ಕಾರವಾರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕವು ಕುಮಟಾ ಪಟ್ಟಣದ ಹೆಡ್ ಬಂದರ್ ಕಡಲ ತೀರದಲ್ಲಿ ಸ್ವಾಮಿ ವಿವೇಕಾನಂದರ ಮರಳಿನ ಶಿಲ್ಪವನ್ನು ರಚಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿತು.
ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ನಿಮಿತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾ ಘಟಕದ ಕಾರ್ಯಕರ್ತರು ಪಟ್ಟಣದ ಹೆಡ್ ಬಂದರ್ ಕಡಲ ತೀರದಲ್ಲಿ ಮೊದಲು ಸ್ವಚ್ಛತಾ ಕಾರ್ಯ ನಡೆಸಿದರು. ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿದಂತೆ ಇನ್ನಿತರೆ ತ್ಯಾಜ್ಯಗಳನ್ನು ಒಂದೆಡೆ ಸೇರಿಸಿ ವಿಲೇವಾರಿ ಮಾಡಿದರು.
ಬಳಿಕ ಶುಚಿಯಾದ ಕಡಲ ತೀರದಲ್ಲಿ ಯುವಕರ ಕಣ್ಮಣಿ ಮತ್ತು ಯುವ ಸಮುದಾಯಕ್ಕೆ ಆದರ್ಶರಾದ ಸ್ವಾಮಿ ವಿವೇಕಾನಂದರ ಮರಳು ಶಿಲ್ಪವನ್ನು ರಚಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು. ಈ ಸುಂದರ ಮರಳು ಶಿಲ್ಪವನ್ನು ಎಬಿವಿಪಿ ಕಾರ್ಯಕರ್ತರಾದ ಚರಣ್, ಶಶಾಂಕ್, ಭಗತ್ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಎಬಿವಿಪಿ ಪ್ರಾಂತ ಕಾರ್ಯ ಸಮಿತಿಯ ಸದಸ್ಯರಾದ ವೀರೇಂದ್ರ, ಜಿಲ್ಲಾ ಸಂಚಾಲಕರಾದ ಸುಜಲ್, ನಗರ ಕಾರ್ಯದರ್ಶಿ ಚರಣ್, ತಾಲೂಕು ಸಂಚಾಲಕ ನಿಶಾಂತ್, ರಾಜ್ಯ ಕಾರ್ಯಕಾರಣಿ ಸದಸ್ಯೆ ರೂಪಾ , ಸಾಮಾಜಿಕ ಜಾಲ ತಾಣ ಪ್ರಮುಖರಾದ ಜಿತೇಂದ್ರ, ಕಾರ್ಯಕರ್ತರಾದ ಸಂದೇಶ್, ಗಜೇಂದ್ರ, ಶ್ರೀರಾಮ, ವೀಣಾ, ಗೀತಾ ಇತರರು ಇದ್ದರು.
ಇದನ್ನೂ ಓದಿ | K Chandrashekar Rao | ದೇಶದಲ್ಲಿ ತಾಲಿಬಾನ್ ಆಡಳಿತ: ಬಿಜೆಪಿ ವಿರುದ್ಧ ಸಿಎಂ ಕೆಸಿಆರ್ ವಾಗ್ದಾಳಿ