Site icon Vistara News

Karwar News: ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ: ಶಾಸಕಿ ರೂಪಾಲಿ ಎಸ್. ನಾಯ್ಕ

MLA Rupali S Naik karwar

#image_title

ಕಾರವಾರ: ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಆದಷ್ಟು ಶೀಘ್ರದಲ್ಲಿ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವಂತೆ ಕಾರವಾರ ಅಂಕೋಲಾ (Karwar News) ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಅವರು ವಿಧಾನಸಭೆಯ ಗಮನ ಸೆಳೆದರು.

ಅವೆಷ್ಟೋ ವರ್ಷಗಳಿಂದ ಬಡತನದಲ್ಲೇ ಬದುಕು ನಡೆಸುತ್ತಿರುವ ಹಾಲಕ್ಕಿ ಸಮುದಾಯದವರು ಜಿಲ್ಲೆಯಲ್ಲಿ ಸುಮಾರು 1.45 ಲಕ್ಷದಷ್ಟಿದ್ದಾರೆ. ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ 46 ಸಾವಿರದಷ್ಟು ಜನರಿದ್ದಾರೆ. ಇವರ ಬಹುಕಾಲದ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ: BJP Karnataka: ಪ್ರಧಾನಿ ಮೋದಿಯೇ ಬಿಜೆಪಿಯ ಆಸ್ತಿ; ಕಾಂಗ್ರೆಸ್‌ನವರು ರಾಹುಲ್‌ ಹೆಸರಲ್ಲಿ ಮತ ಕೇಳಲಿ: ಬಿ.ಎಸ್‌. ಯಡಿಯೂರಪ್ಪ ಸವಾಲು

ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ನೀಡಲಾಗಿತ್ತು. ಆ ಬಗ್ಗೆ ಮತ್ತೆ ಸ್ಪಷ್ಟೀಕರಣ ಕೇಳಿದ್ದರಿಂದ ಮತ್ತೆ ಅಧ್ಯಯನ ವರದಿ ಸಿದ್ಧವಾಗಿದೆ. ಅದನ್ನು ಕೇಂದ್ರಕ್ಕೆ ಶೀಘ್ರದಲ್ಲಿ ಕಳುಹಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಕೈಮುಗಿದು ವಿನಂತಿಸಿದರು.

ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆ ಬಹುಕಾಲದಿಂದ ಇದೆ. ಆದಷ್ಟು ಶೀಘ್ರದಲ್ಲಿ ಈ ಬೇಡಿಕೆ ಈಡೇರಬೇಕು. ಜಿಲ್ಲೆಯ ವಿವಿಧೆಡೆ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವ ಇವರ ಬೇಡಿಕೆಯನ್ನು ತ್ವರಿತಗತಿಯಲ್ಲಿ ಈಡೇರಿಸಲು ಕ್ರಮ ಕೈಗೊಳ್ಳುವಂತೆ ರೂಪಾಲಿ ಎಸ್.ನಾಯ್ಕ ಅವರು ಮೇಲಿಂದ ಮೇಲೆ ವಿನಂತಿಸಿದರು.

ಇದನ್ನೂ ಓದಿ: Chetan Sharma: ಟೀಮ್​ ಇಂಡಿಯಾದಲ್ಲಿ ಎರಡು ಬಣಗಳಿವೆ; ಚೇತನ್​ ಶರ್ಮಾ

Exit mobile version