Site icon Vistara News

Kodagu News: ಮಕ್ಕಳ ಮಾನಸಿಕ ವಿಕಸನಕ್ಕೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆಯೂ ಅಗತ್ಯ: ಡಾ. ಪವಿತ್ರಾ

Dr. Pavitra says Priority should be given to extra-curricular activities along with the curriculum for the mental development of children

Dr. Pavitra says Priority should be given to extra-curricular activities along with the curriculum for the mental development of children

ಸೋಮವಾರಪೇಟೆ: ಮಕ್ಕಳ ಮನಸ್ಸು ವಿಕಸನಗೊಳ್ಳಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಪೋಷಕರು ಆದ್ಯತೆ ಕೊಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾ ಪ್ರಾಚಾರ್ಯರು ಹಾಗೂ ನಟಿ ಡಾ. ಪವಿತ್ರಾ ಹೇಳಿದರು.

ಪಟ್ಟಣದ ಸಾಂದೀಪನಿ ಪ್ರೌಢ ಶಾಲೆ ಆವರಣದಲ್ಲಿ (Kodagu News) ಯಶೋದೆ ರಂಗ ಟ್ರಸ್ಟ್ ಆಶ್ರಯದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ನಡೆದ ಮಕ್ಕಳ ಕಲಿಕಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕಗಳಿಸಬೇಕು, ರ‍್ಯಾಂಕ್ ಬರಬೇಕು ಎಂದು ಆಶಿಸುತ್ತಾರೆ. ಆದರೆ ಅವರ ಮಾನಸಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಗಮನವೇ ಹರಿಸುವುದಿಲ್ಲ ಎಂದು ವಿಷಾದಿಸಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಐಕಾನ್‌ಗಳು ಎರಡೆರಡು ಬಾರಿ ಹುಟ್ಟುತ್ತಾರೆ! ಆಶ್ಚರ್ಯ ಆಯ್ತಾ? ಇದನ್ನು ಓದಿ!

ನಿಮ್ಮ ಮಕ್ಕಳ ಅಂಕಗಳು ಅಂಕಪಟ್ಟಿಯಲ್ಲಿ ಕಂಡರೆ ಅವರ ಪಠ್ಯೇತರ ಚಟುವಟಿಕೆ ಅವರ ಮುಂದಿನ ಜೀವನದಲ್ಲಿ ಕಾಣಬಹುದು ಎಂದರು. ಪಠ್ಯೇತರ ಚಟುವಟಿಕೆಗಳು ಕೇವಲ ಬೇಸಿಗೆ ಶಿಬಿರಕ್ಕೆ ಮೀಸಲಾಗದೆ ಮಕ್ಕಳಿಗೆ ನಿತ್ಯವೂ ಪ್ರೋತ್ಸಾಹಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಾವು ದ್ರಾವಿಡ ಕನ್ನಡಿಗರು ಸಂಸ್ಥೆಯ ಮುಖ್ಯಸ್ಥ ಅಭಿಗೌಡ ಮಾತನಾಡಿ, ಇಂದಿನ ಒತ್ತಡದ ಶಿಕ್ಷಣದ ನಡುವೆ ಮಕ್ಕಳ ಮನಸ್ಸು ಉಲ್ಲಸಿತರಾಗಲು ಇಂತಹ ಬೇಸಿಗೆ ಶಿಬಿರಗಳು ಹಾಗೂ ತರಬೇತಿಗಳು ಸಹಕಾರಿಯಾಗುತ್ತವೆ. ಯಾವುದೇ ಮಕ್ಕಳ ಬಗ್ಗೆ ನಕಾರಾತ್ಮಕ ಚಿಂತನೆಗಳು ಬೇಡಾ ಅವರಿಗೆ ಸರಿಯಾದ ಸಮಯದಲ್ಲಿ ಸೂಕ್ತ ತರಬೇತಿ ಸಿಕ್ಕಿದರೆ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳುತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯ ಸರಿಗಮಪ ಪ್ರಶಸ್ತಿ ವಿಜೇತೆ ಪ್ರಗತಿ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿ, ಉತ್ತಮವಾದ ತರಬೇತಿ ಹಾಗೂ ಮಾರ್ಗದರ್ಶನ ದೊರೆತರೆ ಎಂತಹವರೂ ಪ್ರತಿಭಾವಂತರಾಗುತಾರೆ. ಅದಕ್ಕೆ ನಾನೇ ಉದಾಹರಣೆ. ಕರ್ನಾಟಕ ಜನತೆಯ ಪ್ರೀತಿ ವಿಶ್ವಾದದಿಂದ ನಾನು ಜಯಗಳಿಸಲು ಸಾಧ್ಯವಾಯಿತು ಎಂದು ಕೃತಜ್ಞತೆಯಿಂದ ಸ್ಮರಿಸಿಕೊಂಡರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ: ನನ್ನ ಭಾರತವನ್ನು ಪ್ರೀತಿ ಮಾಡಲು ನೂರಾರು ಕಾರಣಗಳು!

ಶಿಬಿರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ನಾಟಕ, ಯಕ್ಷಗಾನ, ನೃತ್ಯ ಪ್ರದರ್ಶನ ನಡೆಯಿತು. ಕುಶಾಲನಗರದ ಫ್ಯಾನ್ಸಿ ಮುತ್ತಣ್ಣ, ಯಶೋದೆ ರಂಗ ಟ್ರಸ್ಟ್‌ನ ಅಧ್ಯಕ್ಷ ಮುತ್ತಣ್ಣ, ಶಿಬಿರ ನಿರ್ದೇಶಕ ಗಣೇಶ್ ಎಂ.ಭೀಮನಕೋಣೆ, ಸಂಚಾಲಕರ ನಿಶಾಂತ್ ಮುತ್ತಣ್ಣ, ಸಂಪನ್ಮೂಲ ವ್ಯಕ್ತಿಗಳು ಹಾಗೂ ರಂಗ ಕಲಾವಿದರಾದ ಅರ್ಚನಾ ಸುರೇಶ್, ಸುಮಂತ್, ಯೋಗೀಶ್ಇ, ಇನ್ಸಾಫ್, ಶಿವಕುಮಾರ್ ತೀರ್ಥಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Exit mobile version