Site icon Vistara News

Karwar News: ಆದ್ಯತೆ ಮೇಲೆ ಅಗತ್ಯ ಕಾಮಗಾರಿ ಮಾಡಿಕೊಟ್ಟಿದ್ದೇವೆ: ಶಾಸಕಿ ರೂಪಾಲಿ ನಾಯ್ಕ

MLA Rupali S Naik karwar

#image_title

ಕಾರವಾರ: ʼರಸ್ತೆ, ಕುಡಿಯುವ ನೀರು ಹೀಗೆ ಜನರಿಗೆ ಅಗತ್ಯವಾದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಮಾಡಿಕೊಟ್ಟಿದ್ದೇವೆʼ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.

ಕಾರವಾರ ತಾಲೂಕಿನ ಚೆಂಡಿಯಾ ಹಾಗೂ ತೋಡುರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭಾನುವಾರ (ಫೆ.೧೨) ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ʼಚೆಂಡಿಯಾದಲ್ಲಿ ಅನೇಕ ರಸ್ತೆ, ಹಳ್ಳಕ್ಕೆ ತಡೆಗೋಡೆ ಇನ್ನಿತರೆ ಕಾಮಗಾರಿಗಳಿಗೆ ಸುಮಾರು 14 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ಇಲ್ಲಿಯ ಜನತೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಅದಕ್ಕೆಲ್ಲ ಪರಿಹಾರ ಒದಗಿಸುತ್ತಿದ್ದೇನೆ. ತ್ವರಿತವಾಗಿ ಕಾಮಗಾರಿಗಳು ನೆರವೇರಬೇಕು. ಜನರಿಗೆ ಅಗತ್ಯವಾಗಿರುವ ಕಾಮಗಾರಿಗಳನ್ನು ಒದಗಿಸಲಾಗಿದೆ. ಮುಂದೆಯೂ ಜನರಿಗೆ ಅವಶ್ಯವಾದ ಕಾಮಗಾರಿಗಳನ್ನು ಮಾಡಿಕೊಡುತ್ತೇವೆʼ ಎಂದು ಅವರು ಭರವಸೆ ನೀಡಿದರು.

ʼಉಪ್ಪು ನೀರು ತಡೆಗೋಡೆಗೂ ನಮ್ಮ ಸರ್ಕಾರ ಅನುದಾನವನ್ನು ಒದಗಿಸಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಅವರು ಮುತುವರ್ಜಿ ವಹಿಸಿ ಅನುದಾನವನ್ನು ಒದಗಿಸಿದ್ದಾರೆʼ ಎಂದರು.

ಇದನ್ನೂ ಓದಿ: Aero India 2023: ಕರ್ನಾಟಕದ ಯುವಕರೇ ನಿಮ್ಮ ತಾಂತ್ರಿಕ ಕೌಶಲವನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿ: ಪ್ರಧಾನಿ ನರೇಂದ್ರ ಮೋದಿ ಕರೆ

ʼಇಲ್ಲಿಯ ಜನರಿಗೆ ನೀರಿನ ಸಮಸ್ಯೆ ಇರುವ ಬಗ್ಗೆ ನನ್ನ ಗಮನಕ್ಕೆ‌ ಬಂದಿದೆ. ಜೆಜೆಎಂನಲ್ಲಿ ಅಸಮರ್ಪಕ ಕಾಮಗಾರಿಯಾಗಿ ಜನರಿಗೆ ನೀರು ತಲುಪುತ್ತಿಲ್ಲ. ಹೊಸದಾಗಿ ಪೈಪ್‌ ಅಳವಡಿಸಿ ನೀರು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆʼ ಎಂದರು.

ʼಸ್ಥಳೀಯ ಯುವಕರಿಗೆ ಹಾಗೂ ಕನ್ನಡಿಗರಿಗೆ ಉದ್ಯೋಗ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇನೆ. ಮುಡಗೇರಿಯಲ್ಲಿ ಕೈಗಾರಿಕೆ ಸ್ಥಾಪನೆಗೂ ಪ್ರಯತ್ನಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯುವಕರಿಗೆ ಉದ್ಯೋಗ ಲಭಿಸಲಿದೆʼ ಎಂದು ತಿಳಿಸಿದರು.

ಇದನ್ನೂ ಓದಿ: Shahrukh Khan: ನಯನತಾರಾ-ವಿಘ್ನೇಶ್ ಶಿವನ್ ದಂಪತಿ ಅವಳಿ ಮಕ್ಕಳನ್ನು ಭೇಟಿ ಮಾಡಿದ ಶಾರುಖ್‌: ಜಮಾಯಿಸಿದ ಅಭಿಮಾನಿಗಳು

ʼತೋಡೂರಿನಲ್ಲಿ ಸಹ ಹಲವು ಕಾಮಗಾರಿಗಳನ್ನು ಮಾಡಲಾಗಿದೆ. ಒಂದೆರಡು ಕಡೆ ವಿಳಂಬವಾಗಿದೆ. ಗ್ರಾಮಸ್ಥರೇ ಮುಂದೆ ನಿಂತು ಕೆಲಸವನ್ನು ಸಮರ್ಪಕವಾಗಿ ಮಾಡಿಸಿಕೊಳ್ಳಬೇಕು. ಮುಖ್ಯ ಕಾಲೋನಿ, ಮುಖ್ಯ ರಸ್ತೆ ನಿರ್ಮಾಣವಾದಲ್ಲಿ ಜನರ ಸಮಸ್ಯೆ ಪರಿಹಾರವಾಗಲಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಸ್‌ ತಂಗುದಾಣವನ್ನು ನಿರ್ಮಾಣ ಮಾಡಲು ಅನುದಾನವನ್ನು ಒದಗಿಸಿದ್ದೇನೆ. ಅದು ಕೂಡ ಇಲ್ಲಿಯ ಜನರಿಗೆ ಅನುಕೂಲವಾಗಲಿದೆʼ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎರಡೂ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಗ್ರಾಮೀಣ ಮಂಡಲ ಕಾರವಾರ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.

Exit mobile version