Site icon Vistara News

Madikeri News: ವೇತನ ಪಾವತಿಗಾಗಿ ಒತ್ತಾಯಿಸಿ ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

Protest by guest lecturers demanding payment of salary

ಮಡಿಕೇರಿ: ಬಾಕಿ ಉಳಿದಿರುವ ಕಳೆದ 8 ತಿಂಗಳ ವೇತನ ಪಾವತಿ ಮಾಡುವಂತೆ ಆಗ್ರಹಿಸಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ 40ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು (Guest Lecturers) ತರಗತಿ ಬಹಿಷ್ಕರಿಸಿ, ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಶನಿವಾರಕ್ಕೆ 3ನೇ ದಿನಕ್ಕೆ (Madikeri News) ಕಾಲಿಟ್ಟಿದೆ.

ಮಂಗಳೂರು ವಿಶ್ವವಿದ್ಯಾಲಯ ಅಡಿಯಲ್ಲಿ ಕಾಲೇಜಿನಲ್ಲಿ ಸುಮಾರು 40ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಳೆದ ಎಂಟು ತಿಂಗಳಿನಿಂದ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ಕಾಲೇಜಿನ ಮುಂಭಾಗ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: Karnataka Weather : ಬೇಸಿಗೆ ಆರಂಭದಲ್ಲೇ 40ರ ಗಡಿದಾಟಲಿದ್ಯಾ ಗರಿಷ್ಠ ತಾಪಮಾನ!

ವೇತನ ಕುರಿತು ಕಾಲೇಜು ಗಮನಕ್ಕೆ ತಂದರೆ ವಿಶ್ವವಿದ್ಯಾಲಯ ಬಳಿ ಕೇಳಿ ಎಂದು ವಿಶ್ವವಿದ್ಯಾಲಯ ಬಳಿ ಕೇಳಿದರೆ ಇಂದು ನಾಳೆ ಎಂಬ ಹಾರಿಕೆಯ ಉತ್ತರವನ್ನು ನೀಡುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಕುರಿತು ನಾಲ್ಕೈದು ಬಾರಿ ಮಂಗಳೂರು ವಿವಿಗೆ ತೆರಳಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಾಲೇಜಿನ ಉಪನ್ಯಾಸಕ ಡಾ. ಸೋಮಣ್ಣ ಮಾತನಾಡಿದರು.

ಇದನ್ನೂ ಓದಿ: Uttara Kannada News: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳ ಅಟ್ಟಹಾಸ: ಹರಿಪ್ರಕಾಶ್‌ ಕೋಣೆಮನೆ

ಪ್ರತಿಭಟನೆಯಲ್ಲಿ ಕಾಲೇಜಿನ 40ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.

Exit mobile version