Site icon Vistara News

Kodagu News: ಸೋಮವಾರಪೇಟೆಯಲ್ಲಿ ಮರ ಬಿದ್ದು ಕಾರ್ಮಿಕ ಸಾವು

Laborer died by falling tree in Somawarpet

ಸೋಮವಾರಪೇಟೆ: ಟಿಂಬರ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮರ ಬಿದ್ದು, ಕಾರ್ಮಿಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ (Kodagu News) ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಇದನ್ನೂ ಓದಿ: Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಕಂಬ್ತಳ್ಳಿ ನಿವಾಸಿ ಮಿತ್ರೇಶ್ (42) ಮೃತಪಟ್ಟ ವ್ಯಕ್ತಿ. ಹಾನಗಲ್ಲು ಗ್ರಾಮದಲ್ಲಿರುವ ಚಂಗಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ಸಿಲ್ವರ್ ಮರಗಳನ್ನು ಜಮಾಲ್ ಮತ್ತು ಕವನ್ ಅವರಿಗೆ ಮಾರಾಟ ಮಾಡಿದ್ದು, ಟಿಂಬರ್ ಕೆಲಸಕ್ಕೆ ಮಿತ್ರೇಶ್ ತೆರಳಿದ್ದರು. ಮರ ಕಡಿಯುತ್ತಿರುವ ಸಂದರ್ಭದಲ್ಲಿ ಬುಡ ಕಟಾವು ಮಾಡಿದ ಮರ ಆಕಸ್ಮಿಕವಾಗಿ ಪಕ್ಕದ ಮರದ ಮೇಲೆ ಬಿದ್ದಿದೆ. ಪರಿಣಾಮ ಬುಡ ಸಹಿತ ಮತ್ತೊಂದು ಮರ ಕೆಳಭಾಗದಲ್ಲಿದ್ದ ಮಿತ್ರೇಶ್ ಅವರ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಮಿತ್ರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Road Accident: ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತ್ಯು; 30ಕ್ಕೂ ಹೆಚ್ಚು ಮಂದಿಗೆ ಗಾಯ

ಚಿತ್ರದುರ್ಗ/ಚಿಕ್ಕಮಗಳೂರು/ಮೈಸೂರು: ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತಗಳಲ್ಲಿ (Road Accident) ಸಾವು-ನೋವು ಸಂಭವಿಸಿದೆ. ಅತಿ ವೇಗ ಚಾಲನೆಗೆ ನಾಲ್ವರು ಪ್ರಾಣವನ್ನೇ ತೆತ್ತಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಚರಂಡಿಗೆ ಪಲ್ಟಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದ್ದು, ಕಾರಿನಲ್ಲಿದ್ದ ಇಬ್ಬರು ವೃದ್ಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ. ಹರಿಹರದ ಸಾರಥಿ ಗ್ರಾಮದ ಕೊಟ್ರೇಶಪ್ಪ (65), ಹುಬ್ಬಳ್ಳಿಯ ಪುಷ್ಟ (55) ಮೃತ ದುರ್ದೈವಿಗಳು.

ಇದನ್ನೂ ಓದಿ: ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಶ್ರೀಲಂಕಾ

ಚಿತ್ರದುರ್ಗದಲ್ಲಿ ಮದುವೆ ಮುಗಿಸಿಕೊಂಡು ವಾಪಸ್‌ ಬರುವಾಗ ಈ ದುರ್ಘಟನೆ ನಡೆದಿದೆ. ಅತಿ ವೇಗದ ಚಾಲನೆಯಿಂದ‌ಲೇ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಗಾಯಗೊಂಡವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಕರಗುಂದ ಗ್ರಾಮದ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಸವಾರರು ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಗುದ್ದಿದ್ದಾರೆ. ಪರಿಣಾಮ ಬೈಕ್‌ನಿಂದ ಹಾರಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಪೆಟ್ಟಾಗಿತ್ತು. ಹೊರನಾಡು ಗ್ರಾಮದ ಉಮೇಶ್, ಮುಂಡಗದ ಮನೆ ಗ್ರಾಮದ ಸುನಿಲ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಮುಂಡಗದ ಮನೆ ಗ್ರಾಮದ ಉಮೇಶ್, ಸುನೀಲನನ್ನು ಶಿವಮೊಗ್ಗಕ್ಕೆ ಬಿಡಲು ಹೋಗುತ್ತಿದ್ದರು. ತಿರುವಿನಲ್ಲಿ ನಿಯಂತ್ರಣಕ್ಕೆ ಬೈಕ್ ನೇರ ವಿದ್ಯುತ್‌ ಕಂಬಕ್ಕೆ ಗುದ್ದಿದೆ.

ಸ್ಥಳಕ್ಕೆ ಎನ್‌.ಆರ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನಲ್ಲಿ ಘಟನೆ ನಡೆದಿದೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಟೇರಿಂಗ್‌ ಕಟ್‌ ಆಗಿ ಗದ್ದೆಗೆ ನುಗ್ಗಿದ ಕೆಎಸ್ಆರ್‌ಟಿಸಿ ಬಸ್

30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಸ್ಟೇರಿಂಗ್‌ ಕಟ್ಟಿಂಗ್‌ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದೆ. ಘಟನೆಯಲ್ಲಿ 30 ಪ್ರಯಾಣಿಕರು ಗಾಯಗೊಂಡಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗೇಟ್ ಬಳಿ ನಡೆದಿದೆ.

ಇದನ್ನೂ ಓದಿ: Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೆ.ಆರ್.ನಗರ ಮತ್ತು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಕೆಆರ್‌ನಗರ ಡಿಪೋಗೆ ಸೇರಿದ ಬಸ್ ಕೇರಳಾಪುರದಿಂದ ಸಾಲಿಗ್ರಾಮ, ಚುಂಚನಕಟ್ಟೆ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದರು. ಕೆಆರ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

Exit mobile version