Site icon Vistara News

Karwar News: ನರೇಗಾ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಫೆ. 28ರೊಳಗೆ ಪೂರ್ಣಗೊಳಿಸಲು ತಾಪಂ ಆಡಳಿತಾಧಿಕಾರಿ ಸೂಚನೆ

Somashekhara Mesta Taluk Panchayat administrator karwar

#image_title

ಕಾರವಾರ: “ತಾಲೂಕಿನ 18 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆ, ಕೋಟಿ ಅನುದಾನ, ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಅಂಗನವಾಡಿ, ಕಾಂಪೌಂಡ್, ಘನ ತ್ಯಾಜ್ಯ ವಿಲೇವಾರಿ ಘಟಕ, ಸಿಸಿ ರಸ್ತೆ ನಿರ್ಮಾಣ, ಬೀದಿ ದೀಪ ಅಳವಡಿಕೆ, ಉದ್ಯಾನವನ, ಸ್ಮಶಾನ ಅಭಿವೃದ್ಧಿಯಂತಹ ಎಲ್ಲ ಕಾಮಗಾರಿಗಳನ್ನು ಫೆ. 28ರೊಳಗಾಗಿ ಪೂರ್ಣಗೊಳಿಸಿ ಸಂಬಂಧಪಟ್ಟ ಬಿಲ್‌ಗಳನ್ನು ತಾಲೂಕು ಪಂಚಾಯಿತಿಗೆ ಸಲ್ಲಿಸಬೇಕು” ಎಂದು ಸಭೆಯಲ್ಲಿದ್ದ ಪಿಆರ್‌ಇಡಿ ಎಇಇ, ಎಇ ಹಾಗೂ ಜೆಇ ಅವರಿಗೆ ತಾಲೂಕು ಪಂಚಾಯಿತಿನ ಆಡಳಿತಾಧಿಕಾರಿಗಳಾದ ಸೋಮಶೇಖರ ಮೇಸ್ತಾ ಅವರು ಸೂಚಿಸಿದರು.

ಜಿಲ್ಲೆಯ ಕಾರವಾರ ತಾಲೂಕು ಪಂಚಾಯಿತಿನ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗುರುವಾರ (ಫೆ.೨೩) ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ವಿವಿಧ ಯೋಜನೆಗಳ ಅನುದಾನದಲ್ಲಿ ಕಳೆದ 3-4 ವರ್ಷದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟದ ಸಾಮಗ್ರಿ ಬಳಸಿಕೊಂಡು ಮುಂಬರುವ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ನಿರ್ಮಿಸಬೇಕು. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು ಅಪೂರ್ಣಗೊಂಡ ಕಾಮಗಾರಿಗಳ ಬಿಲ್ ನೀಡುವ ಬದಲಿಗೆ ಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಳಿಸಿ ಬಿಲ್ ಪಾವತಿಗೆ ಕೊಡಬೇಕು. ಕಾಮಗಾರಿ ಬಿಲ್‌ಗಳನ್ನು ನೀಡಿದ ತಕ್ಷಣ ಹಣ ಪಾವತಿಯಾಗುವಂತೆ ಕ್ರಮವಹಿಸಬೇಕು. ಅಲ್ಲದೇ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿಪಡಿಸಲಾದ ಕಾಮಗಾರಿಗಳು ಮುಂಬರುವ ವರ್ಷದಲ್ಲಿ ಮರುಕಳಿಸದಂತೆ ಕಾಮಗಾರಿ ಪೂರ್ಣಗೊಳಿಸಬೇಕು” ಎಂದರು.

ಇದನ್ನೂ ಓದಿ: ಮೊಗಸಾಲೆ ಅಂಕಣ: ರೋಹಿಣಿ, ರೂಪಾ ರಂಪಾಟ: ಸರ್ಕಾರಕ್ಕೆ ಪೇಚಾಟ

ಸ್ಮಶಾನ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲಿಸಿದ ಆಡಳಿತಾಧಿಕಾರಿಗಳು, ತಾಲೂಕಿನ 18 ಗ್ರಾಪಂ ವ್ಯಾಪ್ತಿಯ 64 ಗ್ರಾಮಗಳ ಪೈಕಿ ಎಷ್ಟು ಕಡೆಗಳಲ್ಲಿ ಸ್ಮಶಾನಗಳಿವೆ. ಇನ್ನು ಎಷ್ಟು ಗ್ರಾಮಗಳಲ್ಲಿ ಬೇಡಿಕೆಯಿದೆ. ಅಭಿವೃದ್ಧಿಪಡಿಸಲಾದ ಸ್ಮಶಾನಗಳಲ್ಲಿ ಚಿತಾಗಾರ ಶೆಡ್, ಸಂಪರ್ಕ ರಸ್ತೆ, ನೀರು, ನೆರಳಿನಂತಹ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆಯಾ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು. ಜೊತೆಗೆ ತಾಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಟೆಗಾಳಿ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಡಿ ನರೇಗಾದಿಂದ ಅಭಿವೃದ್ಧಿಪಡಿಸಲಾದ ಭೀಮ್‌ಕೋಲ್ ಕೆರೆ ಆವರಣದಲ್ಲಿ ಪ್ರಸಕ್ತ ವರ್ಷದಲ್ಲಿ ನರೇಗಾ ಹಾಗೂ ತಾಪಂ ಅನುದಾನದಲ್ಲಿ ಅಭಿವೃದ್ಧಿಸುತ್ತಿರುವ ಉದ್ಯಾನವನ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದರು.

ಇದನ್ನೂ ಓದಿ: Actress Pooja Bhatt : ಇಂದು ನಟಿ ಪೂಜಾ ಭಟ್ ಜನ್ಮದಿನ; ನೋಡಲೇಬೇಕಾದ ಅವರ ಅದ್ಭುತ ಸಿನಿಮಾಗಳಿವು

ತಾಲೂಕು ಪಂಚಾಯಿತಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಾಲಪ್ಪನವರ ಆನಂದ ಕುಮಾರ ಮಾತನಾಡಿ, “ಭೀಮ್‌ಕೋಲ್ ಕೆರೆ ಆವರಣದಲ್ಲಿ ಪ್ರಗತಿಯಲ್ಲಿರುವ ಉದ್ಯಾನವನ ಕಾಮಗಾರಿ ಸ್ಥಳದಲ್ಲಿ ಸಂಪರ್ಕ ರಸ್ತೆ, ಫೆವರ್ಸ್ ಅಳವಡಿಕೆ, ವಿಶ್ರಾಂತಿ ಗೋಪುರ, ಆಸನಗಳ ನಿರ್ಮಾಣ, ಆಕರ್ಷಕ ಪ್ರಾಣಿ, ಪಕ್ಷಿ ಮೂರ್ತಿ, ಕಾವಲುಗಾರ ಕೊಠಡಿ, ಕಮಾನು, ಗೇಟ್ ನಿರ್ಮಾಣದಂತಹ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಹುಲ್ಲು ಹಾಸಿಗೆ ನಿರ್ಮಾಣ, ಸೋಲಾರ್ ಅಳವಡಿಕೆಯಂತಹ ಸಣ್ಣಪುಟ್ಟ ಕಾರ್ಯಗಳು ಪ್ರಗತಿ ಹಂತದಲ್ಲಿವೆ” ಎಂದು ತಿಳಿಸಿದರು.

ಇದನ್ನೂ ಓದಿ: G20 Summit 2023: ಒಂದೇ ಫ್ರೇಮಿನಲ್ಲಿ ಇಬ್ಬರು ಪವರ್‌ಫುಲ್ ಮಹಿಳೆಯರು! ವೈರಲ್ ಆಯ್ತು ನಿರ್ಮಲಾ-ಗೀತಾ ಫೋಟೋ

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಾಲಪ್ಪನವರ ಆನಂದ ಕುಮಾರ, ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ್ ನಾಯ್ಕ, ಪಿಆರ್‌ಇಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿ ಕುಮಾರ ಕಾಳಗಿ, ಸಹಾಯಕ ಎಂಜಿನಿಯರ್ ಪಿ.ಎನ್. ರಾಣೆ, ಕಿರಿಯ ಸಹಾಯಕ ಎಂಜಿನಿಯರ್ ಮಡಿವಾಳಪ್ಪ, ತಾಪಂ ವ್ಯವಸ್ಥಾಪಕರಾದ ಅನಿತಾ ಬಂಡಿಕಟ್ಟಿ, ಪ್ರಥಮ ದರ್ಜೆ ಸಹಾಯಕರಾದ ಭಾರತಿ ಕಾಂಬಳೆ, ರಾಮದಾಸ್ ಗುರವ, ತಾಲೂಕು ಐಇಸಿ ಸಂಯೋಜಕರಾದ ಫಕೀರಪ್ಪ ತುಮ್ಮಣ್ಣನವರ ಸೇರಿದಂತೆ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ: Narendra Modi: ಬಿ.ಎಸ್‌. ಯಡಿಯೂರಪ್ಪ ಭಾವನಾತ್ಮಕ ಭಾಷಣಕ್ಕೆ ಪ್ರಧಾನಿ ಮೋದಿ ಹರ್ಷ

Exit mobile version