Site icon Vistara News

KMF | ಐಡಿಎಫ್‌ ವರ್ಲ್ಡ್‌ ಡೈರಿ ಶೃಂಗಸಭೆಯಲ್ಲಿ ಕೆಎಂಎಫ್‌ಗೆ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿ

ಬೆಂಗಳೂರು: ನವ ದೆಹಲಿಯಲ್ಲಿ ನಡೆದ ಐಡಿಎಫ್ ವರ್ಲ್ಡ್ ಡೈರಿ ಶೃಂಗಸಭೆ 2022ರಲ್ಲಿ ಕೆಎಂಎಫ್‌ಗೆ (KMF) ಅತ್ಯುತ್ತಮ ಪ್ರದರ್ಶಕ ಮತ್ತು ಸ್ಟಾಲ್ ಪ್ಲೇಸ್ಮೆಂಟ್‌ಗಾಗಿ ಮೆಚ್ಚುಗೆ ಪ್ರಮಾಣಪತ್ರ ದೊರೆತಿದೆ.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಐಡಿಎಫ್ ವರ್ಲ್ಡ್ ಡೈರಿ ಶೃಂಗಸಭೆಯನ್ನು ಸೆಪ್ಟೆಂಬರ್‌ 12ರಿಂದ 15ರ ವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಕೆಎಂಎಫ್‌ ತನ್ನ ಉತ್ಪನ್ನಗಳನ್ನು ಸ್ಟಾಲ್ ಮೂಲಕ ಪ್ರದರ್ಶನಕ್ಕೆ ಇಟ್ಟಿತ್ತು. ಇದು ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜತೆಗೆ ಸ್ಮರಣಿಕೆ ನೀಡಲಾಗಿದೆ.

ಕೆಎಂಎಫ್‌ ತನ್ನ ಐಕಾನ್‌ ಆಗಿ ಬಳಕೆಯಾಗುತ್ತಿರುವ ಹಸುವಿನ ಪ್ರತಿಕೃತಿಯನ್ನು ಪ್ರದರ್ಶನ ಮಾಡಲಾಗಿತ್ತು. ಇದು ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿತ್ತು. ನ್ಯಾಷನಲ್‌ ಡೈರಿ ಡೆವಲೆಪ್ಮೆಂಟ್‌ ಬೋರ್ಡ್‌ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕರ್ನಾಟಕವು ಸೇರಿದಂತೆ ವಿವಿಧ ರಾಜ್ಯಗಳ ಹಾಲು ಒಕ್ಕೂಟಗಳು ಭಾಗಿಯಾಗಿ, ತಮ್ಮ ತಮ್ಮ ವಿಶೇಷ ಉತ್ಪನ್ನಗಳ ಪ್ರದರ್ಶನ ಮಾಡಿದ್ದವು.

ಇದನ್ನೂ ಓದಿ | ನಂದಿನಿ ತುಪ್ಪದ ದರದಲ್ಲಿ ₹100 ಹೆಚ್ಚಳ ಮಾಡಿದ ಕೆಎಂಎಫ್‌

Exit mobile version