ಕೋಲಾರ: ಇಲ್ಲಿನ ವೇಮಗಲ್ ಹೋಬಳಿ ಮದ್ದೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಸಿ.ಎಂ ಪ್ರಕಾಶ್ ಎಂಬ ಶಿಕ್ಷಕರನ್ನು ನೇಮಕ (Kolar News) ಮಾಡಲಾಗಿದೆ. ಆದರೆ ಮಕ್ಕಳ ಪೋಷಕರು ಈ ಶಿಕ್ಷಕನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಲವಾರು ಶಾಲೆಗಳಲ್ಲಿ ಕಾರ್ಯನಿರ್ವಹಿಸಿರುವ ಈತ ಶಾಲೆಯ ಹೆಣ್ಣು ಮಕ್ಕಳನ್ನು ದುರಾಲೋಚನೆಯಿಂದ ನಡೆದುಕೊಂಡ ಬಗ್ಗೆ ವರದಿ ಆಗಿವೆ.
ಹೀಗಾಗಿ ಕಾಮುಕ ಶಿಕ್ಷಕ ನಮ್ಮ ಶಾಲೆಗೆ ಬೇಡವೇ ಬೇಡ ಎಂದು ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಶಾಲೆಗೆ ಬೀಗ ಹಾಕಿ ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಪೋಷಕರು ಪ್ರತಿಭಟಿಸುತ್ತಿದ್ದಾರೆ. ಆ ಶಿಕ್ಷಕನನ್ನು ಬೇರೆ ಶಾಲೆಗೆ ವರ್ಗಾಯಿಸಬೇಕು ಅಥವಾ ಕಚೇರಿ ಕೆಲಸಕ್ಕೆ ಅವರನ್ನು ನೇಮಿಸಬೇಕು. ಕಾಮುಕ ಶಿಕ್ಷಕ ಇದ್ದರೆ ಶಾಲೆಯಲ್ಲಿ ಕುಳಿತು ಪಾಠ ಕೇಳುವುದಿಲ್ಲ ಎಂದು ಶಾಲೆಯ ಮಕ್ಕಳು ಹಠ ಮಾಡುತ್ತಿದ್ದಾರೆ ಎಂದು ಪೋಷಕರು ಧರಣಿ ನಡೆಸಿದ್ದಾರೆ.
ಹನಿಮೂನ್ ಹೇಗಿರುತ್ತೆ ಎಂದಿದ್ದ ಶಿಕ್ಷಕ
2022ರ ಡಿಸೆಂಬರ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೈ ಕೈ ಮುಟ್ಟಿ ಮಾತನಾಡಿಸಿ ಹನಿಮೂನ್ ಹೇಗಿರುತ್ತೆ ಎಂದು ಕಾಮುಕ ಶಿಕ್ಷಕ ಪ್ರಕಾಶ್ ಪ್ರಶ್ನೆ ಮಾಡಿದ್ದ. ಕೋಲಾರದ ನರಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕನಾಗಿದ್ದ ಪ್ರಕಾಶ್, ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: Apoorva Rai Allegation: ಮಿಸೆಸ್ ಯೂನಿವರ್ಸ್ ಪೇಜೆಂಟ್ ಬಗ್ಗೆ ಮೈಸೂರಿನ ಸ್ಪರ್ಧಿ ಅಪೂರ್ವ ರೈ ನೇರವಾಗಿ ಆರೋಪಿಸಿದ್ದೇನು?
ಹೀಗಾಗಿ ಶಿಕ್ಷಕ ಪ್ರಕಾಶನನ್ನು ಅಮಾನತ್ತು ಮಾಡಲಾಗಿತ್ತು. ಈಗ ಮದ್ದೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಶಿಕ್ಷಕನಾಗಿ ನೇಮಿಸಿರುವ ಇಲಾಖೆ ನಿರ್ಧಾರಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.