ಕಾರವಾರ: ನಗರದ ಬಸ್ ನಿಲ್ದಾಣದಲ್ಲಿ ಏಕಾಏಕಿ ಫಿಟ್ಸ್ ಬಂದು ನಿತ್ರಾಣವಾಗಿ ಬಿದ್ದು ಒದ್ದಾಡುತ್ತಿದ್ದ ಭಿಕ್ಷುಕನನ್ನು ಆಸ್ಪತ್ರೆಗೆ ದಾಖಲಿಸಿದ ಸಾರಿಗೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಕಸ ಆರಿಸಿಕೊಂಡು ತಿರುಗಾಡುತ್ತಿದ್ದ ಭಿಕ್ಷುಕನಿಗೆ ಏಕಾಏಕಿ ಫಿಟ್ಸ್ ಬಂದಂತಾಗಿದೆ. ಈ ವೇಳೆ ಭಿಕ್ಷುಕನನ್ನು ಗಮನಿಸಿದ ಕಾರವಾರ-ಚಿಕ್ಕಮಗಳೂರು ಮಾರ್ಗದ ಸಾರಿಗೆ ಬಸ್‌ನ ಚಾಲಕ, ನಿರ್ವಾಹಕರು ಅಲ್ಲೇ ನಿಂತಿದ್ದ ಬಸ್‌ನ ಬಾಗಿಲಿನ ಕಬ್ಬಿಣ ಹಿಡಿದುಕೊಳ್ಳುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: SC ST Reservation: ಶಿವಮೊಗ್ಗ ಮತ್ತೆ ಉದ್ವಿಗ್ನ; ಮೀಸಲಾತಿ ವಿರೋಧಿಸಿ ರಸ್ತೆ ತಡೆದು ಬಂಜಾರ ಸಮುದಾಯದ ಆಕ್ರೋಶ
ಈ ವೇಳೆಗಾಗಲೇ ಭಿಕ್ಷುಕ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದು, ಬಾಯಿಯಿಂದ ನೊರೆ ಬರುವ ರೀತಿ ಕಾಣಿಸಿದೆ. ಕೂಡಲೇ ಸ್ಥಳದಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಬಳಿಯಿದ್ದ ಚಾವಿಗಳ ಗುಚ್ಚವನ್ನು ನೀಡಿದ್ದು, ಭಿಕ್ಷುಕ ಕೊಂಚ ಸುಧಾರಿಸಿಕೊಂಡು ಅಲ್ಲೇ ಮಲಗಿದ್ದಾನೆ. ಸಾರಿಗೆ ಸಿಬ್ಬಂದಿಯೂ ಆತ ಸುಧಾರಿಸಿಕೊಳ್ಳಲು ಹಾಗೇ ಬಿಟ್ಟು ಸ್ವಲ್ಪ ಸಮಯದ ಬಳಿಕ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಏಳಲು ಸಾಧ್ಯವಾಗದೇ ನಿತ್ರಾಣನಾಗಿದ್ದು ಕಂಡುಬಂದಿದೆ. ಹೀಗಾಗಿ ಆತನ ಸ್ಥಿತಿ ಅರಿತ ಸಿಬ್ಬಂದಿ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ.
ಇದನ್ನೂ ಓದಿ: EPFO: ಇಪಿಎಫ್ ಬಡ್ಡಿ ದರ 8.15%ಕ್ಕೆ ಏರಿಕೆ
ಬಳಿಕ ಸ್ಥಳಕ್ಕಾಗಮಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಭಿಕ್ಷುಕನನ್ನು ಸ್ಟ್ರೆಚರ್ ಮೂಲಕ ಆಂಬ್ಯುಲೆನ್ಸ್‌ಗೆ ಹತ್ತಿಸಿಕೊಂಡು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಭಿಕ್ಷುಕ ಮದ್ಯಪಾನ ಮಾಡಿದಂತೆ ಕಂಡುಬಂದಿದ್ದು, ಇದೇ ವೇಳೆ ಫಿಟ್ಸ್ ಬಂದಿದ್ದರಿಂದ ತೀವ್ರ ನಿತ್ರಾಣಗೊಂಡಿದ್ದ ಎಂದು ತಿಳಿದುಬಂದಿದೆ. ನಿತ್ರಾಣಗೊಂಡು ಬಿದ್ದ ಭಿಕ್ಷುಕನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ತೋರಿದ ಸಾರಿಗೆ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL 2023: ಐಪಿಎಲ್ ಆಡಲಿದ್ದಾರಾ ಜಸ್ಪ್ರೀತ್ ಬುಮ್ರಾ? ವಿಡಿಯೊ ಮೂಲಕ ಸುಳಿವು ನೀಡಿದ ಫ್ರಾಂಚೈಸಿ