Site icon Vistara News

Karwar News | ಕಳೆದೊಂದು ವಾರದಿಂದ ಧರಣಿ ಕುಳಿತಿರುವ ಅತಿಕ್ರಮಣ ನಿವಾಸಿಗಳ ಸಮಸ್ಯೆ ಆಲಿಸಿದ ಸಚಿವರು

Encroaching resident karwar Kota Srinivas Poojary

ಕಾರವಾರ: ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದೊಂದು ವಾರದಿಂದ ಧರಣಿ ಕುಳಿತಿರುವ ಅತಿಕ್ರಮಣ ನಿವಾಸಿಗಳನ್ನು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಿದರು.

ನಗರದ ಶಿರವಾಡದಲ್ಲಿರುವ ಬಂಗಾರಪ್ಪ ನಗರ ನಿವಾಸಿಗಳು ಕಳೆದ 30 ವರ್ಷಗಳಿಂದ ಅದೇ ಜಾಗದಲ್ಲಿ ವಾಸವಾಗಿದ್ದು, ಸರ್ಕಾರದಿಂದ ಆಧಾರ್, ರೇಷನ್ ಕಾರ್ಡ್‌ ಸೌಲಭ್ಯಗಳನ್ನು ಸಹ ಪಡೆದುಕೊಂಡಿದ್ದಾರೆ. ಆದರೆ ವಾಸವಾಗಿರುವ ಮನೆಗೆ ಯಾವುದೇ ದಾಖಲೆಗಳು ಇಲ್ಲವಾಗಿದ್ದು, ಈ ಜಾಗವನ್ನು ಬಂದರು ಇಲಾಖೆಯು ನಿರಾಶ್ರಿತರಿಗೆ ನೀಡಿದ್ದಾಗಿದೆ. ಇದೀಗ ಇಲ್ಲಿನ ಕೆಲ ನಿವಾಸಿಗಳಿಗೆ ಜಾಗ ಖಾಲಿ ಮಾಡುವಂತೆ ಸರ್ಕಾರದಿಂದ ನೋಟಿಸ್ ನೀಡಿದ್ದರಿಂದ ಒಕ್ಕಲೆಬ್ಬಿಸುವ ಆತಂಕಕ್ಕೆ ಒಳಗಾದ ನಿವಾಸಿಗಳು ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.

ಸಚಿವರ ಕಾರವಾರದ ಕಚೇರಿಯಲ್ಲಿ ಗುರುವಾರ (ಜ.೧೯) ಅಲ್ಲಿನ ನಾಗರಿಕರು ಅಹವಾಲು ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ್ ಅವರು ಬಳಿಕ ಧರಣಿ ನಿರತರ ಬಳಿ ಆಗಮಿಸಿ ಸಮಸ್ಯೆ ಆಲಿಸಿದರು. ಅತಿಕ್ರಮಣ ನಿವಾಸಿಗಳು ತಾವಿರುವ ಜಾಗಕ್ಕೆ ಮನೆ ದಾಖಲೆ ನೀಡಿ, ಇಲ್ಲವೇ ಪರ್ಯಾಯ ಜಾಗದಲ್ಲಿ ವಸತಿ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಬೈತಕೋಲದ ಬಂದರು ನಿರಾಶ್ರಿತರು ಹಾಗೂ ಬಂಗಾರಪ್ಪ ನಗರ ವಾಸಿಗಳೊಂದಿಗೆ ಜಂಟಿಯಾಗಿ ಜ. 26ರಂದು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಂಡು, ಎಲ್ಲರಿಗೂ ಜಾಗ ಒದಗಿಸಿಕೊಡುವ ಭರವಸೆ ನೀಡಿದ ಸಚಿವ ಕೋಟ ಶ್ರೀನಿವಾಸ್, ಧರಣಿ ಕೈಬಿಡುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ | Actress Ramya | ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಕಾನೂನು ಸಂಕಷ್ಟ: ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

Exit mobile version