ಕಾರವಾರ: (Honnavar News) ಹೊನ್ನಾವರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯ ಸಿಬ್ಬಂದಿ ಅನಾಥ ವೃದ್ಧೆಗೆ 6 ತಿಂಗಳು ಉಚಿತ ಚಿಕಿತ್ಸೆ ನೀಡಿದ್ದಲ್ಲದೆ, ಚಿಕಿತ್ಸೆ ಫಲಿಸದೆ ನಿಧನರಾದ ಆಕೆಯ ಶವ ಸಂಸ್ಕಾರವನ್ನೂ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಕಮಲಾಬಾಯಿ ಎಂಬಾಕೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. 6 ತಿಂಗಳ ಹಿಂದೆ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ದಾಖಲಾದ ವೃದ್ಧೆಗೆ ಕ್ಯಾನ್ಸರ್ ತಜ್ಞ ಡಾ. ವಿಶ್ವಾಸ ಪೈ ಮತ್ತು ಡಾ. ಅಶೋಕ ಯರಗುಡ್ಡಿ ಚಿಕಿತ್ಸೆ ನೀಡಿದ್ದರು. ತಾನು ನಿಧನರಾದರೆ ಶವ ಸಂಸ್ಕಾರವನ್ನು ನೀವೇ ಮಾಡಿ, ನನ್ನ ಆಸ್ತಿಯನ್ನು ನೀವೇ ತೆಗೆದುಕೊಳ್ಳಿ ಎಂದು ವೃದ್ಧೆ ಹೇಳಿದ್ದರು.
ಶವ ಸಂಸ್ಕಾರಕ್ಕೆ ಬಂಧುಗಳು ಬರದ ಕಾರಣ ಉಮೇಶ ಕಾಮತ್ ಅವರ ಸಹಕಾರದಿಂದ ಆಸ್ಪತ್ರೆಯ ಸಿಬ್ಬಂದಿಯೇ ಶವ ಸಂಸ್ಕಾರ ನೆರವೇರಿಸಿದರು. ಮೃತರ ಆಸ್ತಿ ನಮಗೆ ಬೇಡ, ಅದನ್ನು ಅವರ ಅಧಿಕೃತ ವಾರಸುದಾರರು ಪಡೆದುಕೊಳ್ಳಲಿ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆ್ಯಂಟನಿ ಲೋಪಿಸ್ ಹೇಳಿದ್ದಾರೆ.
ಮಾನವೀಯ ಕಾಳಜಿಯ ಇಂತಹ ಹಲವು ಸೇವೆಯನ್ನು ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯ ಸಿಬ್ಬಂದಿ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ | Panchamasali reservation | ಪಂಚಮಸಾಲಿ ವಿರಾಟ್ ಸಮಾವೇಶದ ಕಡೆಗೆ ಬೃಹತ್ ಪಾದಯಾತ್ರೆ ಆರಂಭ