Site icon Vistara News

Vistara News Launch | ಖ್ಯಾತ ಟೆನಿಸ್‌ ಆಟಗಾರ ರೋಹನ್ ಬೋಪಣ್ಣಗೆ ಕಾಯಕ ಯೋಗಿ ಪುರಸ್ಕಾರ

ರೋಹನ್ ಬೋಪಣ್ಣಗೆ

ಟೆನಿಸ್‌ ಕ್ರೀಡಾಕೂಟಗಳಲ್ಲಿ ಕಳೆದ 26 ವರ್ಷಗಳಿಂದ ದೇಶವನ್ನು ಪ್ರತಿನಿಧಿಸುತ್ತಿರುವ, ಹಲವಾರು ಪ್ರಶಸ್ತಿಗಳನ್ನು ಗೆದ್ದು ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದವರು ಕೊಡಗಿನ ಕಲಿ ಶ್ರೀ ರೋಹನ್ ಬೋಪಣ್ಣ. 2017ರ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಟೆನಿಸ್‌ ಜಗತ್ತಿನಲ್ಲಿ ಮಿಂಚಿದ ಇವರು ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ ಜಯಿಸಿದ ಭಾರತದ 4ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಆರಂಭಿಕ ಹಂತದಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಆಡಿದರೂ ಕಾಲಕ್ರಮೇಣ ಡಬಲ್ಸ್‌ನಲ್ಲಿಯೇ ಹೆಚ್ಚಿನ ಸಾಧನೆ ಮಾಡಿದ್ದಾರೆ. 52 ಬಾರಿ ಎಟಿಪಿ ಕೆರಿಯರ್ ಫೈನಲ್ಸ್ ಪ್ರವೇಶಿಸಿರುವ ಶ್ರೀ ಬೋಪಣ್ಣ, ಈ ಪೈಕಿ 22 ಪ್ರಶಸ್ತಿ ಗೆದ್ದಿದ್ದಾರೆ. 2010ರ ಯುಎಸ್ ಓಪನ್ ಗ್ರ್ಯಾನ್‌ಸ್ಲ್ಯಾಮ್ ಟೆನಿಸ್ ಟೂರ್ನಿಯಲ್ಲಿ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಎಟಿಪಿ ವರ್ಲ್ಡ್ ಟೂರ್, ಗ್ರ್ಯಾನ್‌ಸ್ಲ್ಯಾಮ್‌, ಒಲಿಂಪಿಕ್ಸ್, ಡೇವಿಡ್ ಕಪ್ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

2007ರಲ್ಲಿ ಪಾಕಿಸ್ತಾನದ ಆಟಗಾರ ಅಯಿಸಮ್ ಉಲ್ ಖುರೇಷಿ ಜತೆಗೂಡಿ 4 ಚಾಲೆಂಜರ್ಸ್ ಟ್ರೋಫಿ ಗೆದ್ದಿದ್ದು ಬೋಪಣ್ಣ ವಿಶೇಷತೆ. ಬೆಂಗಳೂರಿನಲ್ಲಿ ತಮ್ಮದೇ ಹೆಸರಿನಲ್ಲಿ ಟೆನಿಸ್ ಅಕಾಡೆಮಿ ಸ್ಥಾಪಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | Vistara News Launch | ಫಾರ್ಮಸಿ ಕ್ಷೇತ್ರದಲ್ಲಿ ತಪಸ್ಸು; ಹೃಷಿಕೇಶ್‌ ದಾಮ್ಲೆಗೆ ಕಾಯಕ ಯೋಗಿ ಪ್ರಶಸ್ತಿ

Exit mobile version