಇನ್ನರ್ ಟಾಪ್ ಧರಿಸಿ ಸ್ಕರ್ಟ್ ಧರಿಸಿ.
- ಲಾಂಗ್ ಶರ್ಟ್ ಡ್ರೆಸ್ ಇದ್ದಲ್ಲಿ ಅದರೊಂದಿಗೆ ಕೇಪ್ರೀಸ್ ಧರಿಸಿ.
- ಕ್ರಾಪ್ ಡೆನಿಮ್ ಟಾಪ್ಗೆ ಸ್ಕರ್ಟ್ ಅಥವಾ ಮಿಡಿ ಧರಿಸಬಹುದು.
- ಡೆನಿಮ್ ಲಾಂಗ್ ಕೋಟ್ಗೆ ಬರ್ಮುಡಾದಂತಹ ಶಾರ್ಟ್ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ