ಉಡುಪಿ/ಬೆಂಗಳೂರು: ನ.24ರಂದು ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ (Karnataka Weather Forecast) ಮಳೆಯಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿದೆ. ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ಇತ್ತು. ಮಳೆಯಿಂದಾಗಿ (Rain News) ಜನರು ಸಂತಸಗೊಂಡಿದ್ದಾರೆ. ಕಳೆದ ಎರಡು ವಾರದಿಂದ ತಾಪಮಾನ ವಿಪರೀತ ಏರಿಕೆಯಾಗಿತ್ತು. ಇದರಿಂದಾಗಿ ಜನರು ಕಂಗಲಾಗಿದ್ದರು.
ನಾಳೆ ಶನಿವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಇನ್ನು ಭಾನುವಾರ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ ಮುನ್ಸೂಚನೆ ಇದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಲ್ಲಿ ಮಳೆ ಸುರಿಯಬಹುದು.
ಬೆಂಗಳೂರಲ್ಲಿ ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣ ಇದ್ದು, ಅದೇ ಪರಿಸ್ಥಿತಿ ಮುಂದುವರಿಯಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 26-20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಜ್ಯದಲ್ಲಿ ಗುರುವಾರದಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗಿವ ವರದಿ ಆಗಿದೆ. ಉತ್ತರ ಒಳನಾಡಲ್ಲಿ ಒಣಹವೆ ಮುಂದುವರಿದಿದೆ. ಗುಬ್ಬಿ 2, ಬೆಳ್ತಂಗಡಿ, ಕುಂದಾಪುರ, ಶೃಂಗೇರಿ, ಕಳಸ, ಜಯಪುರ ಹಾಗೂ ಚಾಮರಾಜನಗರ, ಪಾವಗಡ ಸೇರಿ ಹೊಸಕೋಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ 17.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇದನ್ನೂ ಓದಿ: Tiger Attack: ಮಹಿಳೆಯ ಅರ್ಧ ದೇಹವನ್ನೇ ತಿಂದ ನರಭಕ್ಷಕ; ಮೈಸೂರಲ್ಲಿ ಹುಲಿ ದಾಳಿಗೆ ಮತ್ತೆ ಬಲಿ
ಚಳಿಗಾಲದಲ್ಲಿ ಒರಟಾದ ಕೂದಲಿಂದ ಮುಕ್ತಿ ಹೊಂದಬೇಕೇ? ಹೀಗೆ ಮಾಡಿ!
ನುಣುಪಾದ ಕೂದಲು (Silky hair) ಯಾರು ತಾನೇ ಬೇಡವೆಂದಾರು? ಆದರೆ, ಚಳಿಗಾಲ ಬರುತ್ತಿದ್ದ ಹಾಗೆ ಕೂದಲು ಒಣಕಲಾಗಿ, ಹಿಡಿತಕ್ಕೆ ಸಿಕ್ಕದೆ ಹಾರಾಡಲು ಆರಂಭವಾಗುತ್ತದೆ. ಬಾಚಿದರೆ, ತುಂಡಾಗುವ, ತುದಿಯಲ್ಲಿ ಕವಲಾಗುವ, ಒರಟೊರಟಾಗಿ ಬಿಡುವ ಕೂದಲ ಸಮಸ್ಯೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಇದಕ್ಕೆ ಕಾರಣ ವಾತಾವರಣದ ಶುಷ್ಕತೆ, ಜೊತೆಗೆ ಚಳಿಗಾಲ ಬಂದ ತಕ್ಷಣ ಹೆಚ್ಚು ಬಿಸಿನೀರಿನಲ್ಲಿ ತಲೆಗೆ ಸ್ನಾನ ಮಾಡುವುದು ಅಷ್ಟೇ ಅಲ್ಲ, ಒಣ ಶುಷ್ಕ ಹವೆಯಿಂದಾಗಿ ಕೂದಲಿಗೆ ಸರಿಯಾದ ಪೋಷಣೆ ಸಿಗದೆ, ಕೂದಲಲ್ಲಿ ಎಣ್ಣೆಯಂಶ ಸಿಗದೆ ಒಣಕಲಾಗುತ್ತದೆ. ತಲೆಯಿಂದ ಹೊಟ್ಟುಗಳೇಳಲಾರಂಭಿಸುತ್ತವೆ. ತುರಿಕೆ, ನವೆಯಂತಹ ಸಮಸ್ಯೆಗಳಿಂದ ಕೂದಲ ಬುಡದಲ್ಲಿ ಕಜ್ಜಿಗಳೂ ಏಳಬಹುದು. ಈ ಎಲ್ಲ ಸಮಸ್ಯೆಗಳಿಂದಾಗಿ ಕೂದಲು ಒರಟಾಗಿ ಆರೋಗ್ಯರಹಿತವಾಗಿ ಕಾಣಲು ಆರಂಭವಾಗುತ್ತದೆ. ಹಾಗಾದರೆ, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಏನು, ಮತ್ತೆ ಕೂದಲನ್ನು ನಯವಾಗಿ ಮಾಡುವುದು ಹೇಗೆ, ಕೂದಲು ನುಣುಪಾಗಿ ಆರೋಗ್ಯಪೂರ್ಣವಾಗಿ, ಸೊಂಪಾಗಿ ನಯವಾಗಿ ಹೊಳೆಯಲು ಏನೆಲ್ಲ ಮಾಡಬಹುದು (winter hair care) ಎಂಬುದನ್ನು ತಿಳಿಯೋಣ ಬನ್ನಿ.
1. ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ. ತೆಂಗಿನೆಣ್ಣೆಯಿಂದ ವಾರಕ್ಕೆರಡು ಬಾರಿ ಕೂದಲಿನ ಬುಡವನ್ನು ಮಸಾಜ್ ಮಾಡಿಕೊಂಡು ಮೂರ್ನಾಲ್ಕು ಗಂಟೆ ಬಿಟ್ಟು ಕೂದಲನ್ನು ಶಾಂಪೂವಿನಿಂದ ತೊಳೆಯಿರಿ. ಮುನ್ನಾ ದಿನವೇ ಎಣ್ಣೆ ಹಚ್ಚಿಕೊಂಡು ಮಲಗಬೇಡಿ. ಇದರಿಂದ ಕೂದಲುದುರುವಿಕೆ ಹೆಚ್ಚಾಗಬಹುದು.
2. ಎಲ್ಲಕ್ಕಿಂತ ಮುಖ್ಯವಾಗಿ ಕೂದಲಿಗೆ ಬಳಸುವ ಶಾಂಪೂ, ಎಣ್ಣೆಯ ಬಗ್ಗೆ ಗಮನವಿರಲಿ. ನೀವು ಬಳಸುವ ಶಾಂಪೂನಲ್ಲಿ ಯಾವ ಪದಾರ್ಥಗಳಿವೆ ಎಂಬುದನ್ನು ಗಮನಿಸಿ. ಆಲ್ಕೋಹಾಲ್ ನಿಮ್ಮ ಶಾಂಪೂವಿನಲ್ಲಿದ್ದರೆ ಅದು ಮತ್ತೂ ನಿಮ್ಮ ಕೂದಲನ್ನು ಒರಟಾಗಿಸುತ್ತದೆ. ಇನ್ನಷ್ಟು ಒಣಕಲಾಗಿಸುತ್ತದೆ. ಎಣ್ಣೆಯಂಶ ನಿಮ್ಮ ಶಾಂಪೂವಿನಲ್ಲಿರಲಿ. ತೆಂಗಿನೆಣ್ಣೆಯ ಅಂಶವಿರುವ ಶಾಂಪೂ ಆದರೆ ಒಳ್ಳೆಯದು. ಮಾಯ್‌ಶ್ಚರೈಸಿಂಗ್ ಶಾಂಪೂವಿನ ಬಳಕೆ ಚಳಿಗಾಲಕ್ಕೆ ಉತ್ತಮ. ಮೆದುವಾಗ, ರಾಸಾಯನಿಕಗಳು ಕಡಿಮೆ ಇರುವ ಶಾಂಪೂ ಬಳಸಿ. ಉಗುರು ಬೆಚ್ಚಗಿನ ನೀರಿನಿಂದ ತಲೆಗೆ ಸ್ನಾನ ಮಾಡಿ. ಚಳಿಗಾಲವೆಂದು ಬಿಸಿಬಿಸಿಯಾದ ನೀರನ್ನು ತಲೆಗೆ ಗಂಟೆಗಟ್ಟಲೆ ಹೊಯ್ದುಕೊಳ್ಳಬೇಡಿ. ಪ್ರೊಟೀನ್ ಅಥವಾ ಮಾಯ್‌ಶ್ಚರೈಸಿಂಗ್ ಕಂಡೀಶನರ್ ಬಳಸಿ.
3. ಚಳಿಗಾಲದಲ್ಲಿ ಆದಷ್ಟೂ ಕೂದಲು ಹಾಗೆಯೇ ಸಹಜವಾಗಿಯೇ ಒಣಗಲಿ. ಬ್ಲೋ ಡ್ರೈ ಮಾಡಬೇಡಿ. ಕಲರಿಂಗ್, ಸ್ಟ್ರೈಟನಿಂಗ್, ಕರ್ಲಿಂಗ್ ಇತ್ಯಾದಿಗಳನ್ನು ಆದಷ್ಟೂ ಕಡಿಮೆ ಮಾಡಿ. ಚಳಿಗಾಲದಲ್ಲಿ ಬಿಸಿಯಾದ ಹೇರ್ ಟ್ರೀಟ್‌ಮೆಂಟ್ ಮಾಡಬೇಡಿ. ಇದರಿಂದ ಕೂದಲು ಇನ್ನಷ್ಟು ಹಾಳಾಗುತ್ತದೆ. ತುಂಡಾಗುತ್ತದೆ. ಒಣಕಲಾಗುತ್ತದೆ.
4. ಕೂದಲ ಸಿಕ್ಕುಗಳನ್ನು ಬಿಡಿಸುವಾಗ ಮೆದುವಾಗಿ ಬಿಡಿಸಿ. ಅಗಲವಾದ ಹಲ್ಲುಗಳಿರುವ ಬಾಚಣಿಗೆಯಿಂದ ಸಿಕ್ಕುಗಳನ್ನು ಬಿಡಿಸಿ.
5. ಮೊಸರನ್ನು ಬಳಸಿ. ಮೊಸರಿನಲ್ಲಿ ಕೂದಲನ್ನು ಪೋಷಣೆ ಮಾಡುವ ಪ್ರೊಟೀನ್ ಇದೆ. ಮೊಸರನ್ನು ಮಿಕ್ಸಿಯಲ್ಲಿ ಹಾಕಿ ನಯವಾದ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಿರಿ. ಕೂದಲ ಒರಟುತನ ಕಡಿಮೆಯಾಗಿ ನಯವಾಗುತ್ತದೆ. ಮಯೊನೀಸ್ ಕೂಡಾ ಇದರ ಜೊತೆಗೆ ಸೇರಿಸಿ ಹಚ್ಚಿಕೊಳ್ಳಬಹುದು.
6. ಮೊಟ್ಟೆಯ ಬಿಳಿ ಲೋಳೆ ಕೂದಲಿಗೆ ಅತ್ಯುತ್ತಮ ಪ್ರೊಟೀನ್ ಪೋಷಣೆ ನೀಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಹೇರ್ ಮಾಸ್ಕ್‌ಗಳ ಬದಲು ಮೊಟ್ಟೆಯ ಬಿಳಿ ಲೋಳೆಗೆ ಮೊಸರನ್ನು ಸೇರಿಸಿ ಕೂದಲಿಗೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಿರಿ. ಇದು ಕೂದಲನ್ನು ನಯವಾಗಿ ಹೊಳೆಯುವಂತೆ ಮಾಡುತ್ತದೆ. ಕೂದಲು ತುಂಡಾಗುವಂಥ ಸಮಸ್ಯೆ ಮಾಯವಾಗುತ್ತದೆ.
7. ಬೆಣ್ಣೆಹಣ್ಣಿನ ಮಾಸ್ಕ್ ಕೂಡಾ ಕೂದಲಿಗೆ ಬಹಳ ಒಳ್ಳೆಯದು. ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣು ಅಥವಾ ಅವಕಾಡೋನ ಪೇಸ್ಟ್ ಮಾಡಿ ಅದಕ್ಕೆ ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿ ಎರಡು ಚಮಚ ಆಲಿವ್ ಎಣ್ಣೆಯನ್ನೂ ಸೇರಿಸಿ ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ಕೂದಲು ತೊಳೆಯಿರಿ. ಇದರಿಂದ ಕೂದಲು ಹೊಳಪು ಪಡೆದು ಪೋಷಣೆ ಪಡೆಯುತ್ತದೆ.
8. ಕೂದಲ ಆರೋಗ್ಯಕ್ಕೆ ಪೂರಕವಾದ ಆಹಾರ ಸೇವಿಸಿ. ವಿಟಮಿನ್ ಬಿ ಹೆಚ್ಚಿರುವ ಬಟಾಣಿ, ಬೀನ್ಸ್, ಕ್ಯಾರೆಟ್, ಬೀಜಗಳು ಹಾಗೂ ಮೊಟ್ಟೆ ಸೇವಿಸಿ. ಬಯೋಟಿನ್ ಹೆಚ್ಚಿರುವ ಆಹಾರಗಳಾದ, ಕುಚ್ಚಲಕ್ಕಿ, ಸೋಯಾ ಬೀನ್ ಹಾಗೂ ವಾಲ್‌ನಟ್‌ಗಳನ್ನೂ ಸೇವಿಸುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.