ಚಿಕ್ಕಬಳ್ಳಾಪುರ: ಶ್ರೀನಿವಾಸಪುರದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಟ್ರೆಕ್ಕಿಂಗ್‌ಗೆ ಹೋಗಿದ್ದ ವೇಳೆ ಅವರ ಮೇಲೆ ಹೆಜ್ಜೇನು ದಾಳಿ (Honeybee attack) ಮಾಡಿದ್ದು, 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದ ಖಾಸಗಿ ಬಿ.ಜಿ ವೇಣು ಶಾಲೆಯ ವಿದ್ಯಾರ್ಥಿಗಳು ಚಿಂತಾಮಣಿಯ ತಪಥೇಶ್ವರ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಬಂದಿದ್ದರು.
ಮಕ್ಕಳು ಬೆಳಗ್ಗೆ ಹನ್ನೊಂದು ಗಂಟೆ ವೇಳೆ ಬೆಟ್ಟಕ್ಕೆ ಹತ್ತಿದ್ದರು. ಅಲ್ಲೆಲ್ಲ ಆಟವಾಡಿ, ಪ್ರಕೃತಿಯ ನಡುವೆ ಬೆರೆತು ಸಂಭ್ರಮಿಸಿ ಮಧ್ಯಾಹ್ನ ಮೂರು ಗಂಟೆಯ ವೇಳೆ ಬೆಟ್ಟದಿಂದ ಇಳಿಯಲು ಆರಂಭಿಸಿದ್ದರು. ಆಗ ಒಮ್ಮಿಂದೊಮ್ಮೆಗೆ ಹೆಜ್ಜೇನುಗಳು ದಾಳಿ ಮಾಡಿವೆ.
ಹೆಜ್ಜೇನು ದಾಳಿಗೆ ಕಂಗಾಲಾಗಿ ಪರದಾಡಿದ ವಿದ್ಯಾರ್ಥಿಗಳ ರಕ್ಷಣೆಗೆ ಕೆಂದನಹಳ್ಳಿ ಗ್ರಾಮಸ್ಥರು ಧಾವಿಸಿದರು. ಕೂಡಲೇ ಆಸ್ಪತ್ರೆ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ಕೂಡಲೇ ಅವರನ್ನು ಚಿಂತಾಮಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಅದೃಷ್ಟವಶಾತ್ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಮಕ್ಕಳ ನೋವಿಗೆ ಊರಿನವರು ಸ್ಪಂದಿಸಿದ ರೀತಿ ಅನನ್ಯವಾಗಿತ್ತು. ಆಂಬ್ಯುಲೆನ್ಸ್ ಬರುವುದು ತಡವಾದಾಗ ಕೆಲವರು ತಮ್ಮ ಬೈಕ್‌ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದರು. ಕೆಲವರಂತೂ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಓಡಿದ್ದು ಕಂಡುಬಂತು.
ರಾಮನಗರದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಕರಡಿ ಸೆರೆ; ಗ್ರಾಮಸ್ಥರ ನಿಟ್ಟುಸಿರು
ರಾಮನಗರ: ಇಲ್ಲಿನ ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆ (forest department) ಇರಿಸಿದ್ದ ಬೋನಿಗೆ ಕರಡಿಯೊಂದು (bear) ಬಿದ್ದಿದೆ. ಹಲವು ದಿನಗಳಿಂದ ಕಾಡಂಚಿನ (Wild Animals Attack) ಗ್ರಾಮಸ್ಥರಿಗೆ ಕರಡಿಯು ಉಪಟಳ ನೀಡುತ್ತಿತ್ತು. ಹೀಗಾಗಿ ಗ್ರಾಮಸ್ಥರು ಕರಡಿ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ಕರಡಿ ಓಡಾಡುವ ಜಾಗದಲ್ಲಿ ಬೋನು ಇರಿಸಲಾಗಿತ್ತು. ಸೋಮವಾರದಂದು ಸುಮಾರು 6 ವರ್ಷ ವಯಸ್ಸಿನ ಹೆಣ್ಣು ಕರಡಿ ಸೆರೆಯಾಗಿದೆ.
ಒಂದು ವಾರದ ಹಿಂದೆಯಷ್ಟೇ ಸುಮಾರು 10 ವರ್ಷದ ಗಂಡು ಕರಡಿ ಸೆರೆಯಾಗಿತ್ತು. ಕರಡಿ ಬೋನಿಗೆ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕರಡಿಯನ್ನು ಅಲ್ಲಿಂದ ಸ್ಥಳಾಂತರ ಮಾಡಿದ್ದಾರೆ.
ಇದನ್ನೂ ಓದಿ : Land Dispute: ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಹಲವರಿಗೆ ಗಂಭೀರ ಗಾಯ