Site icon Vistara News

Karwar News | ನೌಕಾಸೇನಾ ಸಿಬ್ಬಂದಿಗೆ ಹುಟ್ಟೂರಿನಲ್ಲಿ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ

Naval personnel ankola

ಕಾರವಾರ: ಭಾರತೀಯ ಸೇನೆಯಲ್ಲಿ ಯೋಧನಾಗಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ಅಕಾಲಿಕವಾಗಿ ಮರಣ ಹೊಂದಿದ ಅಂಕೋಲಾ ತಾಲೂಕಿನ ಲಕ್ಷ್ಮೇಶ್ವರದ ನಾಗರಾಜ ಮುಕುಂದ ಕಳಸ ಅವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಈ ಮೂಲಕ ಅಂತಿಮ ನಮನವನ್ನೂ ಸಲ್ಲಿಸಲಾಯಿತು.

ನಾಗರಾಜ ಮುಕುಂದ ಅವರ ಪಾರ್ಥಿವ ಶರೀರವನ್ನು ಅಂಡಮಾನ್ ನಿಕೋಬಾರ್‌ನಿಂದ (ಪೋರ್ಟ್‌ಬ್ಲೇರ್) ಹೈದಾರಾಬಾದ್-ಗೋವಾ ಮಾರ್ಗವಾಗಿ ಗುರುವಾರ (ಜ.೫) ಹುಟ್ಟೂರಾದ ಲಕ್ಷ್ಮೇಶ್ವರದ ನಿವಾಸಕ್ಕೆ ತರಲಾಯಿತು.

ಅಕಾಲಿವಾಗಿ ಮೃತಪಟ್ಟ ನೌಕಾಸೇನಾ ಸಿಬ್ಬಂದಿ (ಒಳ ಚಿತ್ರ)

ಬೆಳಗ್ಗೆಯಿಂದ ಕೆಲವು ಸಮಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿಗಿತ್ತು. ತಾಲೂಕಾಡಳಿತದ ಪರವಾಗಿ ತಹಸೀಲ್ದಾರ್ ಉದಯ ಕುಂಬಾರ, ಸಿಪಿಐ ಸಂತೋಷ ಶೆಟ್ಟಿ, ಪಿಎಸ್‌ಐ ಪ್ರವೀಣ ಕುಮಾರ, ನೌಕಾ ಸೇನೆಯ ಅಧಿಕಾರಿಗಳು, ಸ್ಥಳೀಯರಾದ ಆರ್ ಟಿ ಮಿರಾಶಿ, ಗೋಪಾಲಕೃಷ್ಣ ನಾಯಕ, ಸುಜಾತಾ ಗಾಂವಕರ ಮತ್ತಿತರ ಗಣ್ಯರು ಅಂತಿಮ ನಮನ ಸಮರ್ಪಿಸಿದರು.‌ ಭಾರತೀಯ ಸೇನೆಯ ಅಧಿಕಾರಿಗಳೊಂದಿಗೆ ಸ್ಥಳೀಯ ನೌಕಾ ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ | Karwar News | ಅಂಕೋಲಾದ ನೌಕಾಸೇನಾ ಸಿಬ್ಬಂದಿ ಅಂಡಮಾನ್-ನಿಕೋಬಾರ್‌ನಲ್ಲಿ ಅಕಾಲಿಕ ಸಾವು

ಸಾರ್ವಜನಿಕರು ಅಂತಿಮ ದರ್ಶನ ಪಡೆದ ನಂತರ ವಾಹನದ ಮೂಲಕ ಐಸ್ ಫ್ಯಾಕ್ಟರಿ, ಕೆ.ಸಿ ರಸ್ತೆ , ಜೈ ಹಿಂದ್ ಸರ್ಕಲ್, ಕಣಕಣೇಶ್ವರ ಮಾರ್ಗವಾಗಿ ಮೆರವಣಿಗೆ ಮೂಲಕ ಕೋಡೆವಾಡದ ಮುಕ್ತಿ ಧಾಮಕ್ಕೆ ಪಾರ್ಥಿವ ಶರೀರವನ್ನು ತಲುಪಿಸಲಾಯಿತು.

ಇದನ್ನೂ ಓದಿ | Thamizhagam | ತಮಿಳುನಾಡಿಗಿಂತ ತಮಿಳಗಂ ಹೆಚ್ಚು ಸೂಕ್ತ ಎಂದ ರಾಜ್ಯಪಾಲರ ವಿರುದ್ಧ ಆಕ್ರೋಶ

ಈ ವೇಳೆ ಭಾರತಾಂಬೆಗೆ ಜಯವಾಗಲಿ, ವೀರ ಜವಾನ ಅಮರ್‌ ರಹೇ ಎಂದು ಸಾರ್ವಜನಿಕರು ಘೋಷಣೆ ಕೂಗಿದರು.ಈ ವೇಳೆ ಶವ ಪೆಟ್ಟಿಗೆಗೆ ಹೊದಿಸಿದ್ದ ತ್ರಿವರ್ಣ ಧ್ವಜ, ಮಡಿದ ಸಿಬ್ಬಂದಿಯ ಸಮವಸ್ತ್ರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ದೇಶ ಸೇವೆಗೆ ಮಗನ ಕಳುಹಿಸಿದ ತಂದೆಗೆ ಗೌರವ ಸಲ್ಲಿಸಲಾಯಿತು.

ಶಿಸ್ತುಬದ್ಧ ಪಥ ಸಂಚಲನ, ಪುಷ್ಪ ಚಕ್ರ ಸಮರ್ಪಣೆ, ಮೌನಾಚರಣೆ ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ವಾದ್ಯ ಬಾರಿಸಿ ಅಂತಿಮ ಗೌರವ ಸಮರ್ಪಿಸಿದ ತರುವಾಯ ತಂದೆ ಮುಕುಂದ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಗ್ರಾಮಸ್ಥರು, ಕುಟುಂಬಸ್ಥರ ಸಹಕಾರದಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

ಇದನ್ನೂ ಓದಿ | Rajinikanth | ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಮೋಹನ್‌ಲಾಲ್!

Exit mobile version