Site icon Vistara News

Karwar News | ಗುಡ್ಡದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಕಡವೆ ಹೃದಯಾಘಾತದಿಂದ ಸಾವು

Hill in Binaga Kadave karwar

ಕಾರವಾರ: ನಗರದ ಹೊರವಲಯದ ಬಿಣಗಾದಲ್ಲಿ ಗುಡ್ಡದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಗಂಡು ಕಡವೆಯೊಂದು ಹೃದಯಾಘಾತದಿಂದ ಮೃತಪಟ್ಟಿದೆ. ಈ ಕಡೆವೆಯು ಸುಮಾರು ಮೂರು ವರ್ಷದ ಪ್ರಾಯದ್ದಾಗಿತ್ತು.

ಗುಡ್ಡದ ಮೇಲಿನಿಂದ ಬಿಣಗಾ ಗ್ರಾಸಿಮ್ ಇಂಡಸ್ಟ್ರೀಸ್‌ನ ಆವರಣದ ಕಾಲುವೆಯಲ್ಲಿ ಬಿದ್ದು ಬಲ ಭಾಗದ ಹಿಂಗಾಲು ಮುರಿತಕ್ಕೊಳಗಾಗಿತ್ತು. ಈ ಬಗ್ಗೆ ಗ್ರಾಸಿಮ್‌ನ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಬಳಿಕ ಅರಣ್ಯ ಅಧಿಕಾರಿಗಳು ಪಶು ವೈದ್ಯರಿಂದ ಕಡವೆಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ, ಭಯಭೀತಗೊಂಡಿದ್ದ ಕಡವೆ ಚಿಕಿತ್ಸೆಯ ಬಳಿಕ ಹೃದಯಾಘಾತದಿಂದ ಅಸುನೀಗಿದೆ. ವನ್ಯ ಪ್ರಾಣಿಗಳ ಕಳೇಬರವನ್ನು ಹೂಳುವುದು ಅಥವಾ ದಹಿಸುವುದನ್ನು ಅರಣ್ಯ ಇಲಾಖೆ ನಿಷೇಧವಿದೆ. ಈ ಹಿನ್ನೆಲೆಯಲ್ಲಿ ಬೇರೆ ಪ್ರಾಣಿಗಳಿಗೆ ಆಹಾರವಾಗಿ ಬಿಡುವಂತೆ ಆದೇಶಿಸಲಾಗಿದೆ.

ಹೀಗಾಗಿ ಕಡವೆಯ ಮೃತದೇಹವನ್ನು ಇತರೆ ಪ್ರಾಣಿಗಳ ಆಹಾರಕ್ಕಾಗಿ ಅರಣ್ಯ ಪ್ರದೇಶದಲ್ಲಿ ಹಾಗೆಯೇ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Elephant Attack : ಚಾಮರಾಜನಗರದಲ್ಲಿ ಮತ್ತೆ ಕಾಡಾನೆಗಳ ದಾಳಿ; ಅಪಾರ ಬೆಳೆ ನಷ್ಟ

Exit mobile version