ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆ (Rain News) ಆಗಿದೆ. ಆದರೆ ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ವ್ಯಾಪಕವಾಗಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.
ಇನ್ನು ಮುಂದಿನ 48 ಗಂಟೆಯಲ್ಲಿ ರಾಜ್ಯದ ಹಲವು ಸ್ಥಳಗಳಲ್ಲಿ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಚಳಿಯು ಮೈಕೊರೆಯಲಿದೆ.
ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಟ ಉಷ್ಣಾಂಶ 27 ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ
ರಾಜ್ಯದಲ್ಲಿ ಮಂಗಳವಾರ ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉಡುಪಿಯ ಕೋಟ, ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಸುಳ್ಯ, ಮಂಗಳೂರು, ಕುಂದಾಪುರ, ಗೇರ್ಸೂಪ್ಪ, ತಾಳಗುಪ್ಪ, ತ್ಯಾಗರ್ತಿಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಹೊನ್ನಾವರ, ಗೋಕರ್ಣ, ಉಡುಪಿ, ಕಮ್ಮರಡಿ, ಕೊಪ್ಪದಲ್ಲಿ ತಲಾ 2 ಸೆಂ.ಮೀ, ಕುಮಟಾ, ಮಂಕಿ, ಮಂಗಳೂರು ವಿಮಾನ ನಿಲ್ದಾಣ, ಬೆಳ್ತಂಗಡಿ, ಪಣಂಬೂರು, ಮೂಲ್ಕಿ, ಉಪ್ಪಿನಂಗಡಿ ಮತ್ತು ಪುತ್ತೂರಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 15.5 ಡಿ.ಸೆ ದಾಖಲಾಗಿದೆ.
ಇದನ್ನೂ ಓದಿ: Winter Tips: ಚಳಿಗಾಲದಲ್ಲಿ ಬೆಚ್ಚಗಿರಬೇಕು ಅಂತ ಹೀಗೆಲ್ಲ ಮಾಡಬೇಡಿ, ಹುಷಾರ್!
Winter Eye Makeup: ಚಳಿಗಾಲದ ಸೀಸನ್‌ನಲ್ಲಿ ಟ್ರೆಂಡಿಯಾದ ಮಿನುಗುವ ಕ್ರೋಮ್ ಐ ಮೇಕಪ್
ಕ್ರೋಮ್ ಶಿಮ್ಮರ್ ಐ ಮೇಕಪ್ (Winter Eye Makeup) ವಿಂಟರ್ ಸೀಸನ್ ಪಾರ್ಟಿ ಪ್ರಿಯರನ್ನು ಸೆಳೆದಿದೆ. ಗ್ಲಾಮರಸ್ ಮಾನಿನಿಯರನ್ನು ಆಕರ್ಷಿಸಿದೆ. ಹೌದು. ಈ ಬಾರಿಯ ವಿಂಟರ್ ಸೀಸನ್‌ನಲ್ಲಿ ಹಚ್ಚಿದರೇ ಮಿನುಗುವ ಕಣ್ಮನ ಸೆಳೆಯುವ ಶಿಮ್ಮರ್ ಕ್ರೋಮ್ ಐ ಮೇಕಪ್ ಫ್ಯಾಷನ್ ಟ್ರೆಂಡಿಯಾಗಿದೆ. ಹುಡುಗಿಯರು ಮಾತ್ರವಲ್ಲ, ಪಾರ್ಟಿ ಪ್ರಿಯ ಯುವತಿಯರು, ಕಾರ್ಪೋರೇಟ್ ಮಾನಿನಿಯರು ಈ ಮೇಕಪ್‌ನಲ್ಲಿ ನೋಡುಗರನ್ನು ಸೆಳೆಯುತ್ತಿದ್ದಾರೆ. ಈ ಐ ಮೇಕಪ್ ಯಾವ ಬಗೆಯ ಸಂಚಲನ ಮೂಡಿಸಿದೆಯೆಂದರೇ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಇವ್ ಪಾರ್ಟಿಗಳು ಮುಗಿದರೂ ಕೂಡ ಸಾಮಾನ್ಯ ಬರ್ತ್ ಡೇ ಪಾರ್ಟಿ, ಆಫೀಸ್ ಪಾರ್ಟಿ, ಹಾಲಿಡೇ ಪಾರ್ಟಿ, ಕಾರ್ಪೋರೇಟ್ ವೆಕೆಷನ್ ಪಾರ್ಟಿಗಳಲ್ಲಿ ಮಾನಿನಿಯರನ್ನು ಇಂದಿಗೂ ಆವರಿಸಿಕೊಂಡಿದೆ ಎನ್ನುತ್ತಾರೆ ಸೌಂದರ್ಯ ತಜ್ಞರು.
ಐ ಮೇಕಪ್ ಜಾದೂ
ಅಂದಹಾಗೆ, ಐ ಮೇಕಪ್‌ಗೆ ನಾವುಗಳು ಕೇವಲ ಸೌಂದರ್ಯ ತಜ್ಞರನ್ನೇ ಆಶ್ರಯಿಸಬೇಕಾಗಿಲ್ಲ! ಖುದ್ದು ನಾವುಗಳೇ ಮೇಕಪ್ ಮಾಡಿಕೊಳ್ಳಬಹುದು. ಅದಕ್ಕಾಗಿ ಒಂದಿಷ್ಟು ಕಲಾತ್ಮಕ ಮನಸ್ಸಿರಬೇಕು ಎನ್ನುತ್ತಾರೆ ಐ ಮೇಕಪ್ ಸ್ಪೆಷಲಿಸ್ಟ್ ದಿಶಾ. ಅವರ ಪ್ರಕಾರ, ಒಂದಿಷ್ಟು ಕ್ರೋಮ್ ಐ ಮೇಕಪ್ ಶೇಡ್‌ಗಳಿದ್ದಲ್ಲಿ, ಬ್ಯೂಟಿ ಬ್ಲಾಗ್‌ಗಳಲ್ಲಿ ಹಾಗೂ ಯೂ ಟ್ಯೂಬ್ ಮೇಕಪ್ ಟ್ಯೂಟೋರಿಯಲ್ ವಿಡಿಯೋ ಕ್ಲಿಪ್‌ಗಳಲ್ಲಿ ತೋರಿಸುವ ಪಾಠಗಳಿಂದಲೇ ಮೇಕಪ್ ಕಲಿಯಬಹುದು. ಆ ಮಟ್ಟಿಗೆ ಇವು ಹಚ್ಚಲು ಸುಲಭವಾಗಿರುತ್ತವೆ. ಅಲ್ಲದೇ ಕ್ರೋಮ್ ಮೇಕಪ್‌ನ ಒಂದು ಶೇಡನ್ನು ಲೇಪಿಸಿದರಾಯಿತು. ಇಡೀ ಕಣ್ಣಿನ ಅಂದವವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.
ಜಗಮಗಿಸುವ ಐ ಮೇಕಪ್
ಸದ್ಯ ಗೋಲ್ಡ್, ಸಿಲ್ವರ್ ಅತಿ ಹೆಚ್ಚು ಟ್ರೆಂಡಿಯಾಗಿದೆ. ಇನ್ನು ಉಡುಪುಗಳ ಮ್ಯಾಚಿಂಗ್‌ಗೆ ತಕ್ಕಂತೆಯೂ ಕಲರ್ ಚೂಸ್ ಮಾಡಬಹುದು. ಮೊದಲಿಗೆ ಕಣ್ಣಿನ ಮೇಲೆ ನಿಮಗೆ ಅಗತ್ಯವಿರುವ ಷ್ಟು ಡಾರ್ಕ್ ಅಥವಾ ಲೈಟಾಗಿ ಬ್ರಶ್ ಮೂಲಕ ಐ ಶ್ಯಾಡೋ ಹಚ್ಚಿ. ಬೇಕಿದ್ದಲ್ಲಿ ತೆಳುವಾದ ಲೈನರ್ ಎಳೆಯಿರಿ. ಮಸ್ಕರಾ ಕೂಡ ಹಚ್ಚಿ. ಇಷ್ಟೇ! ಇನ್ನುಳಿದಂತೆ ಹಚ್ಚಿದ ಮಿನುಗುವ ಕ್ರೋಮ್ ಶೇಡ್ಸ್ ಕಣ್ಣನ್ನು ಆಕರ್ಷಕವಾಗಿಸುತ್ತದೆ ಎನ್ನುತ್ತಾರೆ.
ಐ ಮೇಕಪ್ ಕಿಟ್ ಆಯ್ಕೆ
- ಬ್ರಾಂಡೆಡ್ ಐ ಮೇಕಪ್ ಶೇಡ್ಸ್ ಬಳಸಿ.
- ಕಣ್ಣಿನ ಒಳಗೆ ಹೋಗದಂತೆ ಮೇಕಪ್ ಮಾಡಿ.
- ಮಲಗುವ ಮುನ್ನ ತೆಗೆದು ನಂತರ ಮಲಗಿ.
- ಲೇಪಿಸಿದ ನಂತರ ಕಣ್ಣನ್ನು ಉಜ್ಜಬೇಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ