ಕೊಡಗು: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾರಿ ಗಾಳಿ ಮಳೆಗೆ ನಾನಾ ಅವಾಂತರಗಳು ಆಗಿವೆ. ಗಾಳಿಯ ಹೊಡೆತಕ್ಕೆ ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಬೇತ ಗ್ರಾಮದ ಮನೆಯೊಂದರ ಚಾವಣಿಯ ಸೀಟುಗಳು ಹಾರಿ ಹೋಗಿವೆ.
ಇದನ್ನೂ ಓದಿ: ಮಳೆಗೆ ಮುಳುಗಿದ ಬೆಂಗಳೂರು ಪ್ರದೇಶಗಳು: ಮನೆ, ದೇವಸ್ಥಾನಕ್ಕೆ ನುಗ್ಗಿದ ನೀರು
ಇದರಿಂದ ಮಳೆಯ ನೀರೆಲ್ಲ ಮನೆಗೆ ತುಂಬಿ ಮನೆಯ ವಸ್ತುಗಳಿಗೆ ಹಾನಿಯಾಗಿದೆ. ಮನೆಯಲ್ಲಿದ್ದ ದಿ. ಕೃಷ್ಣಪ್ಪ ಅವರ ಪತ್ನಿ ಪುಷ್ಪ , ಪುತ್ರ ಹರೀಶ್, ಸೊಸೆ ಸ್ವಾತಿ ಹಾಗೂ ಮಗಳು ಮೋನಿಷಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯೊಳಗೆ ಮಳೆನೀರು ಬೀಳದಂತೆ ಸ್ಥಳೀಯರ ಸಹಾಯದಿಂದ ತಾತ್ಕಾಲಿಕವಾಗಿ ಟಾರ್ಪಾಲ್ ಹೊದಿಕೆ ಹಾಕಲಾಗಿದೆ. ಮಡಿಕೇರಿ ಸಮೀಪದ ಹಾಕತ್ತೂರು ಭಾಗದಲ್ಲೂ ಗಾಳಿ ಮಳೆಯಾಗಿದ್ದು, ಭಾರಿ ಗಾಳಿಯ ರಭಸಕ್ಕೆ ಮರವೊಂದು ಹಾಕತ್ತೂರು ಗ್ರಾಮದ ರಜೀಶ್ ಎಂಬುವರ ಮನೆಯ ಮೇಲೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಕೊಪ್ಪಳದಲ್ಲಿ ಭಾರೀ ಗಾಳಿ ಸಹಿತ ಮಳೆ