Site icon Vistara News

Karwar News: ಸರ್ಕಾರದ ಸೌಲಭ್ಯ ತಲುಪಿಸಲು ಫಲಾನುಭವಿಗಳ ಆಯ್ಕೆ ಮಾಡಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Kota Srinivas Poojary karwar

#image_title

ಕಾರವಾರ: ಜಿಲ್ಲೆಯ ಪ್ರತಿ ಇಲಾಖೆಯಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಸರ್ಕಾರದ ಸೌಲಭ್ಯಗಳು (government benefits) ತಲುಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಫಲಾನುಭವಿಗಳ ಸಮಾವೇಶದಲ್ಲಿ ಸಂಬಂಧಪಟ್ಟ ಸೌಲಭ್ಯಗಳನ್ನು ಪೂರೈಸಲು ಕ್ರಮವಹಿಸುವಂತೆ ಸೂಚಿಸಿದರು. ಶೀಘ್ರದಲ್ಲಿಯೇ ಫಲಾನುಭವಿಗಳ ಸಮಾವೇಶದ ದಿನಾಂಕವನ್ನು ನಿಗದಿಪಡಿಸಲಾಗುವುದು. ಆ ಸಮಯದಲ್ಲಿ ಸಂಬಂಧಿಸಿದ ಎಲ್ಲ ಫಲಾನುಭವಿಗಳಿಗೆ ಅಗತ್ಯತೆಗಳನ್ನು ಪೂರೈಸಲಾಗುವುದು” ಎಂದರು.

ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ: ಹಿಮಂತ್ ಬಿಸ್ವಾ ಶರ್ಮಾ, ಈಶಾನ್ಯ ಭಾರತದ ಬಿಜೆಪಿ ಕೋಟೆ ಕಾಯುತ್ತಿರುವ ಕೋತ್ವಾಲ್!

ಈಗಾಗಲೇ ಜಿಲ್ಲೆಯಿಂದ ವಿವಿಧ ಇಲಾಖೆಗಳ ವಿವಿಧ ಯೋಜನೆಗಳಿಂದ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಕೃಷಿ ಇಲಾಖೆಯಿಂದ 527, ತೋಟಗಾರಿಕೆ ಇಲಾಖೆಯಿಂದ 148, ರೇಷ್ಮೆ ಇಲಾಖೆಯಿಂದ 06, ಅರಣ್ಯ ಇಲಾಖೆಯಿಂದ 349, ಶಿಕ್ಷಣ ಇಲಾಖೆಯಿಂದ 27, ಸಮಾಜ ಕಲ್ಯಾಣ ಇಲಾಖೆಯಿಂದ 19, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 10, ಕೌಶಲ್ಯ ಇಲಾಖೆಯಿಂದ 72, ಪಶುಪಾಲನೆ ಇಲಾಖೆಯಿಂದ 123, ಕಾರ್ಮಿಕ ಇಲಾಖೆಯಿಂದ 1214, ಕಂದಾಯ ಇಲಾಖೆಯಿಂದ 249, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 182, ಮೀನುಗಾರಿಕೆ ಇಲಾಖೆಯಿಂದ 226, ನಗರಾಭಿವೃದ್ಧಿ ಇಲಾಖೆಯಿಂದ 608, ಹೆಸ್ಕಾಂ ಇಲಾಖೆಯಿಂದ 7513, ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ 20,438, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 192 ಹೀಗೆ ಒಟ್ಟು ವಿವಿಧ ಇಲಾಖೆಗಳಿಂದ 31,903 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: CJI Chandrachud: ಸುಳ್ಳು ಸುದ್ದಿ, ಸೋಶಿಯಲ್‌ ಮೀಡಿಯಾಗೆ ಸತ್ಯ ಬಲಿ: ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್

ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಪ್ರೊಬೆಷನರಿ ಐಎಎಸ್ ಜುಬಿನ್ ಮಹೋಪಾತ್ರ, ಡಿಎಫ್ಒ ಪ್ರಶಾಂತ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Lithium Discovery : ಜಮ್ಮು ಕಾಶ್ಮೀರದಲ್ಲಿ ಹೇರಳ ಲಿಥಿಯಂ ನಿಕ್ಷೇಪದ ಬಗ್ಗೆ 26 ವರ್ಷ ಹಿಂದೆಯೇ ವರದಿ ಸಲ್ಲಿಸಿದ್ದ ಜಿಎಸ್‌ಐ

Exit mobile version