Site icon Vistara News

Kodagu News: ಶ್ರದ್ಧಾ-ಭಕ್ತಿಯಿಂದ ಜರುಗಿದ ಮಳೂರು ಶ್ರೀ ಬೆಳ್ಳಾರಿಕಮ್ಮ ದೇವಾಲಯದ ಜಾತ್ರಾ ಮಹೋತ್ಸವ

Maluru Sri Bellarikamma Temple Jatra Mahotsava

ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಉಲುಗುಲಿ ಗ್ರಾಮದ ಮಳೂರು ಶ್ರೀ ಬೆಳ್ಳಾರಿಕಮ್ಮ ದೇವಾಲಯದ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ (Kodagu News) ಜರುಗಿತು.

ಇತಿಹಾಸ ಪ್ರಸಿದ್ಧ ಮಳೂರು ಶ್ರೀ ಬೆಳ್ಳಾರಿಕಮ್ಮ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಏಳು ದಿನಗಳ ಕಾಲ 3 ಗ್ರಾಮಗಳ 14 ಮನೆತನದ ತಕ್ಕ ಮುಖ್ಯಸ್ಥರಿಂದ ಶ್ರೀದೇವಿಗೆ ಚೌಲಿ ಆಟ ನೆರವೇರಿಸಲಾಯಿತು.

ಇದನ್ನೂ ಓದಿ: Public Exam: 5, 8, 9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಮೌಲ್ಯಮಾಪನದಲ್ಲಿ ಲೋಪ; ವಿವರ ಸಲ್ಲಿಕೆಗೆ ಸರ್ಕಾರ ಸೂಚನೆ

ಮಂದನ‌ಮನೆ ಹಾಗೂ ಕಾಳಚೆಟ್ಟೀರಾ ಮನೆತನಗಳಿಂದ ತರಲಾದ ಭಂಡಾರ ಹಾಗೂ ಮಾಗುಲು ಮನೆತನದಿಂದ ಬಂದಂತಹ ಎತ್ತು ಎಲ್ಲ ಒಟ್ಟಾಗಿ ದೇವಸ್ಥಾನದ ಸಮೀಪ ಒಂದೆಡೆ ಸೇರಿ ವಾದ್ಯ, ಮೇಳಗಳೊಂದಿಗೆ ದೇವಾಲಯಕ್ಕೆ ಆಗಮಿಸಿ, ಶ್ರೀ ಬೆಳ್ಳಾರಿಕಮ್ಮ ದೇವಿಯನ್ನು ಆಭರಣಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಶ್ರೀ ಬೆಳ್ಳಾರಿಕಮ್ಮ ದೇವಿಗೆ ಮೂರು ಗ್ರಾಮಗಳ 14 ಮನೆತನದ ತಕ್ಕ ಮುಖ್ಯಸ್ಥರಿಂದ ಚೌಲಿ ಆಟದ ಮೂಲಕ‌ ಭಕ್ತಿಯನ್ನು ಸಮರ್ಪಿಸಲಾಯಿತು. ಏಳು ದಿನಗಳ ಕಾಲ ಚೌಲಿ ಆಟದ ಸಮಯದಲ್ಲಿ ನೀರಿನಲ್ಲಿ ದೀಪ ಉರಿಯುವುದು ವಿಶೇಷವಾಗಿದೆ. ಏಳು ಸುತ್ತಿನ ಚೌಲಿ ಆಟ ಮುಗಿಯುವವರೆಗೂ ಕೂಡ ಆ ದೀಪ ಬೆಳಗುತ್ತಲೇ ಇರುವುದು ವಿಶೇಷ.

ಇದನ್ನೂ ಓದಿ: UPSC EXAM-2023: ಲಕ್ಷಾಂತರ ರೂಪಾಯಿ ಸಂಬಳವಿದ್ದ ಉದ್ಯೋಗವನ್ನೇ ತೊರೆದಿದ್ದ ಯುಪಿಎಸ್‌ಸಿ ಟಾಪರ್ ಆದಿತ್ಯ ಶ್ರೀವಾಸ್ತವ

ಬಳಿಕ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ಗ್ರಾಮಗಳ ನೂರಾರು ಭಕ್ತಾದಿಗಳು ಆಗಮಿಸಿ, ದೇವಿಯ ದರ್ಶನ ಪಡೆದು, ಭಕ್ತಿ ಸಮರ್ಪಿಸಿದರು.

Exit mobile version