Site icon Vistara News

KDP meeting | ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ಮೇಲೆ ಸಚಿವ ಚೌವ್ಹಾಣ್ ಕಿಡಿ; ಕೆಪಿಟಿಸಿಎಲ್‌ ಇಇ ಅಮಾನತಿಗೆ ಸೂಚನೆ

KDP meeting ಯಾದಗಿರಿ

ಯಾದಗಿರಿ: ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಪ್ರಗತಿ ಪರಿಶೀಲನಾ ಸಭೆ (KDP meeting) ನಡೆಸಿದರು. ಸಭೆ ಆರಂಭವಾಗುತ್ತಿದ್ದಂತೆ ಕೆಪಿಟಿಸಿಎಲ್‌ (KPTCL) ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜೇಶ್ ಹಿಪ್ಪರಗಿ ಗೈರು ಹಾಜರಾಗಿದ್ದಕ್ಕೆ ಕೆಂಡಾಮಂಡಲರಾದರು. ಪ್ರತಿ ಸಭೆಗೆ ಗೈರು ಹಾಜರಾಗುತ್ತಾರೆ ಎಂದು ಸಿಟ್ಟಿಗೆದ್ದರು. ಅಲ್ಲದೆ, ಅಮಾನತಿಗೂ ಶಿಫಾರಸು ನೀಡಿದರು.

ಯಾದಗಿರಿ ಜಿಲ್ಲೆಗೆ ಸರಿಸುಮಾರು 30ರಿಂದ 40 ಕೋಟಿ‌ ರೂಪಾಯಿ ವೆಚ್ಚದಲ್ಲಿ 16 ಸಬ್ ಸ್ಟೇಷನ್‌ಗಳು ಮಂಜೂರಾಗಿವೆ. ಆದರೆ, ಜಿಲ್ಲೆಯಲ್ಲಿ ಕೇವಲ ಮೂರು ‌ಮಾತ್ರ ಚಾಲ್ತಿಯಲ್ಲಿವೆ. ನೂರಾರು ಕೋಟಿ‌ ರೂಪಾಯಿ‌ ಭ್ರಷ್ಟಾಚಾರವೆಸಗಿದ್ದಾರೆ. ಅವರು ದಿ ಮೋಸ್ಟ್ ಕರಪ್ಟ್ ಇದ್ದಾರೆ ಎಂದು ಸಭೆಯಲ್ಲಿ ಏರು ಧ್ವನಿಯಲ್ಲಿ ಆರೋಪ ಮಾಡಿದರು.

ಜಿಲ್ಲೆಯಲ್ಲಿ ಸ್ಥಳೀಯ ಶಾಸಕರಿಗೂ ಹಾಗೂ ಜಿಲ್ಲಾಧಿಕಾರಿಗಳಿಗೂ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಗರಂ ಆದ ಸಚಿವರು, ಸಭೆಗೆ ಪದೇ ಪದೆ ಗೈರು ಆಗುತ್ತಿರುವ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಸಚಿವ ಪ್ರಭು ಚೌವ್ಹಾಣ್ ಕೆಪಿಟಿಸಿಎಲ್‌ (KPTCL) EE ರಾಜಶೇಖರ್ ಹಿಪ್ಪರಗಿ ಅವರನ್ನು ಸಸ್ಪೆಂಡ್ ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಸ್ನೇಹಾಲ್ ಆರ್. ಅವರಿಗೆ ಸೂಚಿಸಿದರು.

KDP meeting

ಸಚಿವರ ಮುಂದೆ‌ ಅಳಲು ತೋಡಿಕೊಂಡ ವಿಧಾನ ಪರಿಷತ್ ಸದಸ್ಯ ಚಿಂಚನಸೂರ್
ಸಭೆಗೆ ತಡವಾಗಿ ಬಂದ ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್, ವೈದ್ಯಾಧಿಕಾರಿಗಳ ವಿರುದ್ಧ ಸಚಿವರಿಗೆ ದೂರು ನೀಡಿದರು. ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ‌ಕೆಲಸ ಮಾಡುತ್ತಿಲ್ಲ, ನಾನು ಒಂದು‌ ಕೆಲಸ ಹೇಳಿದರೂ ಸರಿಯಾಗಿ ಮಾಡುತ್ತಿಲ್ಲ, ಫೋನ್‌ ಕಾಲ್ ರಿಸೀವ್ ಕೂಡ ಮಾಡುವುದಿಲ್ಲ. ನನಗೆ ಸರಿಯಾಗಿ‌ ಸ್ಪಂದಿಸುತ್ತಿಲ್ಲ ಎಂದು ಕೆಡಿಪಿ‌ ಸಭೆಯಲ್ಲಿ ಸಚಿವ ಪ್ರಭು ಚೌವ್ಹಾಣ್ ಮುಂದೆ ಅಳಲು ತೋಡಿಕೊಂಡರು.

ಸಭೆಗೆ ನಾಲ್ಕು ಜನ ಶಾಸಕರು ಗೈರು
ಪ್ರಗತಿ ಪರಿಶೀಲನಾ ಸಭೆಗೆ ನಾಲ್ವರು ಶಾಸಕರು ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು, ಯಾದಗಿರಿ ಹಾಗೂ ಸುರಪುರ ಶಾಸಕರು ಸ್ವಪಕ್ಷದವರೇ ಆಗಿದ್ದರು. ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರು ಸಹ ಗೈರಾಗಿದ್ದರು.

ಇದನ್ನೂ ಓದಿ | SCST Reservation | ಬಿಜೆಪಿ ಪ್ರಯತ್ನಕ್ಕೆ ಪರ್ಯಾಯ; ಜನವರಿ 8 ರಂದು ಕಾಂಗ್ರೆಸ್‌ನಿಂದ SCST ಐಕ್ಯತಾ ಸಮಾವೇಶ

Exit mobile version