Site icon Vistara News

Karwar News: ನರೇಗಾದಡಿ 100 ದಿನ ಕೂಲಿ ಪೂರೈಸಿದ ಕೂಲಿಕಾರರಿಗೆ ಕಾಯಕ ಸನ್ಮಾನ

NREGA Day karwar Health check-up

#image_title

ಕಾರವಾರ: ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಗೆಕೋವಿ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ಸಸ್ಯ ಪಾಲನಾ ಕೇಂದ್ರದಲ್ಲಿ ನರೇಗಾದಡಿ ಪ್ರಗತಿಯಲ್ಲಿರುವ ಸಸಿ ಬೆಳೆಸುವ ಕಾಮಗಾರಿ ಸ್ಥಳದಲ್ಲಿ ಗುರುವಾರ (ಫೆ.೨) ನರೇಗಾ ದಿವಸ ಆಚರಿಸಿ, ಕೂಲಿಕಾರರ ಆರೋಗ್ಯ ತಪಾಸಣೆ ನಡೆಸುವ ಮೂಲಕ 100 ದಿನ ಕೂಲಿ ಪೂರೈಸಿದ ಕೂಲಿಕಾರರಿಗೆ ಕಾಯಕ ಸನ್ಮಾನ ಮಾಡಿ ಗೌರವಿಸಲಾಯಿತು.

ನರೇಗಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರವಾರ ತಾಲೂಕು ಪಂಚಾಯಿತಿಯ ನರೇಗಾ ಸಹಾಯಕ ನಿರ್ದೇಶಕ ರಾಮದಾಸ ನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯು ಕಳೆದ 17 ವರ್ಷಗಳಿಂದ ನಿರಂತರವಾಗಿ ಕೆಲಸ ಒದಗಿಸಿ ಸ್ವಾವಲಂಬಿಗಳನ್ನಾಗಿಸುತ್ತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಹಳ್ಳಿಗಾಡು ಪ್ರದೇಶದ ಜನರು ಕೂಲಿ ಕೆಲಸಕ್ಕಾಗಿ ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ನರೇಗಾದಡಿ ಕೆಲಸ ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಜತೆಗೆ ಪ್ರತಿಯೊಂದು ಗ್ರಾಮದ ಜನರು ಸ್ವಂತ ಊರಲ್ಲೇ ಕೂಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪ್ರತಿಯೊಬ್ಬರೂ ನರೇಗಾದಡಿ 100 ಮಾನವ ದಿನಗಳ ಕೆಲಸ ಪಡೆಯಬೇಕು. ಜತೆಗೆ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿ ಸೌಲಭ್ಯ ತೆಗೆದುಕೊಳ್ಳುವ ಮೂಲಕ ಪ್ರತಿ ವರ್ಷ ನರೇಗಾದಡಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಬೇಕು. ಎಲ್ಲ ನರೇಗಾ ಕೂಲಿಕಾರರು ಇ-ಶ್ರಮ್ ನೋಂದಣಿ ಮಾಡಿಸಿಕೊಳ್ಳಬೇಕು. ಜತೆಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಹಾಗೂ ಜೀವನ್ ಸುರಕ್ಷಾ ವಿಮಾ ಯೋಜನೆಯ ಪ್ರಯೋಜನವನ್ನು ಪಡೆಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Ramesh Jarkiholi : ಡಿ.ಕೆ. ಶಿವಕುಮಾರ್‌ ಪ್ರಕರಣ ಸಿಬಿಐಗೆ ಕೊಡಲೇಬೇಕೆಂದು ಪಟ್ಟು: ದೆಹಲಿಯಲ್ಲಿ ಬೀಡುಬಿಟ್ಟ ʼಸಾಹುಕಾರ್ʼ‌

ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹರ್ಷ ಎಸ್., ಆರೋಗ್ಯ ಸುರಕ್ಷಾ ಅಧಿಕಾರಿ ಶೈಲಜಾ ನಾಯ್ಕ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಅಪೇಕ್ಷಾ ಬಾಂದೇಕರ, ತಬ್ಸುಮ್ ಅತ್ತಾರ ಅವರನ್ನೊಳಗೊಂಡ ಆರೋಗ್ಯ ಇಲಾಖೆ ತಂಡದವರು ನರೇಗಾ ಕೂಲಿಕಾರರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಲೇರಿಯಾ ತಪಾಸಣೆ, ಗರ್ಬಿಣಿ, ಬಾಣಂತಿಯರ ತಪಾಸಣೆ ನಡೆಸಿದರು. ನಂತರ ಕಬ್ಬಿಣಾಂಶಯುಕ್ತ, ದೇಹದಲ್ಲಿನ ಆಮ್ಲೀಯತೆಯ ನಿಯಂತ್ರಿತ ಮಾತ್ರೆ (ಆಸಿಡಿಟಿ), ಕ್ಯಾಲ್ಷಿಯಮ್, ಪ್ಯಾರಾಸಿಟಮಲ್ ಮಾತ್ರೆ ವಿತರಿಸಿದರು.

ಬಳಿಕ ನರೇಗಾದಡಿ 100 ದಿನ ಕೂಲಿ ಪೂರೈಸಿದ ಕೂಲಿಕಾರರಿಗೆ ಕಾಯಕ ಸನ್ಮಾನ ಮಾಡಿ ಗೌರವಿಸಲಾಯಿತು. ಜತೆಗೆ ನರೇಗಾ ಕಾಮಗಾರಿಗಳ ಮಾಹಿತಿ ಒಳಗೊಂಡ ಕರಪತ್ರಗಳನ್ನು ಕೂಲಿಕಾರರು ಹಾಗೂ ಗ್ರಾಮಸ್ಥರಿಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ: Amul milk price: ಅಮುಲ್‌ ಹಾಲಿನ ದರಗಳಲ್ಲಿ ಏರಿಕೆ, ಇಂದಿನಿಂದಲೇ ಜಾರಿ

ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ ನಾಯ್ಕ್, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಲಾಲಸಾಬ ಎಮ್.ಎನ್., ಸಚಿನ್ ನಾಯ್ಕ, ಗ್ರಾಪಂ ಅಭಿವೃದ್ಧಿ ಅ‌ಧಿಕಾರಿ ರಘುನಂದನ ಮಡಿವಾಳ, ಕಾರ್ಯದರ್ಶಿ ಸೂರಜ್ ಮಿರಾಶಿ, ತಾಲೂಕು ಐಇಸಿ ಸಂಯೋಜಕ ಫಕೀರಪ್ಪ ತುಮ್ಮಣ್ಣನವರ, ತಾಂತ್ರಿಕ ಸಂಯೋಜಕ ಸೂರಜ್ ಗುನಗಿ ಸೇರಿದಂತೆ ಗ್ರಾಪಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version