Site icon Vistara News

Konkan Railway: ಕೊಂಕಣ ರೈಲ್ವೆ ಮಾರ್ಗಗಳಿಗೆ ಮಾನ್ಸೂನ್ ವೇಳಾಪಟ್ಟಿ ಬಿಡುಗಡೆ; ಯಾವ ಸಮಯಕ್ಕೆ ಯಾವ ರೈಲು?

IMPLEMENTATION OF MONSOON TIME TABLE OVER KONKAN RAILWAY

IMPLEMENTATION OF MONSOON TIME TABLE OVER KONKAN RAILWAY

ಬೆಂಗಳೂರು: ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾನ್ಸೂನ್ ವೇಳಾಪಟ್ಟಿಯನ್ನು ಕೊಂಕಣ ರೈಲ್ವೆ ಪ್ರಕಟಿಸಿದೆ. ಜೂನ್ 10 ರಿಂದ ಅಕ್ಟೋಬರ್ 31 2023 ರವರೆಗೆ ಈ ಪರಿಷ್ಕೃತ ವೇಳಾಪಟ್ಟಿ ಜಾರಿಯಲ್ಲಿ ಇರಲಿದೆ.

ರೈಲು ಸಂಖ್ಯೆ 12742/12741 ವಾಸ್ಕೋ ಡ ಗಾಮಾ – ಪಾಟ್ನಾ- ವಾಸ್ಕೋ-ಡ ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್‌, ರೈಲು ಸಂಖ್ಯೆ 16516/16515 ಕಾರವಾರ-ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ಅದೇ ರೀತಿ ರೈಲು ಸಂಖ್ಯೆ 11097/11098 ಪುಣೆ-ಎರ್ನಾಕುಲಂ-ಪುಣೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 16596/16596 ಕಾರವಾರ-ಕೆ.ಎಸ್‌.ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲ ರೈಲುಗಳು ಇನ್ನು ಮುಂದೆ ಮಳೆಗಾಲದ ಸಮಯದ ಪ್ರಕಾರ ಚಲಿಸುತ್ತವೆ.

ಇನ್ನು ಮಾನ್ಸೂನ್‌ ವೇಳಾಪಟ್ಟಿ ಪ್ರಕಟಿಸಲು ಪ್ರಮುಖ ಕಾರಣವೆಂದರೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಈ ಸಮಯದಲ್ಲಿ ಹಳಿ ಮೇಲೆ ಮರ ಬೀಳುವುದು, ನೀರು ನಿಲ್ಲುವುದು ಸೇರಿದಂತೆ ಮಳೆ ಅನಾಹುತಗಳು ಹೆಚ್ಚು ಸಂಭವಿಸುತ್ತವೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: Weather Report: 48 ಗಂಟೆಯಲ್ಲಿ ಈ 9 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಸಂಜೆ ಮಳೆ ಕಾಟ

ಪ್ರಯಾಣಿಕರು ಈ ಮೇಲಿನ ರೈಲುಗಳ ಮಾನ್ಸೂನ್ ವೇಳಾಪಟ್ಟಿ ತಿಳಿಯಲು ಈ ಲಿಂಕ್‌ ಮೇಲೆ ಕ್ಲಿಕ್ ಮಾಡಬಹದು. ಅಥವಾ ಇಲಾಖೆಯ ಅಧಿಕೃತ ವೆಬ್‌ಸೈಟ್‌ನ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ಈ ಮೂಲಕ ಯಾವ ರೈಲು ಯಾವ ಸಮಯಕ್ಕೆ ನಿರ್ಗಮಿಸುತ್ತದೆ ಎಂಬುದನ್ನು ತಿಳಿಯಬಹುದಾಗಿದೆ.

Exit mobile version