ಕಾರವಾರ: ವಾಯು ವಿಹಾರಕ್ಕೆಂದು ತೆರಳಿದ್ದ ವ್ಯಕ್ತಿಯೊಬ್ಬರು ಮನೆಗೆ ಮರಳುವ ವೇಳೆ ಕುಸಿದುಬಿದ್ದು ಮೃತಪಟ್ಟಿರುವ ಘಟನೆ (Karwar News) ಅಂಕೋಲಾ ಪಟ್ಟಣದ ಜೋಗಳಸೆಯಲ್ಲಿ ನಡೆದಿದೆ. ಗಾಬೀತಕೇಣಿ ಮೂಲದ ಸದ್ಯ ಜೊಗಳಸೆಯಲ್ಲಿ ವಾಸವಾಗಿದ್ದ ಬಿಲ್ಟ್ ನಿವೃತ್ತ ಉದ್ಯೋಗಿ ಬಾಬು ಅಂಕೋಲೆಕರ್ (75) ಮೃತರು.
ಬಾಬು ಪ್ರತಿನಿತ್ಯ ಬೆಳಗಿನ ವೇಳೆ ವಾಯು ವಿಹಾರಕ್ಕೆಂದು ತೆರಳುವ ದಿನಚರಿಯನ್ನು ಹೊಂದಿದ್ದರು. ಎಂದಿನಂತೆ ವಾಯು ವಿಹಾರಕ್ಕೆ ತೆರಳಿ ವಾಪಸಾಗುತ್ತಿ ವೇಳೆ ಏಕಾಏಕಿ ಕುಸಿದುಬಿದ್ದಿದ್ದು, ಇದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಆದರೆ ಅರ್ಧ ಗಂಟೆ ಕಳೆದರೂ ಆಂಬ್ಯುಲೆನ್ಸ್ ಆಗಮಿಸಿಲ್ಲ. ಹೀಗಾಗಿ ಸ್ಥಳೀಯರೇ ಸೇರಿ ಬಾಬು ಅವರನ್ನು ಬೆಡ್‌ಶೀಟ್ ಸಹಾಯದಿಂದ ಎತ್ತಿಕೊಂಡು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಇದನ್ನೂ ಓದಿ | Rakhi Sawant | ರಾಖಿ ಸಾವಂತ್ ಮನೆಗೆ ಹೋಗಲು ಅವಕಾಶ ನೀಡಿದ ಪೊಲೀಸರು: ವಿಚಾರಣೆ ಇನ್ನೂ ಮುಗಿದಿಲ್ಲ ಎಂದ ನಟಿ ಶೆರ್ಲಿನ್ ಚೋಪ್ರಾ
ಆದರೆ, ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಬಾಬು ಕೊನೆಯುಸಿರೆಳೆದಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು. ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಆಗಮಿಸಿದ್ದರೆ ವ್ಯಕ್ತಿಯ ಜೀವ ಉಳಿಸುವುದು ಸಾಧ್ಯವಾಗುತ್ತಿತ್ತೇನೋ ಎಂದು ಸ್ಥಳೀಯರಿಂದ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಪದೇಪದೆ ಆಂಬ್ಯುಲೆನ್ಸ್ ವಿಳಂಬವಾಗುತ್ತಿರುವುದರಿಂದ ತುರ್ತು ಅಗತ್ಯದ ಸಂದರ್ಭದಲ್ಲಿ ಜನರ ಜೀವ ಉಳಿಸುವ ಅಮೂಲ್ಯ ಸಮಯ ವ್ಯರ್ಥವಾಗುವಂತಾಗುತ್ತಿದ್ದು, ಹೆಚ್ಚಿನ ಪ್ರಕರಣಗಳಲ್ಲಿ ಸಾವು ಸಂಭವಿಸಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಇತ್ತ ಗಮನಹರಿಸಿ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Sikkim Population | 3ನೇ ಮಗು ಹೆತ್ತರೆ ಡಬಲ್ ಇನ್‌ಕ್ರಿಮಂಟ್, ಐವಿಎಫ್ ಮೂಲಕ ಮಗು ಪಡೆದರೆ 3 ಲಕ್ಷ ರೂ. ಅನುದಾನ!