ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಇರಲಿದೆ. ಮಲೆನಾಡು ಮತ್ತು ಕರಾವಳಿಯ ಪ್ರತ್ಯೇಕ ಕಡೆಗಳಲ್ಲಿ ದಟ್ಟ ಮಂಜು ಇದ್ದರೂ ಉಳಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗದಲ್ಲೂ ಶುಷ್ಕ ವಾತಾವರಣ ಇರಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಕಲಬುರಗಿಯಲ್ಲಿ ಬಿಸಿಲು ಝಳಪೀಸಲಿದೆ.
ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು, ಬಳ್ಳಾರಿ, ವಿಜಯನಗರ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ಉಷ್ಣಾಂಶವು ಏರಿಕೆ ಆಗಲಿದೆ.
ಬೆಂಗಳೂರು ನಗರದಲ್ಲಿ ನೀಲಾಕಾಶ ಇರಲಿದ್ದು, ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇರುತ್ತದೆ. ಆದರೆ ಬೆಳಗ್ಗೆ ಬಿಸಿಲಿನಿಂದ ಕೂಡಿರಲಿದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ತಾಪಮಾನದ ಮುನ್ಸೂಚನೆ
ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಮತ್ತಷ್ಟು ಬಿಸಿಲ ಧಗೆ ಹೆಚ್ಚಾಗಲಿದೆ. ಇದರ ಹೊರತಾಗಿಯೂ ಕೆಲವೆಡೆ ಬೆಳಗಿನ ಜಾವ ಹಾಗೂ ರಾತ್ರಿಯಂದು ಇಬ್ಬನಿ ಬೀಳಿದ್ದು, ಚಳಿ ಇರಲಿದೆ.
ಇದನ್ನೂ ಓದಿ: Ram Mandir: Selfie With ರಾಮೋತ್ಸವದಲ್ಲಿ ಮಿಂಚಿದ ಬಾಲರಾಮರು; ಮದುವೆ ಮನೆಯಲ್ಲೂ ರಾಮಜಪ
Star Fashion: ಬೆಂಗಳೂರಿನ ಚುಮು ಚುಮು ಚಳಿಗೆ ಬದಲಾಯಿತು ನಟ ಶೈನ್ ಶೆಟ್ಟಿ ವಿಂಟರ್ ಫ್ಯಾಷನ್!
ಬೆಂಗಳೂರಿನ ಚುಮು ಚುಮು ಚಳಿಗೆ ನಟ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ನಟ ಶೈನ್ ಶೆಟ್ಟಿಯ ವಿಂಟರ್ ಫ್ಯಾಷನ್ (Star Fashion) ಬದಲಾಗಿದೆ. ಲೇಯರ್ ಲುಕ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ಶೈನ್ ಶೆಟ್ಟಿಯವರ ಸೀಸನ್ ಫ್ಯಾಷನ್ ಸ್ಟೇಟ್‌ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದೆ.
ಫ್ಯಾಷನ್ ರಿವ್ಯೂ
“ಶೈನ್ ಶೆಟ್ಟಿಯವರ ಇತ್ತೀಚಿನ ವಿಂಟರ್ ಫ್ಯಾಷನ್ ಸ್ಟೇಟ್‌ಮೆಂಟ್ ಸೀಸನ್‌ಗೆ ಪರ್ಫೆಕ್ಟ್ ಆಗಿದ್ದು, ಉದ್ಯಾನನಗರಿಯ ಹವಾಮಾನಕ್ಕೆ ತಕ್ಕುದಾದಾಗಿದೆ. ಅಲ್ಲದೇ, ಶೈನ್ ಅವರ ಫ್ಯಾಷನ್ ಸೆನ್ಸನ್ನು ಪ್ರತಿಬಿಂಬಿಸುತ್ತಿದೆ. ಅಷ್ಟು ಮಾತ್ರವಲ್ಲದೇ, ನಟರಾದರೂ ಮಾಡೆಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಚುರಲ್ ಆಗಿ ಕಾಣಿಸಿಕೊಂಡಿರುವ ಅವರ ವಿಂಟರ್ ಲೇಯರ್ ಲುಕ್ ಪರ್ಫೆಕ್ಟ್ ಆಗಿದೆಯಲ್ಲದೇ, ಫ್ಯಾಷನ್ ಪ್ರಿಯರು ಫಾಲೋ ಮಾಡುವಷ್ಟರ ಮಟ್ಟಿಗೆ ಸುಲಭವಾದ ಸ್ಟೈಲ್ ಸ್ಟೇಟ್‌ಮೆಂಟ್ ಆಗಿದೆ. ಅವರ ಫ್ಯಾಷನ್‌ಗೆ ಫುಲ್ ಮಾಕ್ರ್ಸ್ ನೀಡಬಹುದು” ಎಂದು ಪ್ರಶಂಸಿಸಿ ರಿವ್ಯೂ ನೀಡಿದ್ದಾರೆ ಫ್ಯಾಷನ್ ವಿಮರ್ಶಕರು.
ಉದ್ಯಾನನಗರಿಯಲ್ಲಿ ವಿಂಟರ್ ಲೇಯರ್ ಲುಕ್
ಬೂದು ಬಣ್ಣದ ಬೆಚ್ಚಗಿಡುವ ಕಾರ್ಡಿಗಾನ್ ಶೈಲಿಯ ಜಾಕೆಟ್ ಹಾಗೂ ಅದೇ ವರ್ಣದ ಲೂಸಾದ ಫಾರ್ಮಲ್ ಪ್ಯಾಂಟ್, ಇನ್ನು ಇದಕ್ಕೆ ಬ್ಲಾಕ್ ಶೇಡ್‌ನ ಟರ್ಟಲ್ ನೆಕ್‌ನ ಟೀ ಶರ್ಟ್‌ನಲ್ಲಿ ಶೈನ್ ಶೆಟ್ಟಿ, ಉದ್ಯಾನನಗರಿಯ ಸ್ಟ್ರೀಟ್‌ಗಳಲ್ಲಿ ಸ್ಟ್ರೀಟ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳನ್ನು ಸೆಳೆದಿದೆ.
ಶೈನಿ ಶೆಟ್ಟಿ ವಿಂಟರ್ ಫ್ಯಾಷನ್ ಟಾಕ್
ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್ ಬಗ್ಗೆ ಮಾತನಾಡಿದ ಶೈನ್ ಶೆಟ್ಟಿಯವರು, ತಮ್ಮದು ಸದಾ ಸಿಂಪಲ್ ಫ್ಯಾಷನ್ ಸ್ಟೇಟ್‌ಮೆಂಟ್. ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುತ್ತೇನೆ. ಹಾಗೆಂದು ಟ್ರೆಂಡ್ ಸೆಟ್ ಫಾಲೋ ಮಾಡುವುದಿಲ್ಲ! ಸದಾ ನ್ಯಾಚುರಲ್ ಆಗಿ ಕಾಣಲು ಬಯಸುತ್ತೇನೆ. ಇನ್ನು ಬಿಯರ್ಡ್ ಸ್ಟೈಲ್ ಸದ್ಯದ ತಮ್ಮ ಯೂನಿಕ್ ಫ್ಯಾಷನ್ ಸ್ಟೇಟ್‌ಮೆಂಟ್ ಎನ್ನುತ್ತಾರೆ. ಸೆಲೆಬ್ರೆಟಿ ಡಿಸೈನರ್ ತೇಜು ಕ್ರಾಂತಿ ಹಾಗೂ ಖುಷಿ ಜಗದೀಶ್ ಅವರ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿರುವ ಶೈನ್ ಶೆಟ್ಟಿಯವರ ಇತ್ತೀಚಿನ ವಿಂಟರ್ ಫ್ಯಾಷನ್‌ವೇರ್ ಅವರಿಗೆ ಮಾಡೆಲ್ ಲುಕ್ ನೀಡಿರುವುದು ಖುಷಿ ತಂದಿದೆ.
ಶೈನ್ ಶೆಟ್ಟಿ ವಿಂಟರ್ ಟಿಪ್ಸ್
- ಯುವಕರು ಕಂಫರ್ಟಬಲ್ ಫ್ಯಾಷನ್ ಫಾಲೋ ಮಾಡಿ.
- ಬೆಚ್ಚಗಿಡುವ ಉಲ್ಲನ್ವೇರ್ಗೆ ಆದ್ಯತೆ ನೀಡಿ.
- ಬಿಯರ್ಡ್ ಸ್ಟೈಲ್ ಮುಖವನ್ನು ಸಂರಕ್ಷಿಸುತ್ತದೆ.
- ಆದಷ್ಟೂ ನ್ಯಾಚುರಲ್ ಆಗಿ ಕಾಣಿಸಲು ಟ್ರೈ ಮಾಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ