Site icon Vistara News

Karnataka weather : ರಾಜ್ಯದಲ್ಲಿ ಮಳೆಗೆ ಚಳಿಯೂ ಸಾಥ್‌; ಜ.14ರವರೆಗೆ ಈ ಜಿಲ್ಲೆಗೆ ಅಲರ್ಟ್‌

Rain very likely to occur at a few places over South Interior Karnataka

ಬೆಂಗಳೂರು: ರಾಜ್ಯದಲ್ಲಿ ಜನವರಿ 8 ರಿಂದ 14ರವರೆಗೆ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದರೆ, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ (Karnataka weather Forecast) ಮಳೆಯಾಗಲಿದೆ.

ತಾಪಮಾನ ಮುನ್ಸೂಚನೆ

ಮುಂದಿನ 48 ಗಂಟೆಯಲ್ಲಿ ರಾಜ್ಯದ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದಾಗಿ ಹಲವೆಡೆ ಥಂಡಿ ವಾತಾವರಣ ಇರಲಿದೆ. ಕೆಲವೊಮ್ಮೆ ಜೋರಾಗಿ ಗಾಳಿಯೂ ಬೀಸಬಹುದು.

ಬೆಂಗಳೂರಲ್ಲಿ ಹಗುರ ಮಳೆ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟಮಂಜು ಮುಸುಕಲಿದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸಂಜೆ ಅಥವಾ ರಾತ್ರಿಯಂದು ಕೆಲವು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Moral Policing: ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ; ಅಕ್ಕ-ತಮ್ಮ ಅಂದ್ರೂ ಬಿಡದೆ ಹೊಡೆದರು ಯುವಕರು!

ಕರಾವಳಿಯಲ್ಲಿ ತುಂತುರು ಮಳೆ

ಕರಾವಳಿಯಲ್ಲಿ ಭಾನುವಾರವೂ ಸಹ ಮಳೆ ಮುಂದುವರೆದಿದೆ. ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆಯೊಂದಿಗೆ ಆರಂಭವಾಗಿತ್ತು. ಅಂಕೋಲಾ, ಕುಮಟಾ, ಭಟ್ಕಳ ಭಾಗಗಳಲ್ಲೂ ಮಳೆಯ ಸಿಂಚನವಾಗಿದೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಮೋಡ ಮುಸುಕಿದ ವಾತಾವರಣವಿದೆ. ಇನ್ನೂ ಅಕಾಲಿಕ ಮಳೆಯಿಂದ ಭತ್ತ ಕೊಯ್ಲು ಮಾಡಿದ್ದ ರೈತರಿಗೆ ಆತಂಕ ಶುರುವಾಗಿದೆ.

ಹಾಸನದಲ್ಲಿ ದಾಖಲೆ ಮಳೆ

ದಕ್ಷಿಣ ಒಳನಾಡಿನ ಕೆಲವೆಡೆ, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಹಾಸನದ ಕೊಣನೂರಲ್ಲಿ 8 ಸೆಂ.ಮೀ , ಸಿಆರ್ ಪಟ್ನಾ 5 ಸೆಂ.ಮೀ ಮಳೆಯಾಗಿದೆ. ತಿಪಟೂರು, ಗೋಕಾಕ್‌ನಲ್ಲಿ ತಲಾ 3 ಸೆಂ.ಮೀ, ಬೈಲಹೊಂಗಲ, ಮೂರ್ನಾಡು, ಭಾಗಮಂಡಲ, ಸಕಲೇಶಪುರ, ಹುಣಸೂರಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಗೋಕರ್ಣ, ಅರಕಲಗೂಡು, ತರೀಕೆರೆ, ಅಜ್ಜಂಪುರ, ಯಗಟಿ, ಬೇಲೂರು ಹಾಗೂ ಹಿರಿಯೂರು ಎಚ್‌ಎಂಎಸ್ , ಕೃಷ್ಣರಾಜಪೇಟೆ, ಕೃಷ್ಣರಾಜಸಾಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಅತೀ ಕಡಿಮೆ ಉಷ್ಣಾಂಶವು 15.5 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version