Site icon Vistara News

Utthana Katha Spardhe: ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2023; ಶಿರಸಿಯ ಕರುಣಾಕರ ಹಬ್ಬುಮನೆ ಪ್ರಥಮ

Utthana Katha Spardhe 2023

ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2023ರಲ್ಲಿ (Utthana Katha Spardhe) ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಕಥಾಸ್ಪರ್ಧೆಯಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿದಂತೆ ಒಟ್ಟು 352 ಕಥೆಗಳು ಭಾಗವಹಿಸಿದ್ದವು. ಖ್ಯಾತ ಕತೆಗಾರರು, ಪತ್ರಕರ್ತರಾದ ಜೋಗಿ (ಗಿರೀಶ್ ಹತ್ವಾರ್) ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದ್ದಾರೆ.

ಮೊದಲನೆ ಬಹುಮಾನವನ್ನು (15,000 ರೂ.) ಕರುಣಾಕರ ಹಬ್ಬುಮನೆ ಅವರ ‘ಅಂತರಂಗದೊಳಗೂ ಒಂದು ಸಂಬಂಧ’ ಎಂಬ ಕಥೆ ಪಡೆದಿದೆ. ಎರಡನೆಯ ಬಹುಮಾನವನ್ನು (12,000 ರೂ.) ಶಿವಮೊಗ್ಗದ ಮೃತ್ಯುಂಜಯ ಹೊಸಮನೆ ಅವರ ‘ವ್ಯೂಹ’ ಕಥೆ ಪಡೆದಿದ್ದು, ಮೂರನೆಯ ಬಹುಮಾನವನ್ನು (10,000 ರೂ.) ಸಂಪತ್ ಸಿರಿಮನೆ ಅವರ ‘ಮರೀಚಿಕೆ’ ಕತೆ ಪಡೆದಿದೆ.

ಇದನ್ನೂ ಓದಿ | Raja Marga Column : ಶ್ರೀನಿವಾಸ್‌ ರಾಮಾನುಜನ್‌ ಬರೆದ ಪ್ರೇಮಪತ್ರಗಳ ದುರಂತ ಕಥೆ!

ಇನ್ನು 5 ಕಥೆಗಳು ಮೆಚ್ಚುಗೆ ಬಹುಮಾನವನ್ನು (2,000 ರೂ.) ಪಡೆದಿವೆ. ದಕ್ಷಿಣ ಕನ್ನಡದ ಜುಬೇರ್ ಅಹಮದ್ ಪರಪ್ಪು ಅವರು ಬರೆದ ‘ಸಕರಿಯಾನ ತಟ್ಟುಕಡ’, ಅರಸೀಕೆರೆಯ ಡಿ.ಎಸ್. ರಾಮಸ್ವಾಮಿ ಅವರು ಬರೆದ ‘ಜೂಜಿನಡ್ಡೆಯ ಬೆನ್ನು ಹಿಡಿದು’, ಬೆಂಗಳೂರಿನ ಡಾ. ವಾಸುದೇವ ಶೆಟ್ಟಿ ಅವರು ಬರೆದ ‘ಪಬ್ಲಿಕ್ ಟಾಯ್ಲೆಟ್’, ಬೆಂಗಳೂರಿನ ಶ್ರೀಲೋಲ ಸೋಮಯಾಜಿ ಅವರು ಬರೆದ ‘ಚೆ. ಗವಾರನ ಛಾಯಾಚಿತ್ರ’, ಕಾಸರಗೋಡಿನ ರಾಜಶ್ರೀ ಟಿ. ಪೆರ್ಲ ಅವರ ‘ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ’ – ಕಥೆಗಳು ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version