Site icon Vistara News

ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದ ಕಿರಣ್‌ ಮಜುಂದಾರ್‌ ಷಾ

ಕಿರಣ್‌ ಮಜುಂದಾರ್‌ ಷಾ

ಆನೇಕಲ್: ಆಗಿಂದಾಗ್ಗೆ ಸರ್ಕಾರದ ವಿರುದ್ಧ, ಮುಖ್ಯವಾಗಿ ಮೂಲಸೌಕರ್ಯ ವಿಚಾರದಲ್ಲಿ ಚಾಟಿ ಬೀಸುವ ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಈಗ ಮತ್ತೊಮೆ ಗುಟುರು ಹಾಕಿದ್ದಾರೆ. ಹುಸ್ಕೂರು-ಸರ್ಜಾಪುರ ರಸ್ತೆ ಸಂಚಾರ ಮಾಡಲಾಗದಷ್ಟು ಅಧ್ವಾನವಾಗಿವೆ ಎಂದು ರಾಜಕಾರಣಿಗಳ ವಿರುದ್ಧ ಬಯೋಕಾನ್‌ ಸಂಸ್ಥೆ ಮುಖ್ಯಸ್ಥೆ ಹರಿಹಾಯ್ದಿದ್ದಾರೆ.

ಶಾಸಕ, ಸಂಸದರು ಮತ್ತು ಸ್ಥಳೀಯ ರಾಜಕಾರಣಿಗಳನ್ನು ಕಟುವಾದ ಶಬ್ದಗಳಿಂದ ಟ್ವಿಟರ್‌ನಲ್ಲಿ ಉದ್ಯಮಿ ಟೀಕೆ ಮಾಡಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಉತ್ತಮ ರಸ್ತೆ ಸೌಕರ್ಯ ಕಲ್ಪಿಸದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಶಾಸಕ ಹಾಗೂ ಸಂಸದರು ಜವಾಬ್ದಾರಿ ಇಲ್ಲದ ರಾಜಕಾರಣಿಗಳು. ಸರ್ಜಾಪುರ ಸುತ್ತಮುತ್ತಲೂ ಕೆಟ್ಟ ರಸ್ತೆಗಳಿಂದ ಕೂಡಿದೆ. ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ಜರಿದಿದ್ದಾರೆ.

ಇದನ್ನೂ ಓದಿ | ರಾತ್ರಿಯಿಡೀ ರಸ್ತೆ ಗುಂಡಿ ಮುಚ್ಚಿಸಿದ BBMP ಮುಖ್ಯ ಆಯುಕ್ತ

ಹುಸ್ಕೂರು-ಸರ್ಜಾಪುರ ರಸ್ತೆ ಪರಿಸ್ಥಿತಿ ಬಹಳ ಶೋಷನೀಯವಾಗಿದೆ. ಉತ್ತಮ ರಸ್ತೆ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ ಬಸ್‌ ಡಿಪೋ ಹಾಗೂ ವಸತಿ ಗೃಹಗಳನ್ನು ನಿರ್ಮಿಸಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | ಗ್ರಾಮ ಪಂಚಾಯಿತಿ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರು! ಮತ್ತೊಂದು ವಿವಾದ ಸ್ಫೋಟ

Exit mobile version