Site icon Vistara News

Kodagu News: ಕಳೆದುಕೊಂಡಿದ್ದ ಚಿನ್ನದ ನಾಣ್ಯ ವಾರಸುದಾರನ ಕೈ ಸೇರುವಂತೆ ಮಾಡಿದ ಪೊಲೀಸರು!

Kodagu News

ಕೊಡಗು: ಕಳೆದುಕೊಂಡಿದ್ದ 3 ಚಿನ್ನದ ನಾಣ್ಯಗಳನ್ನು ಮರಳಿ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಮಡಿಕೇರಿ ಸಂಚಾರ ಠಾಣೆಯ ಪೊಲೀಸರು ಪ್ರಾಮಾಣಿಕತೆ (Kodagu News) ಮೆರೆದಿದ್ದು, ಪೊಲೀಸರ ಕಾರ್ಯ ವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಗರದ ಅಜ್ಜಮಾಡ ದೇವಯ್ಯ ವೃತ್ತದ ಸಮೀಪದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬೀಳಿಸಿಕೊಂಡು ಹೋಗಿದ್ದ ಮೂರು ಚಿನ್ನದ ನಾಣ್ಯಗಳು ಸಂಚಾರ ಠಾಣೆಯ ಪೇದೆ ನಾಗರಾಜ್ ಅವರಿಗೆ ಸಿಕ್ಕಿತ್ತು. ಕೂಡಲೇ ಅವರು ಅವುಗಳನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ, ವಿಷಯವನ್ನು ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದ್ದಾರೆ. ಬಳಿಕ ಚಿನ್ನದ ನಾಣ್ಯಗಳ ವಾರಸುದಾರರ ಹುಡುಕಾಟಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Transfer Guidelines: ಸರ್ಕಾರಿ ನೌಕರರ ವರ್ಗಾವಣೆಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ; ಜು.9ರವರೆಗೆ ಅವಕಾಶ

ಇದನ್ನು ಗಮನಿಸಿದ ನಾಣ್ಯ ಕಳೆದುಕೊಂಡ ಮಡಿಕೇರಿಯ ಜ್ಯುವೆಲ್ಲರಿ ಅಂಗಡಿಯೊಂದರ ಮಾಲೀಕ ಬಿ.ಸಿ. ಮೋಹನ್ ಅವರು ಠಾಣೆಗೆ ತೆರಳಿ ವಿಚಾರಿಸಿದ್ದಾರೆ. ದೃಢೀಕರಿಸಿದ ನಂತರ ಮಾಲೀಕ ಮೋಹನ್‌ ಅವರು ಕಳೆದುಕೊಂಡಿದ್ದ ಅಂದಾಜು 45 ಸಾವಿರ ಮೌಲ್ಯದ ಚಿನ್ನದ ನಾಣ್ಯಗಳನ್ನು ಠಾಣಾಧಿಕಾರಿ ಶ್ರೀಧರ್ ಹಿಂದಿರುಗಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Exit mobile version