ಕೋಲಾರ: ಪ್ರಾಮಾಣಿಕತೆಗೆ ನಾಯಿಯನ್ನು ಉಲ್ಲೇಖಿಸಲಾಗುತ್ತದೆ. ಅನ್ನ ಹಾಕಿದ ದಣಿಗೆ ನಿಷ್ಠವಾಗಿರುವ ನಾಯಿಯ ಮತ್ತೊಂದು ಉದಾಹರಣೆ ಇದೀಗ ಬೆಳಕಿಗೆ ಬಂದಿದೆ. ಬಂಗಾರಪೇಟೆ ರಸ್ತೆಯ ಬೀರಂಡಹಳ್ಳಿಯಲ್ಲಿರುವ ಕಿರುಚಿತ್ರ ನಿರ್ಮಾಪಕ ವಿ. ವಿಲಾಸ್ ಅವರ ಮೇಲೆ ನಾಗರಹಾವಿನ ದಾಳಿ ವಿರುದ್ಧ ಸಾಕುನಾಯಿ ಹೋರಾಡಿ ರಕ್ಷಣೆ ಮಾಡಿದೆ.
ಬೆಂಗಳೂರಿನ ನಿವಾಸಿಗಳಾದ ವಿಲಾಸ್ ಮತ್ತು ಅವರ ಪತ್ನಿ ಬೀರಂಡಹಳ್ಳಿಯಲ್ಲಿ ಜಮೀನು ಹೊಂದಿದ್ದಾರೆ. ತಮ್ಮ ಜಮೀನಿಗೆ ಆಗಾಗ್ಗೆ ತೆರಳಿ ವಾಸ್ತವ್ಯ ಹೂಡಿ ಬರುತ್ತಿದ್ದರು. ಜಮೀನನ್ನು ಕಾಲಯ ಐದು ನಾಯಿಮರಿಗಳನ್ನು ಸಾಕಿದ್ದಾರೆ. ಸತ ಮಕ್ಕಳಂತೆ ನಾಯಿಗಳನ್ನು ಸಾಕುವ ದಂಪತಿ, ಅವುಗಳಿಗೆ ಅನೇಕ ತರಬೇತಿಯನ್ನೂ ನೀಡಿದ್ದಾರೆ.
ಇದನ್ನೂ ಓದಿ | ಇಂಗ್ಲಿಷ್ ಮಾತಿನ ಅಪಾರ್ಥ, ಮೈಮೇಲೆ ಎರಗಿದ ಪಿಟ್‌ಬುಲ್ ನಾಯಿ!
ಗುರುವಾರ ಜಮೀನಿನಲ್ಲಿದ್ದ ವಿಲಾಸ್ ಹಿಂದೆ 4 ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿತು. ಆಗ ಅವರಿಗೆ ಏನು ಮಾಡಬೇಕು ಎಂದು ದೋಚಿಸದೇ ಆಕಡೆ ಈಕಡೆ ಅಲ್ಲಾಡದೆ ನಾಗರಹಾವಿನೊಡನೆ ಮುಖಾಮುಖಿಯಾಗಿದ್ದಾರೆ. ಈದನ್ನು ವಿಲಾಸ್ ಅವರ ಕ್ಯಾಸಿಯೋ ಹೆಸರಿನ ಮೂರು ವರ್ಷದ ಅಮೆರಿಕನ್ ಬುಲ್‌ಡಾಗ್ ನೋಡಿದೆ. ಕೆಲವೇ ಸೆಕೆಂಡುಗಳಲ್ಲಿ ಓಡಿ ಹೋಗಿ ಹಾವಿನ ಮೇಲೆ ದಾಳಿ ಮಾಡಿದೆ. ಕೆಲ ನಿಮಿಷ ಹೋರಾಟ ಮಾಡಿದ ನಾಯಿ, ಸೋಲನ್ಹಾನೊಪ್ವುಪಿಲ್ಲ. ಕೊನೆ ಹಾವು ಸೋತು ಹೊಲದೊಳಗೆ ಕಣ್ಮರೆಯಾಗಿದೆ. ಹೀಗೆ ಮುದ್ದು ಮರಿ ತನ್ನ ಯಜಮಾನನ ಜೀವವನ್ನು ಉಳಿಸಿದೆ.
ಹಾವಿನೊಡನೆ ಕಾದಾಟದಲ್ಲಿ ತನ್ನ ಪ್ರೀತಿಯ ನಾಯಿಗೆ ಗಾಯವಾಗಿದೆ ಎಂದು ಅರಿತುಕೊಂಡ ವಿಲಾಸ್, ಕ್ಯಾಸಿಯೊವನ್ನು ಬಂಗಾರಪೇಟೆಯ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದನ್ನು ಉಳಿಸಲು ಸಾಧ್ಯವಾಗಲಿಲ್ಲ. ಜಮೀನಿನಲ್ಲಿಯೇ ಕ್ಯಾಸಿಯೋ ಸಮಾಧಿ ಮಾಡಲಾಯಿತು. ನಂತರ ಹಾವು ಕೂಡ ಹೊಲದಲ್ಲಿ ಶವವಾಗಿ ಪತ್ತೆಯಾಗಿದೆ.
ಇದನ್ನೂ ಓದಿ | ಮನೆಯ ಗೇಟಿನ ಪೋಸ್ಟ್ ಬಾಕ್ಸ್ ಒಳಗೆ ಬೆಚ್ಚಗೆ ಮಲಗಿತ್ತು ತೋಳದ ಹಾವು!