Site icon Vistara News

Karwar News: ಬರ್ಗಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ; ಗ್ರಾಮಸ್ಥರ ಹಲವು ಸಮಸ್ಯೆಗಳಿಗೆ ಸಿಕ್ಕಿತು ಪರಿಹಾರ

Bargi village karwar ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

#image_title

ಕಾರವಾರ: “ಸರ್ಕಾರ ಒಂದು ಉದ್ದೇಶ ಇಟ್ಟುಕೊಂಡು ಜಿಲ್ಲಾಧಿಕಾರಿಗಳ (district collector’s ) ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಇದನ್ನು ಸಫಲವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿದೆ” ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, “ಇಲ್ಲಿನ ಸಾರ್ವಜನಿಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಲಿಖಿತವಾಗಿ ನೀಡಿ ಹಾಗೂ ಸಾಮೂಹಿಕ ಸಮಸ್ಯೆಗಳನ್ನು ನೇರವಾಗಿ ತಿಳಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ವೈಯಕ್ತಿಕ ಸಮಸ್ಯೆಗಳಿಗೆ ಸಲ್ಲಿಸಿದ ಮನವಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಿ ಕೂಡಲೇ ಅಂತಹ ಮನವಿಗಳನ್ನು ಇತ್ಯರ್ಥಪಡಿಸಿ ಪರಿಹಾರ ಒದಗಿಸಿಕೊಡಲಾಗುವುದು” ಎಂದರು.

“ಸಾರ್ವಜನಿಕರು ಬಸ್ಸು, ಒತ್ತುವರಿ ಹಾಗೂ ಕಂದಾಯ ಇಲಾಖೆಯ ಸರ್ವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅವುಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ, ಅವುಗಳಿಗೆ ಪೂರಕವಾದ ಪರಿಹಾರ ಒದಗಿಸಲಾಗುವುದು” ಎಂದರು.

ಇದನ್ನೂ ಓದಿ: Rahul Gandhi: ಪ್ರತಿಪಕ್ಷಗಳು ಒಂದಾದರೆ ಮೋದಿಯನ್ನು ಸೋಲಿಸುವುದು ಕಷ್ಟವಲ್ಲ! ರಾಹುಲ್ ವಿಶ್ವಾಸ

ತಹಸೀಲ್ದಾರ್ ವಿವೇಕ್ ಶೇಣ್ವಿ ಮಾತನಾಡಿ, “ಸರ್ಕಾರದ ಆದೇಶದಂತೆ ಪ್ರತಿ 3ನೇ ಶನಿವಾರ ಜಿಲ್ಲೆಯ ಗ್ರಾಮವೊಂದನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮಾಡುವುದು ವಾಡಿಕೆ. ಆದರೆ ಈ ಬಾರಿ ಮೂರನೇ ಶನಿವಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಂಗಳವಾರ (ಫೆ.೨೧) ನಡೆಸಲಾಗಿದ್ದು, ಈ ದಿನ ಬರ್ಗಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿನ ಜನರ ಅಹವಾಲು ಸ್ವೀಕರಿಸಿ ಮತ್ತು ಅವರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ” ಎಂದರು.

ಇದನ್ನೂ ಓದಿ: IPL 2023: ಆರ್​ಸಿಬಿಗೆ ಗಾಯದ ಚಿಂತೆ; ಸ್ಟಾರ್​ ಆಟಗಾರರು ಟೂರ್ನಿಯಿಂದ ಔಟ್​?

ಬರ್ಗಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆಯ ಯೋಜನೆಯಿಂದ ಭೂಮಿ ಕಳೆದುಕೊಂಡಿದ್ದವರಿಗೆ ಪರಿಹಾರ, ಅಂಗನವಾಡಿ ಶಾಲೆಯ ಕಳಪೆ ಕಾಮಗಾರಿಗೆ ಪರಿಹಾರ, ಗ್ರಾಮದಲ್ಲಿ ವಿದ್ಯುತ್, ರೋಡ್ ಡಾಂಬರೀಕರಣ, ಚರಂಡಿಗೆ ಪೈಪ್, ರಸ್ತೆ ಪಕ್ಕ ಚರಂಡಿ ನಿರ್ಮಾಣ, ಬೆಟ್ಕುಳಿ ಸರ್ವಿಸ್ ರಸ್ತೆ, ಶಾಲಾ ಕೊಠಡಿಗಳ ನಿರ್ಮಾಣ, ಶುದ್ಧ ಕುಡಿಯುವ ನೀರು, ಬಾವಿಗಳಿಗೆ ಉಪ್ಪು ನೀರು ಸೇರ್ಪಡೆಗೆ ಪರಿಹಾರ, ಬಸ್ಸು ನಿಲುಗಡೆಗೆ ವ್ಯವಸ್ಥೆ, ಪಿಂಚಣಿ, ಸಮುದಾಯದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕ, ಸಮುದಾಯ ಭವನ ಸ್ವಚ್ಛತೆ, ಮುಂತಾದ ಸಾರ್ವಜನಿಕ ಮನವಿಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು. ಅವುಗಳಿಗೆ ಸೂಕ್ತ ಪರಿಹಾರವನ್ನು ಈ ಕೂಡಲೇ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಿರುವ ಬಗ್ಗೆ ಕೂಡಲೇ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Viral News : ಈ ಫೋಟೋದಲ್ಲಿ ಗೊಂಬೆಯನ್ನು ಹುಡುಕೋದು ಎಷ್ಟೊಂದು ಕಷ್ಟ! ನೀವೇನಾದರೂ ಹುಡುಕಬಲ್ಲಿರಾ?

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಅಂಗವಿಕಲ ಪೋಷಿತ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳ ಮಂಜೂರಾತಿ ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಕುಮಟಾ ಉಪ ವಿಭಾಗಧಿಕಾರಿ ರಾಘವೇಂದ್ರ ಜಗಲಾಸರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶಾಲಾಕ್ಷಿ ಪಟಗಾರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೋಲಗದ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ನಾಗರತ್ನ ನಾಯ್ಕ, ಎಸಿಎಫ್ ಲೋಹಿತ್, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: CLT Exam : ಸರ್ಕಾರಿ ನೌಕರರ ಕಂಪ್ಯೂಟರ್‌ ಟೆಸ್ಟ್‌; ಮತ್ತೆ ಡಿ.31ರ ವರೆಗೆ ಅವಕಾಶ ನೀಡಿದ ಸರ್ಕಾರ

Exit mobile version