Site icon Vistara News

KC Cariappa Love Case: ಡಗ್ಸ್‌ ಸೇವನೆ ಆರೋಪ; ಕ್ರಿಕೆಟಿಗ ಕೆಸಿ ಕಾರಿಯಪ್ಪಗೆ ʻNadaʼ ಸಂಕಷ್ಟ

Nada trouble for Cricketer KC Cariappa

ಬೆಂಗಳೂರು: ಕ್ರಿಕೆಟರ್ ಕಾರಿಯಪ್ಪ ಅವರ ಪ್ರೇಮ ಪುರಾಣ (KC Cariappa Love Case) ಪೊಲೀಸ್ ಠಾಣೆ ಮೆಟ್ಟಿಲೇರಿ, ಮಾಜಿ ಸೈನಿಕರೊಬ್ಬರ ಪುತ್ರಿ ಆರ್‌.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರೊಂದಿಗೆ ಡ್ರಗ್ಸ್‌ ಸೇವನೆ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಕರ್ನಾಟಕದ ರಣಜಿ ತಂಡದ ಆಟಗಾರನಾಗಿರುವ ಕೆಸಿ ಕಾರಿಯಪ್ಪಗೆ ಯಾವುದೇ ಕ್ಷಣದಲ್ಲೂ ನಾಡಾ (Nada- national anti doping agency) ಸಂಕಷ್ಟ ಎದುರಾಗಬಹುದು.

ಕಾರಿಯಪ್ಪ ತಮ್ಮ ಮನೆಯಲ್ಲೇ ಗಾಂಜಾ ಸೇವನೆ ಮಾಡುತ್ತಾರೆ ಎಂದು ಯುವತಿ ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು Nada ಪರೀಕ್ಷೆಗೆ ಒಳಪಡಿಸಬಹುದು. ಭಾರತೀಯ ಆಟಗಾರರನ್ನು ಯಾವುದೇ ಕ್ಷಣದಲ್ಲಾದರೂ ಪರೀಕ್ಷೆಗೆ ಒಳಪಡಿಸಬಹುದಾದ ಅಧಿಕಾರವು ನಾಡಾಗೆ (Nada) ಇದೆ. ಈಗ ಕಾರಿಯಪ್ಪ ಮೇಲೆ ಡ್ರಗ್ಸ್ ಸೇವನೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ ಕಾರಿಯಪ್ಪಗೆ Nada ಸಂಕಷ್ಟ ಎದುರಾಗಬಹುದು. ಒಂದು ವೇಳೆ ಕಾರಿಯಪ್ಪ ಗಾಂಜಾ ಸೇವನೆ ಮಾಡಿರುವುದು ನಿಜವಾದರೆ ಸೀಮಿತ ಅವಧಿಗೆ ಬ್ಯಾನ್‌ ಮಾಡುವ ಸಾಧ್ಯತೆ ಇದೆ. ಕಾರಿಯಪ್ಪರ ಕ್ರಿಕೆಟ್‌ ವೃತ್ತಿಗೆ ಇದು ಸಮಸ್ಯೆ ಆಗಬಹುದು.

ಇತ್ತ ಕಾರಿಯಪ್ಪ ಪ್ರೇಮ ಪುರಾಣವು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಪಂಚನಾಮೆಗೆ ಹಾಜರಾಗುವಂತೆ ಆರ್.ಟಿ.ನಗರ ಪೊಲೀಸರು ನೋಟೀಸ್ ಜಾರಿ ಮಾಡುವ ಸಾಧ್ಯತೆ ಇದೆ. ಪರಸ್ಪರ ಆರೋಪ ಮತ್ತು ಪ್ರತ್ಯಾರೋಪವನ್ನು ಸಂತ್ರಸ್ತೆ ಮತ್ತು ಕಾರಿಯಪ್ಪ ಇಬ್ಬರು ಮಾಡಿದ್ದಾರೆ. ಮನೆಯಲ್ಲೇ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರೂ ಎಂಬ ಆರೋಪವು ಇರುವುದರಿಂದ ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕಬಹುದು. ಕಾನೂನಿನ ತೊಡಕಿಗೆ ಕೆ.ಸಿ.ಕಾರಿಯಪ್ಪ ಒಳಗಾಗುವ ಸಾಧ್ಯತೆ ಇದೆ.

ಏನಿದು ಪ್ರಕರಣ?

ಕೊಡಗು ಮೂಲದ ಕ್ರಿಕೆಟಿಗ ಕೆ.ಸಿ.‌ಕಾರಿಯಪ್ಪ ‌ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ದಿವ್ಯಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಪ್ರೀತಿಸಿದ್ದರು. ಮದುವೆಯಾಗುವುದಾಗಿ ಹೇಳಿ ನಂಬಿಸಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಕಾರಿಯಪ್ಪ ಅವರಿಂದ ವಂಚನೆಗೊಳಗಾದ ದಿವ್ಯಾ ಕೂಡ ಕೊಡಗು ಮೂಲದವರಾಗಿದ್ದು, ಎರಡು ವರ್ಷಗಳ‌ ಹಿಂದೆ ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮುಂದುವರಿದು ದೈಹಿಕ‌ ಸಂಪರ್ಕವೂ ಬೆಳೆಸಿ ಕೊನೆಗೆ ಮಗು ಬೇಡ ಎಂದು ಅಬಾರ್ಷನ್ ಮಾಡಿಸಲು ಕಾರಿಯಪ್ಪನೇ ಬಲವಂತವಾಗಿ ಮಾತ್ರೆ ಕೊಟ್ಟರು ಎಂದು ಆರೋಪಿಸಿದರು.

ಮದುವೆ ಬಗ್ಗೆ ಮಾತು ಶುರು ಮಾಡಿದರೆ ಕಾರಿಯಪ್ಪ ಅಂತರ ಕಾಯ್ದುಕೊಂಡು, ಸುಖಾಸುಮ್ಮನೆ ಗಲಾಟೆ ಮಾಡಿ, ಬ್ರೇಕ್‌ ಅಪ್‌ ಎನ್ನುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗಾಗಿ ನನಗೆ ಮೋಸ ಮಾಡಿದ್ದಾನೆಂದು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಇತ್ತ ಕಾರಿಯಪ್ಪ ಸಹ ಯುವತಿ ವಿರುದ್ಧ ಕೌಂಟರ್ ಕಂಪ್ಲೈಂಟ್ ದಾಖಲಿಸಿದ್ದು, ಯುವತಿ ನಡೆತೆ ಸರಿ ಇಲ್ಲ. ನನ್ನ ಮನೆ ಬಳಿ‌ ಬಂದು ಗಲಾಟೆ ಮಾಡಿ, ಪೋಷಕರಿಗೆ ಬೆದರಿಕೆ ಹಾಕುತ್ತಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version