Site icon Vistara News

ನೀರಿಗಿಳಿಯೋ ಮುನ್ನ ಎಚ್ಚರ! ಕೊಡಗಿನ ಅಬ್ಬಿ ಜಲಪಾತದಲ್ಲಿ ತೆಲಂಗಾಣದ ಮೂವರು ಪ್ರವಾಸಿಗರ ದುರ್ಮರಣ

ಜಲಪಾತದಲ್ಲಿ ಮೂವರು ಪ್ರವಾಸಿಗರ ದುರ್ಮರಣ

ಕೊಡಗು: ಜಿಲ್ಲೆಯ ಕೋಟೆ ಅಬ್ಬಿ ಜಲಪಾತದಲ್ಲಿ ಮೂವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಜಲಪಾತ ವೀಕ್ಷಣೆ ವೇಳೆ ನೀರಿಗಿಳಿದ ಕುಟುಂಬದ ಸದಸ್ಯರೊಬ್ಬರು ನೀರಿನಲ್ಲಿ ಮುಳುಗುತ್ತಿದ್ದಾಗ ಅವರನ್ನು ರಕ್ಷಿಸಲು ಮುಂದಾದ ಇನ್ನಿಬ್ಬರೂ ಸಾವಿಗೀಡಾಗಿದ್ದಾರೆ.

ತೆಲಂಗಾಣದಿಂದ ಸುಮಾರು 13 ಜನರ ತಂಡ ಟಿಟಿ ವಾಹನದಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದರು. ಕುಶಾಲನಗರದ ಹೋಂಸ್ಟೇಯಲ್ಲಿ ತಂಗಿದ್ದ ಈ ತಂಡದ ಸದಸ್ಯರು ಎದ್ದು  ಮಡಿಕೇರಿ ಹೋಗಿದ್ದಾರೆ. ಅಲ್ಲಿನ ಪ್ರವಾಸಿ ತಾಣಗಳನ್ನು ನೋಡಿಕೊಂಡು ಮಡಿಕೇರಿ ಸಮೀಪದ ಮುಕ್ಕೋಡ್ಲು ಗ್ರಾಮದಲ್ಲಿರುವ ಕೋಟೆ ಅಬ್ಬಿ ಜಲಪಾತಕ್ಕೆ ಹೋಗಿದ್ದರು.

ಎಲ್ಲರು ಕುಳಿತು ಪ್ರಕೃತಿ ಸೌಂದರ್ಯವನ್ನು ವೀಕ್ಷಣೆ ಮಾಡುತ್ತಿದ್ದರು .ಈ ಸಂದರ್ಭದಲ್ಲಿ ಒಬ್ಬರು ನೀರಿಗೆ ಇಳಿದ್ದಿದ್ದಾರೆ. ನೀರಿನ ರಭಸ  ಹೆಚ್ಚಾಗಿದ್ದ ಕಾರಣ ಒಬ್ಬರು ನೀರಿನಲ್ಲಿ  ಮುಳುಗುತ್ತಿದ್ದರು. ಇದ್ದನು ನೋಡಿ ಒಬ್ಬರನ್ನು ರಕ್ಷಣೆ ಮಾಡಲು ಮತ್ತಿಬ್ಬರು  ನೀರಿಗಿಳಿದಿದ್ದಾರೆ. ಪರಿಣಾಮ ಮೂವರಿಗೂ ಈಜು ಬರದ ಕಾರಣ ಮೂವರು ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. 33 ವರ್ಷದ ಶ್ಯಾಮ್, 16 ವರ್ಷದ ಶ್ರೀಹರ್ಷ ಹಾಗೂ 13 ವರ್ಷದ  ಶಾಹಿಂದ್ರ ಮೃತ ದುರ್ದೈವಿಗಳಾಗಿದ್ದಾರೆ.

ಇದನ್ನೂ ಓದಿ | ಅಸ್ಸಾಂನಲ್ಲಿ ಮಳೆ ಅಬ್ಬರ; ಪ್ರವಾಹ, ಭೂಕುಸಿತಕ್ಕೆ 8 ಮಂದಿ ಸಾವು

ಅಕ್ಕಪಕ್ಕದಲ್ಲಿ ಯಾರೂ ಇರಲಿಲ್ಲವಾದರಿಂದ ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು‌ ಶೋಧ ನಡೆಸಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.

ಮೃತದೇಹಗಳನ್ನು ಹೊರ ತೆಗಿಯುತ್ತಿದ್ದಂತೆ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು .  ಮಡಿಕೇರಿಯ  ಶವಾಗಾರದಲ್ಲಿ ಶವ ಪರೀಕ್ಷೆ ಮಾಡಿ ಶವಗಳನ್ನು ಸಂಬಂಧಿಕರಿಗೆ ಕೊಡಲಾಗಿದೆ.

ಇದನ್ನೂ ಓದಿ | ಬಾಗಲಕೋಟೆಯಿಂದ ಕೊಡಗಿನವರೆಗೆ ಮಳೆಯೋ ಮಳೆ: ಹಳ್ಳಿಗರಲ್ಲಿ ಸಂತಸ, ನಗರದಲ್ಲಿ ಸಂಕಟ

Exit mobile version