ಗಂಗಾವತಿ: ಇದೇ ಜ.23ರಂದು ನಡೆಯಲಿರುವ ಇಲ್ಲಿನ ಕಾಯಕಯೋಗಿ ಚನ್ನಬಸವ ಶಿವಯೋಗಿಗಳ ಮಹಾ ರಥೋತ್ಸವದ ಅಂಗವಾಗಿ ಶ್ರೀ ಚನ್ನಬಸವಸ್ವಾಮಿ ಮಹಿಳಾ ಸೇವಾ ಸಂಘದ ಸದಸ್ಯೆಯರು ಮೂರೂವರೆ ಸಾವಿರ ಜೋಳದ ರೊಟ್ಟಿಗಳನ್ನು ಭಕ್ತರ ಮಹಾ ದಾಸೋಹಕ್ಕಾಗಿ ಅರ್ಪಿಸಿದ್ದಾರೆ.
ಶಿವಯೋಗಿಗಳ 78ನೇ ಪುಣ್ಯಸ್ಮರಣೆ ಅಂಗವಾಗಿ ಚನ್ನಬಸವಸ್ವಾಮಿ ಮಹಿಳಾ ಸೇವಾ ಸಂಘದ ಸದಸ್ಯೆಯರು ಡಿ.28 ರಿಂದ ಜ.17 ರವರೆಗೆ ಸತತ 21 ದಿನಗಳ ಕಾಲ ಮಠದ ಆವರಣದಲ್ಲಿ ರೊಟ್ಟಿ ತಟ್ಟಿ, ಬೇಯಿಸಿ ಒಣಗಿಸುವ ಕಾಯಕ ಮಾಡಿದ್ದಾರೆ. ಬಳಿಕ ಮಠದ ವ್ಯವಸ್ಥಾಪಕರಿಗೆ ಅರ್ಪಿಸಿದ್ದಾರೆ.
ಒಬೊಬ್ಬ ಸದಸ್ಯೆಯರು ಕನಿಷ್ಠ ಐದುನೂರು ಗರಿಷ್ಠ ಒಂದು ಸಾವಿರ ರೂಪಾಯಿ ಮೊತ್ತ ವೈಯಕ್ತಿಕವಾಗಿ ಸಂಗ್ರಹಿಸಿ, ಒಂದು ಕ್ವಿಂಟಾಲ್ ಜೋಳದ ರೊಟ್ಟಿಯನ್ನು ತಯಾರಿಸಿ, ಅರ್ಪಿಸಿದ್ದಾರೆ. ಇದಕ್ಕೂ ಮೊದಲು ಇದೇ ಮಹಿಳಾ ಸದಸ್ಯೆಯರು, ಮಠಕ್ಕೆ ಆಗಮಿಸಿದ್ದ 750 ಜನ ಮುತ್ತೈದೆಯರಿಗೆ ಉಡಿ ತುಂಬಿದ್ದಾರೆ.
ಇದನ್ನೂ ಓದಿ: Job Alert: ಮಂಡ್ಯ ಡಿಸಿಸಿ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ
750 ರವೆ ಲಾಡು, 82 ಡಜನ್ ಬಳೆ, ಅರಿಶಿನ, ಕುಂಕುಮದಂತಹ ಮಂಗಲ ದ್ರವ್ಯ ನೀಡಿದ್ದಾರೆ. ಕೊಪ್ಪಳದ ಗವಿಮಠದಲ್ಲಿ ಜ.26ರಂದು ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಿಹಿ ನೀಡುವ ಯೋಜನೆ ರೂಪಿಸಿದ್ದು, ಈಗಾಗಲೆ ಸಿದ್ಧತೆ ಕೈಗೊಂಡಿದ್ದೇವೆ ಎಂದು ಸಂಚಾಲಕಿ ಕವಿತಾ ಅರೆಗಾರ್ ತಿಳಿಸಿದ್ದಾರೆ.
ರೊಟ್ಟಿ ಕಾಯಕದಲ್ಲಿ ಶೈಲಾ ಪಾಟೀಲ್, ಗೀತಾ ಪಾಟೀಲ್, ವಿದ್ಯಾ ಕುರಡಗಿ, ಅನ್ನಪೂರ್ಣ ಕುರಡಗಿ, ಉಷಾ ಮಾಲಿಪಾಟೀಲ್, ಉಮಾ ಮಾಲಿಪಾಟೀಲ್, ಅಕ್ಕಮ್ಮ, ಅನ್ನಪೂರ್ಣ, ಗೌರಮ್ಮ, ಆಶಾ, ಗಂಗಮ್ಮ, ರೇಖಾ, ನಿರ್ಮಲ, ಶಾಲಿನಿ, ಜ್ಯೋತಿ, ಶೋಭಾ, ಅರುಣಾ, ಕಾಂಚನ, ಕೀರ್ತಿ, ಉಮಾ, ಸಾವಿತ್ರಿ, ಸುಜಾತ, ಶರಣಮ್ಮ, ಸುವರ್ಣ ಅವರು ಭಾಗಿಯಾಗಿದ್ದರು.
ಇದನ್ನೂ ಓದಿ: Viral Video: ಇನ್ನೆಂದೂ ಕಳವು ಮಾಡದಂತೆ ರೈಲು ಪ್ರಯಾಣಿಕರು ಖದೀಮನಿಗೆ ಪಾಠ ಕಲಿಸಿದ್ದು ಹೀಗೆ
ಜ.23 ರಂದು ನಡೆಯುವ ಜಾತ್ರೆಯ ಬಳಿಕ ಕಲ್ಯಾಣ ಮಂಟಪದಲ್ಲಿ ಮಹಾ ದಾಸೋಹವಿರುತ್ತದೆ. ದಾಸೋಹಕ್ಕಾಗಿ ಭಕ್ತರು ದವಸ-ಧಾನ್ಯಗಳನ್ನು ಅರ್ಪಿಸುತ್ತಿದ್ದಾರೆ.