Site icon Vistara News

Karwar News : ಭತ್ತದ ಬಣವೆಗೆ ಬೆಂಕಿ ತಗುಲಿ 30 ಸಾವಿರ ರೂ. ನಷ್ಟ

Fire in the stack karwar

ಕಾರವಾರ: ಕುಮಟಾ ತಾಲೂಕಿನ (Karwar News) ಹೆಗಡೆಯ ಕಲ್ಕೊಡ ರಸ್ತೆಯ ಶ್ರೀಕೃಷ್ಣ ದೇವಸ್ಥಾನ ಎದುರಿನ ಗದ್ದೆಯಲ್ಲಿ ಹಾಕಿದ್ದ ಭತ್ತದ ಬಣವೆಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿ ನಷ್ಟ ಉಂಟಾಗಿದೆ.

ಹೆಗಡೆ ಗ್ರಾಮದ ರೈತ ಶೇಷಗಿರಿ ವೆಂಕಟ್ರಮಣ ನಾಯ್ಕ ಎಂಬುವವರು ತಾವು ಬೆಳೆದ ಭತ್ತದ ಪೈರನ್ನು ಗದ್ದೆಯಲ್ಲಿ ಬಣವೆ ಹಾಕಿದ್ದರು. ಬಣವೆಯ ಮೇಲ್ಭಾಗದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದೆ. ಅಲ್ಲಿ ಎರಡು ಹಕ್ಕಿಗಳು ಕುಳಿತುಕೊಂಡಿದ್ದು, ಅವುಗಳ ರೆಕ್ಕೆ ಭಾಗಕ್ಕೆ ಕರೆಂಟಿನಿಂದ ಬೆಂಕಿ ತಗುಲಿದೆ. ಅಲ್ಲಿ ಹೊತ್ತಿಕೊಂಡ ಬೆಂಕಿಯು ಬಣವೆಯ ಮೇಲೆ ಬಿದ್ದು, ಅವಘಡ ಸಂಭವಿಸಿದೆ.

ಇದನ್ನೂ ಓದಿ | Salute to police | ಅತಿ ಎತ್ತರದ ಹೋರ್ಡಿಂಗ್‌ ಟವರಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಪಾರಿವಾಳವನ್ನು ಒಂಟಿಯಾಗಿ ಹತ್ತಿ ರಕ್ಷಿಸಿದ ಪೊಲೀಸ್‌!

ಬೆಂಕಿಯ ಕೆನ್ನಾಲಿಗೆಗೆ ನಾಲ್ಕು ಬಣವೆಗಳು ಸಂಪೂರ್ಣ ಭಸ್ಮವಾಗಿವೆ. ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳವು ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ ಗದ್ದೆಗಳಿಗೆ ಬೆಂಕಿ ಹರಡದಂತೆ ಎಚ್ಚರ ವಹಿಸಿದೆ. ಗ್ರಾಮ ಲೆಕ್ಕಾಧಿಕಾರಿ ವಿನೋದ್‌ ರಾವ್ ಸ್ಥಳಕ್ಕೆ ಭೇಟಿ ನೀಡಿ ಸುಮಾರು 30 ಸಾವಿರ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಿದ್ದಾರೆ.

ಅಲ್ಲದೆ, ಘಟನಾ ಸ್ಥಳಕ್ಕೆ ಹೆಗಡೆ ಗ್ರಾಪಂ ಪಿಡಿಒ ವೆಂಕಟ್ರಮಣ ಪಟಗಾರ, ಗ್ರಾಪಂ ಸದಸ್ಯರಾದ ಬಿ.ಜಿ. ಶಾನಭಾಗ, ರಾಮಚಂದ್ರ ಪಟಗಾರ, ವಿದ್ಯಾ ಗೌಡ ಆನಂದು ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಬೆಂಕಿ ನಂದಿಸಲು ಸ್ಥಳೀಯರಾದ ಮೋಹನ ಶಾನಭಾಗ, ಅಮರನಾಥ ಭಟ್ಟ, ಪ್ರಸನ್ನ ನಾಯ್ಕ ಕಲ್ಕೊಡ ಹಾಗೂ ಗ್ರಾಮಸ್ಥರು ಸಹಕರಿಸಿದರು.

ಇದನ್ನೂ ಓದಿ | BWSSB Corruption | ಕೋಟ್ಯಂತರ ರೂಪಾಯಿ ನುಂಗಿದ್ದ ಜಲಮಂಡಳಿಯ 13 ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿ ಅಮಾನತು

Exit mobile version