ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದೇಶದಲ್ಲಿ ಹೆಚ್ಚುತ್ತಿರುವ ಮಾನವ ಕಳ್ಳಸಾಗಾಣಿಕೆ (human trafficking) ವಿರುದ್ಧ ಅರಿವು ಮೂಡಿಸುವ ʻಸ್ವಾತಂತ್ರ್ಯಕ್ಕಾಗಿ ನಡಿಗೆʼ (Walk for Freedom) ಕಾರ್ಯಕ್ರಮವನ್ನು ಅಕ್ಟೋಬರ್ 14ರಂದು ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಇನ್ಫೋಕಾಮ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Wistron Infocomm Manufacturing India Private Limited) ವತಿಯಿಂದ ಈ ಜಾಥಾ ನಡೆಯಿತು. 50 ದೇಶಗಳಲ್ಲಿ 500 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಣೆ ಜಾಗೃತಿ ಕಾರ್ಯಕ್ರಮ ಕೋಲಾರದಲ್ಲೂ ನಡೆಯತು. ಇದೇ ಮೊದಲ ಬಾರಿಗೆ ಉತ್ಪಾದನಾ ಕಂಪನಿಯೊಂದು ಇಂತಹ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದೆ.
ಈ ನಡಿಗೆಯಲ್ಲಿ 700ಕ್ಕೂ ಹೆಚ್ಚು ವಿಸ್ಟ್ರಾನ್ ನೌಕರರು ಭಾಗಿಯಾಗಿದ್ದರು. ಕ್ಯಾಂಪಸ್‌ನೊಳಗೆ ಸುಮಾರು ಒಂದು ಕಿ.ಮೀ.. ಜಾಥಾ ನಡೆಸಿ ಮಾನವ ಕಳ್ಳಸಾಗಾಣಿಕೆ ಸಂತ್ರಸ್ತರ ಪರ ಧ್ವನಿ ಎತ್ತಿದರು. ಉದ್ಯೋಗಿಗಳಿಗೆ ಕಳ್ಳಸಾಗಾಣಿಕೆಯನ್ನು ಗುರುತಿಸಲು ಮತ್ತು ತಡೆಯಲು ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಮಾನವ ಕಳ್ಳಸಾಗಾಣಿಕೆಯಲ್ಲಿ ಹೆಚ್ಚು ತೊಂದರೆಗೆ ಒಳಪಡುವವರು ಮಕ್ಕಳು ಹಾಗೂ ಮಹಿಳೆಯರು. ಭಿಕ್ಷಾಟನೆ ಹಾಗೂ ಇತರ ದುಷ್ಕೃತ್ಯಗಳಿಗೆ ಬಳಸಿಕೊಳ್ಳಲು ಮಾನವ ಕಳ್ಳಸಾಗಾಣಿಕೆ ನಡೆಯುತ್ತದೆ. ಈ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ವಿಸ್ಟ್ರಾನ್ ಮಾಡಿದೆ.
ಇದನ್ನೂ ಓದಿ: Vijayanagara News : ವಿಜಯನಗರದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ
ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (2022) ಪ್ರಕಾರ, ಪ್ರಪಂಚದಾದ್ಯಂತ 49.6 ಮಿಲಿಯನ್ ಜನರು ಉದ್ಯೋಗಿಗಳು, ಕಾರ್ಮಿಕರು, ಬಲವಂತದ ಮದುವೆಗಳು ಮತ್ತು ಶೋಷಣೆ ಸೇರಿದಂತೆ ಆಧುನಿಕ-ದಿನದ ಗುಲಾಮಗಿರಿಯ ವಿವಿಧ ರೂಪಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (2021) ಪ್ರಕಾರ 2021ರಲ್ಲಿ ಪ್ರತಿದಿನ 8 ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗಿದೆ.
ಭಾರತದಲ್ಲಿ 2021 ರಲ್ಲಿ ಪ್ರತಿ ದಿನ 8 ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಕಳ್ಳಸಾಗಣೆಯ ನೈಜತೆಯ ಬಗ್ಗೆ ನಮಗೆ ಶಿಕ್ಷಣ ನೀಡಿದಾಗ ಮತ್ತು ಸಹಾಯವಾಣಿಗಳಿಗೆ ಕರೆ ಮಾಡಲು ನಾವು ಕ್ರಮ ಕೈಗೊಂಡಾಗ ಇದನ್ನು ತಡೆಯಲು ಸಾಧ್ಯ ಎನ್ನುವುದು ನಂಬಿಕೆ. ಹೀಗಾಗಿ ಇದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.