ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ (Rain News) ಕಡಿಮೆ ಆಗಿದೆ. ನಾಳೆ (ನ.11) ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Karnataka Weather Forecast) ಇದೆ. ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣಹವೆ ಇರಲಿದೆ.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ
ತಾಪಮಾನ ಎಚ್ಚರಿಕೆ
ಮಳೆ ಅಬ್ಬರ ಕಡಿಮೆ ಆಗುತ್ತಿದ್ದಂತೆ ತಾಪಮಾನ ಏರಿಕೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Assault Case : ರಾತ್ರೋ ರಾತ್ರಿ ಕಾರುಗಳ ಗ್ಲಾಸ್ ಪೀಸ್ ಪೀಸ್! ಯಾರದು ಗೊಂಬೆ ಮುಖವಾಡ ಧಾರಿಗಳು
ನ.9ರಂದು ಕರಾವಳಿಯ ಹಲವು ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಯಡ್ವಾಡ 6, ಕೊಲ್ಲೂರು 5, ಮಂಚಿಕೇರಿ, ಟಿಕ್ಕೋಟ , ಅಡಕಿ, ಕೊಟ್ಟಿಗೆಹಾರ, ಕಳಸದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಉಡುಪಿ, ಕೋಟ, ಸಿದ್ದಾಪುರ, ಮುಧೋಳ, ಸೇಡಂ, ಬಿ ಬಾಗೇವಾಡಿ, ರಬಕವಿ, ಕೊಳ್ಳೇಗಾಲ, ಕಮ್ಮರಡಿ, ತರೀಕೆರೆ, ಜಯಪುರ ಸೇರಿದಂತೆ, ಸಿರುಗುಪ್ಪ, ಅಗರಹರ ಕೋಣಂದೂರಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.
ಶಿರಾಲಿ ಪಿಟಿಒ, ಮಂಕಿ, ಜೋಯಿಡಾ, ಕುಂದಾಪುರ, ಮಸ್ಕಿ, ಗಬ್ಬೂರು, ಚಿಂಚೋಳಿ, ಅಫಜಲಪುರ, ಗೋಕಾಕ, ಹಿಡಕಲ್ ಅಣೆಕಟ್ಟು, ಹುಣಸಗಿ, ಶಹಾಪುರ ಸೇರಿ ವಿಜಯಪುರ ಪಿಟಿಒ, ತಾವರಗೇರಾ, ಮುದ್ದೇಬಿಹಾಳ , ಭಾಗಮಂಡಲ, ಟಿ ನರಸೀಪುರ , ತಾಳಗುಪ್ಪ, ಹುಂಚದಕಟ್ಟೆ , ಸಕಲೇಶಪುರ, ಬೇಲೂರಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಡಿಮೆ ಉಷ್ಣಾಂಶ 18.2 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ