Site icon Vistara News

King Cobra Captured: ಕೊಟ್ಟಿಗೆಯಲ್ಲಿ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ; ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಉರಗ ತಜ್ಞ

King cobra hosanagara

#image_title

ಹೊಸನಗರ: ಇಲ್ಲಿನ ನಿಟ್ಟೂರು ಬಳಿಯ ಲಕ್ಮನೆ ಮಂಜು ಎಂಬುವವರ ಮನೆಗೆ ಹೊಂದಿಕೊಂಡ ಕೊಟ್ಟಿಗೆಯ ಹೆಂಚಿನ ಕೆಳಗೆ 12 ಅಡಿ ಉದ್ದ ಭಾರಿ ಗಾತ್ರದ ಕಾಳಿಂಗ ಸರ್ಪವೊಂದು (King Cobra Captured) ಬುಧವಾರ ಸಂಜೆ ಅಡಗಿ ಕುಳಿತು ಮನೆಯವರಿಗೆ ಆತಂಕವನ್ನು ಉಂಟು ಮಾಡಿತ್ತು.

ತಕ್ಷಣವೇ ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಲಾಯಿತು. ಆಗುಂಬೆ ಮಳೆಕಾಡು ಸಂಶೋಧನಾಲಯದ ಉರಗ ತಜ್ಞ ಅಜಯಗಿರಿ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಮನೆಯವರ ಆತಂಕವನ್ನು ದೂರ ಮಾಡಿದ್ದಾರೆ.

ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ನಿಟ್ಟೂರು ಸುತ್ತಮುತ್ತ ಇತ್ತೀಚೆಗೆ ಕಾಳಿಂಗ ಸರ್ಪಗಳು ಮನೆ ಹಾಗೂ ಕೊಟ್ಟಿಗೆಗೆ ಬರುವುದು ಬಹಳ ಹೆಚ್ಚಾಗಿದ್ದು, ಇಲ್ಲಿನ ಸಾರ್ವಜನಿಕರಿಗೆ ಆತಂಕವನ್ನು ಉಂಟು ಮಾಡಿದೆ.

ಇದನ್ನೂ ಓದಿ: Urigowda Nanjegowda : ಅವರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ; ಉರಿ ಗೌಡ, ನಂಜೇಗೌಡ ಚರ್ಚೆ ತಡೆದ ಚುಂಚಶ್ರೀಗಳ ವಿರುದ್ಧ ಸಿಡಿದ ಅಡ್ಡಂಡ

“ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಸಮಯದಲ್ಲಿ ಕಾಳಿಂಗ ಸರ್ಪಗಳು ಹೆಣ್ಣು ಕಾಳಿಂಗವನ್ನು ಹುಡುಕಿಕೊಂಡು ಹೋಗುವ ಕಾರಣದಿಂದ ಈ ಸಮಯದಲ್ಲಿ ಇವುಗಳು ಹೆಚ್ಚಾಗಿ ಕಾಣಸಿಗಲು ಕಾರಣವಾಗಿವೆ. ಹಾವುಗಳು ಕಂಡ ಸಂದರ್ಭದಲ್ಲಿ ಗಾಬರಿಯಾಗದೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು, ಸಮೀಪದ ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದರೆ ಸ್ಥಳಕ್ಕೆ ತಕ್ಷಣ ಬಂದು ಉಚಿತವಾಗಿ ಹಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಗುವುದು” ಎಂದು ಉರಗ ತಜ್ಞ ಅಜಯಗಿರಿ ಮಾಹಿತಿ ನೀಡಿದ್ದಾರೆ.

Exit mobile version