ಧಾರವಾಡ: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ (Nethrajyothi Paramedical college) ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸಿ (Udupi Toilet Case) ವಿಡಿಯೊ ಚಿತ್ರೀಕರಣ ಮಾಡಲಾಗಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ (National womans Commission) ಸದಸ್ಯೆ ಖುಷ್ಬೂ ಸುಂದರ್ (Khushboo Sundar) ಇದನ್ನ ನಾನೂ ವಿರೋಧ ಮಾಡುವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಧಾರವಾಡದಲ್ಲಿ ಪ್ರಕರಣದ ಕುರಿತು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೂವರು ಯುವತಿಯರು ಅಶ್ಲೀಲ ವಿಡಿಯೋ ದಾಖಲಿಸಿ ಸಿಕ್ಕಿ ಹಾಕಿಕೊಂಡಿದ್ದಾರೆ. ಪ್ರಕರಣವನ್ನು ರಾಜ್ಯ ಸರಕಾರ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಗೃಹ ಮಂತ್ರಿ ಪ್ರಕರಣವನ್ನು ಮುಚ್ಚಿ ಹಾಕುವ ಮಾತುಗಳನ್ನ ಹೇಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಅವರು ಹೇಳಿದರು.
ಖುಷ್ಬೂ ಅವರು ಉಡುಪಿಗೆ ಭೇಟಿ ಕ್ಲೀನ್ ಚಿಟ್ ವರದಿ ನೀಡಿದ್ದಾರೆ. ದೆಹಲಿಯಿಂದ ಬಂದು ಕ್ಲೀನ್ ಚಿಟ್ ಕೊಟ್ಟಿದ್ದು ಹೆಣ್ಣಿಗೆ ಕಳಂಕ ತರುವಂಥ ಕೆಲಸ. ದಾಖಲೆಗಳೇ ಇಲ್ಲ ಅನ್ನೋ ಮಾತುಗಳನ್ನು ಅವರು ಹೇಳಿದ್ದಾರೆ. ಆದರೆ, ಈಗಾಗಲೇ ವಿದ್ಯಾರ್ಥಿನಿಯರು ಕ್ಷಮಾಪಣೆ ಪತ್ರ ಬರೆದಿದ್ದಾರೆ. ಹೀಗಿರುವಾಗ ಕ್ಲೀನ್ ಚಿಟ್ ಕೊಡುವುದು ಎಷ್ಟು ಸರಿ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
ಎರಡು ವರ್ಷದ ಮೇಲೆ ಅಮಾಯಕರಾಗಿದ್ದು ಹೇಗೆ?
ಡಿಜೆ ಹಳ್ಳಿ ಗಲಭೆಯಲ್ಲಿ ಅಮಾಯಕರ ಮೇಲೆ ಕೇಸ್ ಹಾಕಲಾಗಿದೆ ಎಂಬ ತನ್ವೀರ್ ಸೇಠ್ ಪತ್ರಕ್ಕೆ ಪ್ರತಿಕ್ರಿಯಿಸಿ ಮುತಾಲಿಕ್, ಘಟನೆ ಆಗಿ ಈಗ 2 ವರ್ಷ ಆಗಿದೆ. ಆರೋಪಿಗಳು ಅಮಾಯಕರು ಅಂತಿದ್ದರೆ ಆಗಲೇ ಪತ್ರ ಬರೆಯಬಹುದಿತ್ತು. ಆದರೆ, ಕಾಂಗ್ರೆಸ್ ಪಕ್ಷ ಮುಸ್ಲಿಮರ ಓಲೈಕೆ ಮಾಡುತ್ತಿದೆ.
ಇದನ್ನೂ ಓದಿ: Udupi Toilet Case : ಟಾಯ್ಲೆಟ್‌ನಲ್ಲಿ ಹಿಡನ್ ಕ್ಯಾಮೆರಾ ಇರಲಿಲ್ಲ, ಹರಿದಾಡುತ್ತಿರುವ ವಿಡಿಯೊ ಫೇಕ್ ; ಖುಷ್ಬೂ Report
ಈಗ ಕಾಂಗ್ರೆಸ್ ಸರಕಾರ ಬಂದ ಮೇಲೆ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ. ಇದು ನಿಜವಾಗಲು ಖಂಡಿಸುವ ವಿಚಾರ. ಅವರನ್ನು ಹಾಗೆಯೇ ಬಿಟ್ಟರೆ ಇವರೇ ಮುಂದೆ ಉಗ್ರಗಾಮಿಗಳು ಆಗೋದು. ನಾವು ಅವರನ್ನ ಬಿಡುಗಡೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಕಾನೂನು ಹಾಗೂ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ವೈಯುಕ್ತಿಕ ಹೇಳಿಕೆ ಎಂದ ಅಶ್ವತ್ಥ ನಾರಾಯಣ
ಮಾಜಿ ಸಚಿವ ಹಾಗೂ ಮಲ್ಲೇಶ್ವರ್ ಶಾಸಕ ಅಶ್ವತ್ಥ ನಾರಾಯಣ ಅವರೂ ಖುಷ್ಬೂ ಅವರ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಘಟನೆಯೇ ನಡೆದಿಲ್ಲ ಹಾಗೂ ಅದಕ್ಕೆ ಸಾಕ್ಷಿಗಳೇ ಇಲ್ಲ ಎಂಬುದು ಖುಷ್ಬೂ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಘಟನೆ ನಡೆದಿರುವುದು ನಿಜ, ವಿಡಿಯ ಶೂಟ್ ಮಾಡಿರುವುದು ನಿಜ ಹಾಗೂ ಘಟನೆ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.