Site icon Vistara News

Karwar News: ಯುವಕರು ರಾಷ್ಟ್ರ ಭಕ್ತರಾಗಿ ದೇಶ ರಕ್ಷಿಸುತ್ತಾರೆ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ

Training Sainik School karwar

#image_title

ಕಾರವಾರ: “ಸ್ವಾತಂತ್ರ್ಯ ಹೋರಾಟಗಾರ ಹೆಂಜಾ ನಾಯ್ಕ ಅವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಸ್ಥಾಪಿತವಾದ ಅಗ್ನಿವೀರ ತರಬೇತಿ ಸೈನಿಕ ಶಾಲೆಯಲ್ಲಿ (Training Sainik School) ತರಬೇತಿ ಪಡೆದ ಯುವಕರು ರಾಷ್ಟ್ರ ಭಕ್ತರಾಗಿ ಈ ದೇಶವನ್ನು ರಕ್ಷಿಸುವಂತಹ ಕೆಲಸ ಮಾಡುತ್ತಾರೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಹೆಂಜಾ ನಾಯ್ಕ್ ತರಬೇತಿ ಸೈನಿಕ ಶಾಲೆಯ ಮೊದಲ ಬ್ಯಾಚ್‌ ಸಮಾರೋಪ ಸಮಾರಂಭದಲ್ಲಿ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದ ಅವರು, “ಉತ್ತರ ಕನ್ನಡ ಜಿಲ್ಲೆಯು ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಪ್ರಥಮ ಜಿಲ್ಲೆಯಾಗಿದೆ. ಸಾಹಿತ್ಯ, ಕಲೆ, ಸಾಂಸ್ಕೃತಿಕ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಈ ಜಿಲ್ಲೆಯು ಹೆಸರುವಾಸಿಯಾಗಿದೆ” ಎಂದರು.

ಹೆಂಜಾ ನಾಯ್ಕ್ ಶ್ರೇಷ್ಠ ರಾಷ್ಟ್ರ ಭಕ್ತ, ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ರಾಷ್ಟ್ರ ನಾಯಕ. ಇವರ ಹೆಸರಿನಲ್ಲಿ ಆರಂಭವಾದ ಈ ಸೈನಿಕ ಶಾಲೆಯಲ್ಲಿ ಈಗಾಗಲೇ 4 ತಿಂಗಳ ಸೇನಾ ಪೂರ್ವ ತಯಾರಿ ತರಬೇತಿಯನ್ನು ಯುವಕರಿಗೆ ನೀಡಲಾಗಿದೆ. ಮುಂದಿನ ತರಬೇತಿಗಾಗಿ ಈಗಾಗಲೇ 300 ಅರ್ಜಿಗಳು ಬಂದಿವೆ. ಇದು ಈ ಜಿಲ್ಲೆಯ ಯುವಕರಲ್ಲಿ ರಾಷ್ಟ್ರ ಭಕ್ತಿಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಈ ತರಬೇತಿ ಶಾಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಾವೆಲ್ಲರೂ ಶ್ರಮಿಸಬೇಕಾಗಿದೆ” ಎಂದರು.

ಇದನ್ನೂ ಓದಿ: Shivamogga Airport: ಬಿ.ಎಸ್‌. ಯಡಿಯೂರಪ್ಪ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ: ಮೊಬೈಲ್‌ ಫ್ಲಾಷ್‌ ಲೈಟ್‌ ಮೂಲಕ ಗೌರವ

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, “ಜಿಲ್ಲೆಯ ಯುವಕರಿಗೆ ರಾಷ್ಟ್ರ ರಕ್ಷಣೆಯಲ್ಲಿ ಸೇರಿಕೊಳ್ಳಲು ಜಿಲ್ಲೆಯಲ್ಲಿ ಒಂದು ತರಬೇತಿ ಸೈನಿಕ ಶಾಲೆಯನ್ನು ಹುಟ್ಟು ಹಾಕುವುದು ಅಗತ್ಯವಿತ್ತು. ಈಗ ಅದು ಸಾಕಾರವಾಗಿದ್ದು, ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಹೆಂಜಾ ನಾಯ್ಕ ಅವರ ಹೆಸರಿನಲ್ಲಿ ಪ್ರಾರಂಭಿಸಿದ್ದೇವೆ. ಇವತ್ತು ಈ ಸೈನಿಕ ಶಾಲೆಯಿಂದ ತರಬೇತಿ ಪಡೆದ ಯುವಕರು ಮುಂದೆ ರಾಷ್ಟ್ರ ಸೇವೆಯಲ್ಲಿ ತೊಡಗಿಕೊಳ್ಳಲೆಂದು ಆಶಿಸಿದರು. ಈಗಿನ ಯುವಕರಲ್ಲಿ ದೈಹಿಕ ಕ್ಷಮತೆಯು ಅತಿ ಅವಶ್ಯಕವಾಗಿದೆ. ಈ ತರಬೇತಿ ಶಾಲೆಯಿಂದ ದೈಹಿಕ ಕ್ಷಮತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ತರಬೇತಿ ಶಾಲೆಯ ಸೌಲಭ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು” ಎಂದು ಯುವಕರಿಗೆ ಕರೆ ನೀಡಿದರು.

ಇದನ್ನೂ ಓದಿ: Shivamogga Airport: ಪ್ರಧಾನಿ ಮೋದಿಗೆ ನೀಡಲು ಸಿದ್ಧವಾಗಿದೆ ಶ್ರೀಗಂಧದ ವಿಮಾನ ನಿಲ್ದಾಣ

ಬಳಿಕ ನ್ಯೂ ಹೈಸ್ಕೂಲ್ ಪ್ರಾಂಶುಪಾಲ ರಾಜೇಶ ಶ್ರೀಕಾಂತ ಸಿಂಗೆ ಮಾತನಾಡಿ, “ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ಸೈನ್ಯವು ನಮ್ಮ ದೇಶ ಹೊಂದಿದೆ. ಆ ಸೈನ್ಯಕ್ಕೆ ನೆರವಾಗಲು ಇಂದು ನಮ್ಮ ಜಿಲ್ಲೆಯ ಯುವಕರಿಗೆ ಒಂದು ಒಳ್ಳೆಯ ಅವಕಾಶ ಒದಗಿ ಬಂದಿದೆ. ಯಾವ ಒಬ್ಬ ವ್ಯಕ್ತಿಯು ಮನಸ್ಸಿನಲ್ಲಿ ರಾಷ್ಟ್ರ ನಿರ್ಮಾಣದ ಮನೋಭಾವನೆಯನ್ನು ಹೊಂದಿರುತ್ತಾನೋ ಅಂತಹ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಕೂಡ ಬದಲಾವಣೆಯಾಗುತ್ತದೆ. ವ್ಯಕ್ತಿತ್ವದಿಂದ ಸಂಕಲ್ಪ ಸಂಕಲ್ಪದಿಂದ ರಾಷ್ಟ್ರ ನಿರ್ಮಾಣವಾಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ ಇತರ ಅಧಿಕಾರಿ ವರ್ಗದವರು ಉಪಸಿತರಿದ್ದರು.

ಇದನ್ನೂ ಓದಿ: Viral video: ಹತ್ತಾರು ಪಂಜು ಕಟ್ಟಿಕೊಂಡು ಬಂದ ಪಂಜುರ್ಲಿ: ಯಕ್ಷಗಾನದ ವೇಷ ವೈರಲ್

Exit mobile version