Site icon Vistara News

Karwar News: ಜನ ಸಾಮಾನ್ಯರಂತೆ ತಾವೇ ಮೀನು ಖರೀದಿಸಿ ಸರಳತೆಯಿಂದ ಗಮನ ಸೆಳೆಯುವ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್

MLC Ganapati Ulvekar karwar

#image_title

ಕಾರವಾರ: ಒಮ್ಮೆ ಶಾಸಕರಾದರೆ ಸಾಕು, ತಮ್ಮ ವ್ಯಕ್ತಿತ್ವವೇ ಬದಲಾವಣೆ ಆಯಿತು ಎನ್ನುವವರ ನಡುವೆ ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ (MLC Ganpati Ulwekar) ತಮ್ಮ ಸರಳತೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಈ ಹಿಂದೆ ನಗರಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಉಳ್ವೇಕರ್, ಆ ವೇಳೆಯಲ್ಲಿಯೂ ಪ್ರತಿನಿತ್ಯ ತಾವೇ ಬೆಳಗ್ಗೆ ಖುದ್ದಾಗಿ ರಸ್ತೆಗೆ ಇಳಿದು ಕಾರವಾರದ ಸ್ವಚ್ಛತೆ ಸೇರಿದಂತೆ ನಾನಾ ಕೆಲಸಗಳನ್ನು ಮಾಡಿಸುವ ಮೂಲಕ ಗಮನ ಸೆಳೆದಿದ್ದರು. ನಗರಸಭೆಯ ಸಿಂಪಲ್ ಅಧ್ಯಕ್ಷ ಎಂದು ಸಹ ಕರೆಸಿಕೊಂಡಿದ್ದರು. ಸದ್ಯ ವಿಧಾನ ಪರಿಷತ್ ಸದಸ್ಯರಾಗಿ ಗಣಪತಿ ಉಳ್ವೇಕರ್ ಒಂದು ವರ್ಷದ ಅವಧಿ ಮುಗಿಸಿದ್ದಾರೆ. ಆದರೆ ಪರಿಷತ್ ಸದಸ್ಯರಾದಾಗಿನಿಂದ ಅವರ ವ್ಯಕ್ತಿತ್ವ ಹಾಗೇ ಇದೆ.

ಎಂದಿನಂತೆ ಬೆಳಗ್ಗೆ ಎದ್ದು ಗುರುಮಠಕ್ಕೆ ತೆರಳಿ, ಜನ ಸಾಮಾನ್ಯರಂತೆ ಓಡಾಟ ನಡೆಸುತ್ತಾರೆ. ಇದಲ್ಲದೇ ತನ್ನ ಒಡನಾಡಿ, ಸಿಕ್ಕ ಜನರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಯಾರೇ ಸಮಸ್ಯೆ ಎಂದು ಬಂದರೂ ಅವರಿಗೆ ಸ್ಪಂದಿಸುವ ಕಾರ್ಯಕ್ಕೆ ಇಳಿಯುತ್ತಾರೆ. ಅಲ್ಲದೇ ತಾವೇ ಖುದ್ದಾಗಿ ಹೋಗಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡಿ ಮನೆಗೆ ತೆರಳುತ್ತಾರೆ. ಹೀಗೆ ಕೆಲಸದ ನಿಮಿತ್ತ ಅಂಕೋಲಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿನ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಗಣಪತಿ ಉಳ್ವೇಕರ್, ಮೀನು ಮಾರಾಟಗಾರ ಮಹಿಳೆಯೊಬ್ಬರ ಬಳಿ ತಾವೇ ತೆರಳಿ ಮೀನು ಖರೀದಿಸಿ ಸರಳತೆ ಮೆರೆದಿದ್ದಾರೆ.

ಇದನ್ನೂ ಓದಿ: Kamal Haasan: ವಿಚ್ಛೇದನ ನಂತರ ನನ್ನ ಬಳಿ ಇದ್ದದ್ದು ಕೇವಲ 60 ರೂ. : ಕಮಲ್‌ ಹಾಸನ್‌ ಮಾಜಿ ಪತ್ನಿ ಸಾರಿಕಾ ಹೇಳಿದ್ದೇನು?

ಇಂದಿಗೂ ತಾವೊಬ್ಬ ಶಾಸಕ, ತಮಗೆ ಶಿಷ್ಟಾಚಾರಗಳಿವೆ ಎಂದು ಗಣಪತಿ ಉಳ್ವೇಕರ್ ಭಾವಿಸದೆ ಜನ ಸಾಮಾನ್ಯರಲ್ಲಿ ತಾವೊಬ್ಬ ಎಂದು ನಡೆದುಕೊಳ್ಳುವ ಗುಣಕ್ಕೆ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಲ್ಲದೇ ಪ್ರೀತಿಯಿಂದ ಗಣಪತಿ ಅಣ್ಣ ಎಂದೇ ಸಾಮಾನ್ಯವಾಗಿ ಕರೆಯುತ್ತಾರೆ. ದೊಡ್ಡ ಹುದ್ದೆಯಲ್ಲಿ ಇದ್ದರೂ ಉಳ್ವೇಕರ್ ಅವರ ಈ ಸರಳತೆ ಮಾದರಿ ಎನ್ನುವುದು ಹಲವರ ಅಭಿಪ್ರಾಯ.

ಇದನ್ನೂ ಓದಿ: Modi in Karnataka: ನಾನು ಅತಿಥಿ ಅಲ್ಲ; ಇದೇ ಮಣ್ಣಿನ ಮಗ: ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

Exit mobile version